ವಿಶ್ವೇಶ್ವರ
ಭಟ್ ರವರ ಸು೦ದರವಾದ ಹಾಗೂ ಅಥ೯
ಪೂಣ೯ ನುಡಿ ಮುತ್ತುಗಳು
.
*
ನಮ್ಮ
ಜೀವನದಲ್ಲಿ ಸಂಭವಿಸಬಹುದಾದ
ದೊಡ್ಡ ದುರಂತವೆಂದರೆ ಖಂಡಿತವಾಗಿಯೂ
ಸಾವು ಅಲ್ಲ.
ನಾವು
ಬದುಕಿರುವಾಗ ನಮ್ಮೊಳಗಿನ
ಅಂತಃಸತ್ವವನ್ನು ಸಾಯಗೊಟ್ಟಿರುತ್ತೇವಲ್ಲ,
ಅದು
ನಿಜವಾಗಿಯೂ ದೊಡ್ಡ ದುರಂತ.
*
ಪರ್ಶಿಯನ್
ಗಾದೆ ಮಾತೊಂದನ್ನು ಕೇಳಿದ ಬಳಿಕ
ನನ್ನ ಜೀವನದಲ್ಲಿ ಕೊರಗು ಎಂಬುದು
ಇಲ್ಲವೇ ಇಲ್ಲ.
ಅದೇನಪ್ಪಾ
ಅಂದ್ರೆ-
ನನಗೆ
ಬೂಟುಗಳೇ ಇಲ್ಲವಲ್ಲಾ ಎಂದು
ಅಳುತ್ತಿದ್ದೆ.
ಅಪ್ಪನನ್ನು
ಕೇಳಿದೆ.
ಆತ
ತೆಗೆಸಿಕೊಡಲಿಲ್ಲ.
ಒಂದು
ಜೊತೆ ಬೂಟು ಖರೀದಿಸಲಾಗದ ದರಿದ್ರ
ಜೀವನ ಎಂದು ಬೇಸರಿಸಿಕೊಂಡೆ.
ಇದು
ಜೀವನವಾ ಅನಿಸಿತು.
ಹಾಗೆ
ಯೋಚಿಸುತ್ತಿರುವಾಗ ಎರಡೂ ಕಾಲುಗಳೇ
ಇಲ್ಲದ,
ಆದರೆ
ಸಂತಸದಿಂದ ಇರುವ ವ್ಯಕ್ತಿಯೊಬ್ಬನನ್ನು
ನೋಡಿಕೊಂಡೆ.
ನಾನು
ಪರಮಸುಖಿಯೆನಿಸಿತು.
*
ಅಪರಿಚಿತರಾದವರಿಗೆ
ಪುಟ್ಟ ಸಹಾಯ ಮಾಡಿ.
ಅವರು
ತಟ್ಟನೆ ನಿಮ್ಮ ಸ್ನೇಹಿತರಾಗುತ್ತಾರೆ.
ಟೋಲ್
ಗೆಟನಲ್ಲಿ
ನಿಮ್ಮ
ಹಿಂದಿನ ಕಾರಿನವರ ಹಣವನ್ನೂ ನೀವೇ
ಪಾವತಿಸಿ ನೋಡಿ.
ನೀವ್ಯಾರೆಂದು
ಆತ ಪರಿಚಯಿಸಿಕೊಳ್ಳದೇ ಹೋಗಲಿಕ್ಕಿಲ್ಲ.
ಪುಟ್ಟ
ಕಾರಣಕ್ಕೆ ನಿಮಗೊಂದು ಸ್ನೇಹ
ದೊರಕಬಹುದು.
*
ಹೇಳುವುದು
ಸುಲಭ.
ಆದರೆ
ಆಚರಣೆಗೆ ತರುವುದು ಕಷ್ಟ.
ಅದೇನೆಂದರೆ
ಚಿಂತೆ ಬಿಡಿ ಎಂಬ ಉಪದೇಶ.
ಆದರೂ
ಈ ನಿಯಮ ಪಾಲಿಸಿ.
ಯಾವುದಕ್ಕೆ
ನಾವು ಚಿಂತಿಸುತ್ತೇವೋ ಬಹುತೇಕ
ಸಂದರ್ಭಗಳಲ್ಲಿ ಅವು ಘಟಿಸುವುದೇ
ಇಲ್ಲ.
ಚಿಂತಿಸಿದ್ದೊಂದೇ
‘ಲಾಭ’!
*
ನೀವು
ನಿಮ್ಮ ಮಕ್ಕಳಿಗೆ ಕೊಡಬಹುದಾದ
ದೊಡ್ಡ ಕೊಡುಗೆಯೆಂದರೆ ಆಟಿಕೆಯಲ್ಲ.
ಚಾಕೋಲೇಟ್
ಅಲ್ಲ.
ಆದರೆ
ನಿಮ್ಮ ಸಮಯ.
ನಾವು
ಅದೊಂದನ್ನು ಬಿಟ್ಟು ಮಿಕ್ಕಿದ್ದೆಲ್ಲವನ್ನೂ
ಕೊಡುತ್ತೇವೆ.
ಅಲ್ಲಿಗೆ
ನಮ್ಮ ಕರ್ತವ್ಯ ಮುಗಿಯಿತೆಂದು
ತಿಳಿಯುತ್ತೇವೆ.
ನಿಮ್ಮ
ಸಮಯಕ್ಕಿಂತ ದೊಡ್ಡ ಕೊಡುಗೆ
ಮತ್ತೊಂದಿಲ್ಲ.
*
ಜೀವನದಲ್ಲಿ
ದೊಡ್ಡ ಕೆಲಸ,
ಕಾರ್ಯವೆಂಬುದು
ಇಲ್ಲವೇ ಇಲ್ಲ.
ದೊಡ್ಡ
ಪ್ರೀತಿಯಿಂದ ಮಾಡಿದ ಎಷ್ಟೇ ಸಣ್ಣ
ಕೆಲಸವಾದರೂ ಅದು ದೊಡ್ಡ ಕೆಲಸ,
ಕಾರ್ಯವೇ.*
ಜೀವನದಲ್ಲಿ
ಸಣ್ಣ ಸಂಗತಿಗಳೇ ದೊಡ್ಡವು.
ಮನೆಗೆಲಸದಾಕೆಗೆ
ಸಂಬಳ ಕೊಡದವ ಕಚೇರಿಯಲ್ಲಿ
ಸಿಬ್ಬಂದಿಯನ್ನೂ ಸತಾಯಿಸುತ್ತಾನೆ.
ನಿಮ್ಮ
ಸ್ನೇಹಿತರಿಗೆ ನೀವು ಸೈಟು,
ಮನೆ
ಕೊಡದಿರಬಹುದು.
ಆದರೆ
ಒಂದು ಪುಟ್ಟ ಕೈಗಡಿಯಾರ,
ಪುಸ್ತಕ,
ಪೆನ್ನು
ಕೊಡದಿರುವಷ್ಟು ಯಾರೂ ಬಡವರಲ್ಲ.
ಆಗಾಗ
ಗಿಫ್ಟಗಳನ್ನು ಕೊಡುತ್ತೀರಿ.
*
ನಿಮ್ಮ
ಜೊತೆಗೆ ಸದಾ ಒಂದು ಪುಸ್ತಕವನ್ನಿಟ್ಟುಕೊಳ್ಳಿ.
ಎಂದಿಗೂ
ನೀವು ಏಕಾಂಗಿ ಎಂದೆನಿಸುವುದಿಲ್ಲ.
ಬೋರು
ನಿಮ್ಮ ಸನಿಹ ಸುಳಿಯುವುದಿಲ್ಲ.
*
ನೀವು
ಎಷ್ಟು ದಿನ ಬದುಕಿರುತ್ತೀರೋ,
ಏನಾದರೂ
ಹೊಸತನ್ನು ಕಲಿಯುತ್ತಿರಿ.
ನೂರು
ವರ್ಷ ಬಾಳಿದರೂ ಅದೆಷ್ಟು ಕಡಿಮೆ
ವರ್ಷ ಬದುಕಿನೆಂದು ನಿಮಗನಿಸುತ್ತದೆ.
*
ಸಾಧ್ಯವಾದರೆ
ನಿಮ್ಮ ಚಪ್ಪಲಿ,
ಬೂಟು
ತೆಗೆದಿಟ್ಟು ಹಸಿರು ಹುಲ್ಲಿನ
ಮೇಲೆ ನಡೆಯಿರಿ.
ಸ್ವಲ್ಪ
ದೂರ ನಡೆಯುತ್ತಿರುವಂತೆ ನಿಮಗೆ
ಹಿತವೆನಿಸುತ್ತದೆ.
ಈ
ಪುಟ್ಟ ಹುಲ್ಲಿನ ಗಿಡಗಳನ್ನು
ನಾನು ಸಾಯಿಸುತ್ತಿದ್ದೇನಲ್ಲ
ಎಂದು ನಿಮಗೆ ಬೇಸರವಾಗುತ್ತದೆ.
ಈ
ಬೇಸರವೇ ನಿಜವಾದ ಕಾಳಜಿ.
*
ಹೂಗಳು
ಗಿಡದಲ್ಲಿದ್ದರೆ ಚೆಂದ.
ಅವನ್ನು
ಕೊಯ್ದ ಬಳಿಕ ಗಿಡದ ಸೌಂದರ್ಯ
ಕುಗ್ಗುತ್ತದೆ.
ಹೂವುಗಳು
ಬಾಡುತ್ತವೆ.
ಪ್ರಕೃತಿಯ
ಸಣ್ಣ ಸಣ್ಣ ವಿಚಿತ್ರಗಳು ನಮ್ಮಲ್ಲಿ
ಬೆರಗನ್ನುಂಟು ಮಾಡಬಲ್ಲವು.
*
ಕುರಿಮಂದೆಯಂತಿರುವ
ಜನಜಂಗುಳಿಯನ್ನು ಎಂದಿಗೂ ಅನುಸರಿಸಿ
ನಡೆಯಬೇಡಿ.
ಸಿನಿಮಾದಲ್ಲಿನ
ಜನಜಂಗುಳಿಯನ್ನು ಅನುಸರಿಸಿದರೆ
ಊ್ಢ್ಝಡಿ(ನಿರ್ಗಮನ
ಬಾಗಿಲು)
ತಲುಪಿರುತ್ತೀರಿ.
ಎಲ್ಲರೂ
ಕೈ ಎತ್ತುವಾಗ ನಾವೂ ಕೈ ಎತ್ತುವುದು
ಬಹಳ ಸುಲಭ.
ಎತ್ತದಿರುವುದೇ
ಕಷ್ಟ.
*
ಸದಾ
ಒಳ್ಳೆಯ ಕೆಲಸವನ್ನೇ ಏಕೆ ಮಾಡಬೇಕು?
ಹೂವುಗಳನ್ನು
ಕೊಡುವ ಕೈ ಸದಾ ಪರಿಮಳವನ್ನು
ಸೂಸುತ್ತಿರುತ್ತದೆ.
ಕೈಗೆ
ಜೇನುತುಪ್ಪ ಅಂಟಿಕೊಂಡಿದ್ದರೆ
ಯಾರೂ ಕೈ ನೆಕ್ಕದೇ ತೊಳೆದುಕೊಳ್ಳುವುದಿಲ್ಲ.
*
ನಿಮ್ಮೊಂದಿಗೆ
ಸದಾ ಇಬ್ಬರು ವೈದ್ಯರಿದ್ದಾರೆ.
ನಿಮಗೆ
ಗೊತ್ತಿಲ್ಲದಂತೆ.
ಒಬ್ಬರು
ಬಲಗಾಲು,
ಮತ್ತೊಬ್ಬರು
ಎಡಗಾಲು.
ಇವರಿಬ್ಬರ
ಜತೆ ನೀವು ದಿನಕ್ಕೆ ಎರಡು ಮೈಲಿ
ಹೆಜ್ಜೆ ಹಾಕಿ.
ರೋಗ
ನಿಮ್ಮ ಹತ್ತಿರ ಸುಳಿದರೆ ನೋಡಿ.
*
ನೀವೆಷ್ಟೇ
ಪ್ರಸಿದ್ಧರಾಗಿ.
ಅದು
ಶಾಶ್ವತವಲ್ಲ.
ಒಲಿಂಪಿಕ್ಸ್
ಕ್ರೀಡಾಕೂಟ ಮುಗಿದ ಸ್ವಲ್ಪ ದಿನಗಳ
ನಂತರ ಬಂಗಾರ ಗೆದ್ದ ಕ್ರೀಡಾಪಟುಗಳನ್ನೂ
ಜನ ಮರೆಯುತ್ತಾರೆ.
ಚಂದ್ರನ
ಮೇಲೆ ಮೊದಲಿಗೆ ಕಾಲಿಟ್ಟವರೂ ಕೆಲ
ದಿನಗಳ ಬಳಿಕ ನೇಪಥ್ಯಕ್ಕೆ
ಸರಿಯುತ್ತಾರೆ.
ಜನಮಾನಸದಿಂದ
ದೂರವಾದ ಮಾತ್ರಕ್ಕೆ ಜೀವನ ಮುಗಿಯಿತು
ಎಂದಲ್ಲ.
ಅದಕ್ಕಾಗಿ
ಹೊಸ ಹೊಸ ಸಾಹಸಕ್ಕೆ ನಮ್ಮನ್ನು
ಅಣಿಗೊಳಿಸಿಕೊಳ್ಳಬೇಕು.
*
ಸದಾ
ಮನೆ,
ಮಂದಿಯ,
ನಿಮ್ಮ
ಮಕ್ಕಳ ಹಾಗೂ ನಿಮ್ಮ ಫೋಟೋ
ತೆಗೆಯುತ್ತೀರಿ.
ವರ್ಷಕ್ಕೆ
ಕನಿಷ್ಠ ಐದಾರು ಆಲ್ಬಮ್ಗಳನ್ನು
ಸಂಗ್ರಹಿಸಿಡಿ.
20-30 ವರ್ಷಗಳ
ಬಳಿಕ ಇದೊಂದು ಅಮೂಲ್ಯ ನೆನಪುಗಳ
ಆಗರವಾಗಿರುತ್ತದೆ.
ನೀವು
ನಿಮ್ಮ ಮಕ್ಕಳಿಗೆ ಕೊಡಬಹುದಾದ
ಉತ್ತಮ ಕೊಡುಗೆಗಳಲ್ಲಿ ಸಿಹಿ
ನೆನಪು ಸಹ ಒಂದು.
*
ಸರಿಯಾದ
ಸಮಯ,
ಸಂದರ್ಭ,
ವ್ಯಕ್ತಿಗಳ
ಮುಂದೆ ಸಿಟ್ಟು ಮಾಡಿಕೊಳ್ಳುವುದನ್ನು
ಕಲಿತರೆ ನಿಮ್ಮ ಮನಸ್ಸನ್ನು
ಹಿಡಿತದಲ್ಲಿಟ್ಟುಕೊಂಡಿದ್ದೀರೆಂದೇ
ಅರ್ಥ.
ಸಿಟ್ಟು
ಸಹ ಸುಂದರ ಹಾಗೂ ಸಾರ್ಥಕವೆನಿಸುವುದು
ಆಗಲೇ.
*
ವರ್ಷದಲ್ಲಿ
ಒಂದು ವಾರ ಮರ,
ಗಿಡ,
ನದಿ,
ಗುಡ್ಡ,
ಬೆಟ್ಟದಲ್ಲಿ
ಕಳೆಯಿರಿ.
ಮನುಷ್ಯರಿಗಿಂತ
ಇವು ಇಷ್ಟೊಂದು ಸುಂದರವಾಗಿವೆಯೆಂಬುದು
ಗೊತ್ತಾಗುತ್ತದೆ.
*
ನಿದ್ದೆ
ಮಾಡಬೇಕೆನಿಸಿದಾಗ ಮತ್ತೇನನ್ನೂ
ಮಾಡಬೇಡಿ.
ಚೆನ್ನಾಗಿ
ನಿದ್ದೆ ಮಾಡಿ.
ನಿದ್ದೆಗಿಂತ
ಸುಖ ಇನ್ನೊಂದಿಲ್ಲ.
ಆದರೆ
ಇದನ್ನು ಎಷ್ಟು ಮಾಡಬೇಕೆಂಬುದು
ಗೊತ್ತಿರಲಿ.
*
ಮಳೆಗಾಗಿ
ಪ್ರಾರ್ಥನೆ,
ಜಪ,
ಯಾಗ
ಮಾಡುವುದು ತಪ್ಪಲ್ಲ.
ಆದರೆ
ಹೀಗೆ ಮಾಡುವಾಗ ಕೈಯಲ್ಲೊಂದು
ಕೊಡೆಯಿರಲಿ.
ನಾವು
ಮಾಡುವ ಕೆಲಸದ ಪರಿಣಾಮವೇನೆಂಬುದು
ನಮಗೆ ತಿಳಿದಿರಬೇಕು.
*
ಸಾಧ್ಯವಾದರೆ
ಕೊಟೇಷನ್ ಸುಪ್ರಭಾತಗಳನ್ನು
ಸಂಗ್ರಹಿಸಿಟ್ಟುಕೊಳ್ಳಿ.
ಇವುಗಳಲ್ಲಿರುವಷ್ಟು
ಜೀವನಾಮೃತ ಬೇರೆಲ್ಲೂ ಸಿಗಲಿಕ್ಕಿಲ್ಲ.
ಒಂದು
ಕಾದಂಬರಿ,
ಪುಸ್ತಕದ
ಸತ್ವ ಸುಭಾಷಿತವೊಂದರಲ್ಲಿ
ಅಡಗಿರುತ್ತದೆ.
*
ನಿಮಗೆಷ್ಟೇ
ಸ್ನೇಹಿತರಿರಬಹುದು.
ಸಲಹೆಗಾರರಿರಬಹುದು.
ಆದರೆ
ನಿಮ್ಮ ಆಪ್ತ ಸ್ನೇಹಿತ,
ಆಪ್ತ
ಸಲಹೆಗಾರ ನೀವೇ ಎಂಬುದನ್ನು
ಮರೆಯಬೇಡಿ.
ನಿಮ್ಮ
ವೈರಿಯೂ ನೀವೇ.
-
ವಿಶ್ವೇಶ್ವರ
ಭಟ್
2 comments:
ಪ್ರೀತಿಯ ರವಿ ಸರ್
ನಿಮ್ಮ ಚಿಂತಕರ ಚಾವಡಿ ಚಕ್ರವರ್ತಿ ಸೂಲಿಬೆಲೆ ಅಂತವರ ಬಲಪಂಥೀಯ ಧೋರಣೆಗಳ ಮುಖವಾಣಿಯಂತಿದೆ ಇದು ಚಿಂತಕರ ಚಾವಡಿ ದುರುಪಯೋಗವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ..... ದಯವಿಟ್ಟು ಪೂರ್ಣ ಪಠ್ಯ ಓದಿ ನಂತರ ಚಿಂತಕರ ಚಾವಡಿಗೆ ಹಾಕಿ.... ಚಿಂತಕರನ್ನೇ ಹಾದಿ ತಪ್ಪಿಸುವ ದುರುದ್ಧೇಶಪೂರಿತ ಲೇಖನಗಳಿವು..... ಇಂತಹ ಲೇಖನಗಳನ್ನು ಚರ್ಚಿಸುವ ಬದಲು ನಿಮ್ಮ ಚಿಂತಕರ ಚಾವಡಿಯನ್ನೇ ಮುಚ್ಚುವುದು ಅತಿ ಶ್ರೇಷ್ಟವಾಧ ಕೆಲಸ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಹಾಗೂ ಸಲಹೆಯಾಗಿದೆ...
sir
ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೆನೆ
ಇನ್ನು ಮುಂದೆ ಶೈಕ್ಷಣಿಕ ವಿಚಾರಗಳಿಗೆ ಸಿಮಿತಗೊಲಿಸಲು ಪ್ರಯತ್ನಿಸುತ್ತೆನೆ ಮತ್ತು ಸ್ವಂತ ಲೇಖನಗಳಿಗೆ ಪ್ರಮುಖ ಆಧ್ಯತೆ ನೀಡುತ್ತೆನೆ
ಧನ್ಯವಾದಗಳೊಂದಿಗೆ
ನಿಮ್ಮ
ರವಿ
Post a Comment