ನವಿಲು ಕೋಗಿಲೆಯಂತೆ ಹಾಡಲಾರದು, ಅಂತೆಯೇ ಕೋಗಿಲೆ ನವಿಲಿನಂತೆ ನಾಟ್ಯವಾಡದು, ಜಗತ್ತಿನಲ್ಲಿ ಪ್ರತಿಯೊಬ್ಬನಲ್ಲೂ ಒಂದೊಂದು ತೆರನಾದ ಸಾಮರ್ಥ್ಯವುಂಟು ತನ್ನಲ್ಲಿಲ್ಲದ ಸಾಮರ್ಥ್ಯಕ್ಕಾಗಿ ಕೊರಗದೇ, ಇದ್ದದ್ದನ್ನು ಉಪಯೋಗಿಸಿಕೊಳ್ಳುವುದೇ ಜಾಣತನ - "ಅರ್ಥರ್ ಸನ್ ಕ್ಲಾಸ್"

Wednesday, January 15, 2014

ಶುಭ ಹಾರೈಕೆಗಳು.

ಪ್ರೀತಿಯ ರವಿ ಸರ್& ಎಲ್ಲ ಸಮಾಜ ವಿಜ್ಞಾನ ಬಂಧುಗಳೇ,ತಮಗೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ  ಹಾರ್ಧಿಕ ಶುಭಾಶಯಗಳು.

                         ಈಗಾಗಲೇ ನಾವೆಲ್ಲ ವಿಷಯ ವೇದಿಕೆ ಮೂಲಕ ಪರಿಚಿತರಾಗಿದ್ದೇವೆ. ನಮ್ಮ ಬಾಂಧವ್ಯ ಈ ಬ್ಲಾಗ್ ಮೂಲಕ ಮತ್ತಷ್ಟು ಬಲಗೊಳ್ಳಬೇಕಿದೆ.ಮುಖ್ಯವಾಗಿ ನಾವೆಲ್ಲ ಸಮಾಜ ವಿಜ್ಞಾನ ಶಿಕ್ಷಕರಾಗಿದ್ದು ನಮ್ಮ ಮೇಲೆ ಹೆಚ್ಚಿನ ನಿರೀಕ್ಷೆಗಳು (ವಿದ್ಯಾರ್ಥಿಗಳ ಕಡೆಯಿಂದ, ಪಾಲಕರ ಕಡೆಯಿಂದ )ಇದ್ದು ನಾವು ನಮ್ಮ ವೃತ್ತಿಯ ಘನತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ.ನಮ್ಮ ಮೇಲೆ ಅತಿ ಹೆಚ್ಚಿನ ಜವಾಬ್ಧಾರಿ ಇದ್ದು ಅದನ್ನು ನಿಭಾಯಿಸುವಲ್ಲಿ ಕೆಲವೊಮ್ಮೆ ನಾವೆಲ್ಲೋ ಎಡವುತ್ತಿದ್ದೇವೆ.ಅಥವಾ ನಮ್ಮ ವಿದ್ಯಾರ್ಥಿಗಳ ಸಮೂಹಕ್ಕೆ ಅವಕಾಶಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲಾ
ರಿಗಿದ್ದೇವೆ ಎನ್ನಿಸತೊಡಗಿದೆ.ಕೆಲವೊಮ್ಮೆ ಅತಿಯಾದ ತಂತ್ರಜ್ಞಾನದ ಬಗೆಗಿನ ಒಲವು& ಇನ್ನು ಕೆಲವೊಮ್ಮೆ ಅದರ ಅನುಷ್ಠಾನದಲ್ಲಿ , ಆಚರಣೆಯಲ್ಲಿ ಅಡಚಣೆಗಳು,ಇನ್ನುಕೆಲವು ವೇಳೆ ಹಳೆಯ ವಿಧಾನಗಳು ಅದಾ ಅಥವಾ ಇದಾ?ಯಾವುದು ಒಳ್ಳೆಯದು ? ಹೀಗೆ ದ್ವಂದ್ವಗಳು ನಮ್ಮನ್ನು ನಿರೀಕ್ಷೆಯ ರೀತಿ ಕೆಲಸಮಾಡಲು ಬಿಡುತ್ತಿಲ್ಲ ಅನಿಸಿದೆ.ಇದಕ್ಕೆಲ್ಲ ಪರಿಹಾರವನ್ನು ನಾವು ನಮ್ಮ ವಿಷಯವೇದಿಕೆ ಮೂಲಕ, ಈ ಬ್ಲಾಗ್ ಮೂಲಕ ಕಂಡುಕೊಳ್ಳೋಣ. ಮುಖ್ಯವಾಗಿ ರಾಜ್ಯದ ಎಲ್ಲ ಭಾಗಗಳಲ್ಲಿ ಇರುವ ಸಮಾಜ ವಿಜ್ಞಾನ ಶಿಕ್ಷಕರು ನಾವೆಲ್ಲ ಕೈಜೋಡಿಸಿ ನಮ್ಮ ವಿಷಯವೇದಿಕೆಯನ್ನು, ಕೊಯರ್ ಸಂಪನ್ಮೂಲವನ್ನು &ಈ ಬ್ಲಾಗ್ ಅನ್ನು ಬಲಪಡಿಸೋಣ. ಜೊತೆಗೆ ನಾವೇಕೆ ನಮ್ಮದೇ ಆದ ಶಿಕ್ಷಕ ಬಳಗದ ಒಂದು ಸಾಹಿತ್ಯವನ್ನು ಹೊರತರಬಾರದು ಆಲೋಚಿಸಿ? ಎಲ್ಲ ಜಿಲ್ಲೆಗಳ ಶಿಕ್ಷಕರು ಕೈ ಜೋಡಿಸಿ ಒಂದು ಈ ಪತ್ರಿಕೆಯನ್ನು ( E-paper) ಹೊರತರಬಾರದು? ಅದರಲ್ಲಿ ನಮ್ಮ ಜಿಲ್ಲೆಗಳ, ನಮ್ಮ ವಿದ್ಯಾರ್ಥಿಗಳ ,ಶಿಕ್ಷಕರ ಬರಹಗಳು, ಸಾಧನೆ, ಅನಿಸಿಕೆ ಇವೆಲ್ಲವನ್ನು  ರೂಪಿಸಿ ಹೊರತಂದರೆ ಹೇಗಿರುತ್ತದೆ? ಯೋಚಿಸಿರಿ. 
 ಎಲ್ಲ ಸಮಸ್ತ ಶಿಕ್ಷಕ ಸಮೂಹದವರಿಗೆ ವಂದಿಸುತ್ತಾ , ಆತ್ಮೀಯರೇ ,ನಿರಂತರವಾಗಿ ನಮ್ಮ ಅಭಿಯಾನ ಮುಂದುವರಿಯಲಿ ಎಂದು ಬಯಸುವ
ಭಾಗ್ವತ್ 

4 comments:

Ramachandra said...

ರವಿ ಸಾರ್ ನಿಮ್ಮ ಚಾವಡಿಯ ಗೃಹಪ್ರವೇಶಕ್ಕೆ ನಮ್ಮ ಶುಭಹಾರೈಕೆಗಳು. ಹಾಗೂ ಮಕರ ಸಂಕ್ರಾಂತಿಯ ಉತ್ತಾರಾಯಣ ಪುಣ್ಯಕಾಲಕ್ಕೆ ಹೊಸ ಕಿರಣದ ಆಶಾವಾದದೊಂದಿಗೆ ಉದಯಿಸಿರುವ ಈ ಚಿಂತಕರ ಚಾವಡಿ ಅನೇಕ ಚಿಂತನೆಗಳಿಗೆ ಆಶ್ರಯ ನೀಡಿ ಜ್ಞಾನದ ಬೆಳಕನ್ನು, ಜ್ಞಾನದ ಹಸಿವಿಗೆ ಆಹಾರವನ್ನು ನೀಡಲಿ ಎಂದು ಹಾರೈಸುತ್ತೇನೆ.

Unknown said...

ರವಿ ಸರ್ ಚಿಂತಕರ ಚಾವಡಿ ಚಿಂತಕರಿಂದ ತುಂಬಿ ತುಳುಕಲಿ
ನಮಗೂ ಅದರಲ್ಲಿ ತೇಲಾಡುವ ಬಯಕೆ
ಮನದಾಳದ ಶುಭ ಹಾರೈಕೆಗಳು

Unknown said...

thank u sir u can post ur idea about our subject

Unknown said...

thank u sir u can also post ur idea about our subject