ನವಿಲು ಕೋಗಿಲೆಯಂತೆ ಹಾಡಲಾರದು, ಅಂತೆಯೇ ಕೋಗಿಲೆ ನವಿಲಿನಂತೆ ನಾಟ್ಯವಾಡದು, ಜಗತ್ತಿನಲ್ಲಿ ಪ್ರತಿಯೊಬ್ಬನಲ್ಲೂ ಒಂದೊಂದು ತೆರನಾದ ಸಾಮರ್ಥ್ಯವುಂಟು ತನ್ನಲ್ಲಿಲ್ಲದ ಸಾಮರ್ಥ್ಯಕ್ಕಾಗಿ ಕೊರಗದೇ, ಇದ್ದದ್ದನ್ನು ಉಪಯೋಗಿಸಿಕೊಳ್ಳುವುದೇ ಜಾಣತನ - "ಅರ್ಥರ್ ಸನ್ ಕ್ಲಾಸ್"

Sunday, September 28, 2014

ಗುಣಮಟ್ಟದ ಶಿಕ್ಷಣ

ಚಿಂತನೆ ಆರಂಭಿಸಿದವರು:
hari.panjikallu7@gmail.com
gpuc bellare sullya
ಅನೇಕ ಶಿಕ್ಷಕರ ಅನಿಸಿಕೆ ನೋಡಿದೆ. ಕೇಂದ್ರ ಸರ್ಕಾರ 5 ಮತ್ತು 8 ನೇ ತರಗತಿಗೆ ಪರೀಕ್ಷೆ ನಡೆಸುವುದರ ಬಗ್ಗೆ ಪತ್ರಿಕಾ ಹೇಳಿಕೆ ಬಗ್ಗೆ ಚರ್ಚೆ ಗಮನಿಸಿದೆ.
ನನಗೆ ಅನ್ನಿಸುತ್ತಿರುವುದು ಏನೆಂದರೆ, ಕಲಿಕಾ ಗುಣಮಟ್ಟವನ್ನು ಕೇವಲ ಪರೀಕ್ಷೆಯಿಂದ ಮಾತ್ರ ಸಾಧ್ಯವಾ? ನಾವು ಯಾಕೆ ಸೀಮಿತವಾಗಿ ಆಲೋಚಿಸುತ್ತೇವೆ. ಪರೀಕ್ಷೆಯಿಂದ ಮಾತ್ರಗುಣಮಟ್ಟವನ್ನು ತರಲು ಸಾಧ್ಯವಿಲ್ಲ. ಸಿ,ಸಿ.ಇ ಬರುವುದಕ್ಕಿಂತ ಮೊದಲು ಶಿಕ್ಷಣವು ಗುಣಮಟ್ಟವಾಗಿತ್ತು ಎಂದು ಯಾವ ವರದಿ ಹೇಳಿತ್ತು. ಶಿಕ್ಷಕರು , ಇಲಾಖೆ ಇಚ್ಛಾಸಕ್ತಿಯಿಂದ ದುಡಿದರೆ ಈಗಿರುವ ವಿಧಾನದಲ್ಲಿಯೇ ಸಾಧ್ಯವಿಲ್ಲವೇ?  ಈಗ ಇರುವ ಪಧ್ಧತಿಯಲ್ಲಿ ದೋಷವಿದೆ ಎಂದು ಹಿಂದಿನ ಪಧ್ಧತಿಯೇ ಸರಿಯಾದುದು ಎಂದು ವಾದಿಸುವುದು ಕೂಡಾ ಸರಿ ಅನ್ನಿಸುದಿಲ್ಲ ಅಲ್ಲವೇ?  ನೆಗಡಿ ಬಂದರೆ ಮೂಗೇ  ಕೊಯ್ಯುವುದು ಸರಿ ಅಲ್ಲ ಅಲ್ಲವೇ? ಪರೀಕ್ಷೆ , ಫೇಲು ಮಾಡುವುದು, ವಿದ್ಯಾರ್ಥಿಯನ್ನು ಎರಡೆರಡು ವರ್ಷ ಒಂದೇ ತರಗತಿಯಲ್ಲಿ ಕುಳಿತುಕೊಳ್ಲಿಸುವುದು, ಅವನ ಸ್ವಾತಂತ್ರ್ಯಕ್ಕೆ ನಾವು ಮಾಡುವ ಅಪಚಾರ ಅನ್ನಿಸುವುದಿಲ್ಲವೇ? ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಇಲಾಖೆಯ ವೈಫಲ್ಯ, ಶಿಕ್ಷಕರ ವೈಫಲ್ಯವನ್ನು ಮಗುವಿನ ಮೇಲೆ ಹಾಕಿ , ನಾವು ಅವನ ಮೇಲೆ ತೋರಿಸುವ ಕ್ರೌರ್ಯ ಅನ್ನಿಸುದಿಲ್ಲವೇ? ನಮ್ಮ ವೈಫಲ್ಯವನ್ನು ಅವನ ಮೇಲೆ ಹಾಕುವುದು ಸರಿ ಅನ್ನಿಸುತ್ತದೆಯೇ?  ವಿಜ್ಞಾನ ಏನು ಹೇಳುತ್ತದೆ ಅಂದರೆ ಕೆಲವು ವಿಶೇಷ ಸಂಧರ್ಬ ಹೊರತು ಪಡಿಸಿದರೆ ಎಲ್ಲಾ ವ್ಯಕ್ತಿಯ ಮಿದುಳು ಶಕ್ತಿ ಒಂದೇ. ಹಾಗಾದರೆ ವಿದ್ಯಾರ್ಥಿ ಫೈಲ್ ಆಗಲು ನಾವೇ ಕಾರಣ ಅನ್ನಿಸುದಿಲ್ಲವೇ?
ನಾವು ಆಲೋಚಿಸುವ ವಿಧಾನವನ್ನೇ ಬದಲಾಯಿಸ ಬೇಕಾಗಿದೆ. ಸರಕಾರ ಪ್ರತೀ ಬಾರಿ ಪ್ರಯೋಗ ಮಾಡುತ್ತಾ ,ಒಂದು ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತರದೇ , ದಿನಕ್ಕೊಂದು ಯೋಜನೆ , ದಿನಕ್ಕೊಂದು ಆದೇಶವನ್ನು ಕೊಡದೆ ಯೋಜಿತ ಶಿಕ್ಷಣ ಕೊಡುವ ಪಧ್ಧತಿ ಮಾಡಿದರೆ  ಇದ್ದದ್ದರಲ್ಲೇ ಗುಣಮಟ್ಟ ತರಬಹುದು. ಶಿಕ್ಷಕರು ಕೂಡ ಆಲೋಚನೆಯನ್ನು ಬದಲಾಯಿಸಿ ಪಾಸಿಟಿವ್ ಆಗಿ ಯೋಚಿಸುವುದು ಒಳಿತು
.
Ramachandra Karur Seenappa's profile photo
jashreeramu@gmail.com
TEACHER
ಪ್ರಭು ಸಾರ್ ನೀವು ಹೇಳಿದ ಎಲ್ಲಾ ಅಂಶಗಳು ಸರಿಯಾಗಿದೆ. ಆದರೇ ನೀವು ಹೇಳಿದಂತೆ  ಮೆದುಳಿನ ಶಕ್ತಿಗೂ ಕಲಿಕೆಗೂ ವ್ಯತ್ಯಾಸ ವಿದೆ ಅಲ್ವಾಸಾರ್. ಎಲ್ಲಾ ಮಕ್ಕಳಲ್ಲೂ ಕಲಿಕೆಯ ಸಾಮರ್ತ್ಯ ಒಂದೇ ಇದೆ ಎಂದು ಬಾವಿಸಿದರೂ ಅವರ ಕಲಿಕೆಯ ವೇಗ ಒಂದೇ ಆಗಿರಲೂ ಸಾಧ್ಯವಿಲ್ಲ ಅಲ್ವಾ ಸಾರ್. ವಿದ್ಯಾರ್ಥಿ ಒಂದೇ ತರಗತಿಯಲ್ಲಿ ಕುಳಿತುಕೊಳ್ಳುವುದು ವಿದ್ಯಾರ್ಥಿಯ ಸ್ವಾತಂತ್ರ್ಯ ಹೇಗೆ ಹರಣವಾಗುತ್ತದೆ? ಪರೀಕ್ಷೆ ಮಕ್ಕಳಲ್ಲಿ ಕಲಿಕೆಯನ್ನು ಗಟ್ಟಿಗೊಳಿಸುವ ಸಾಧನ ಸಾರ್. ಅಂದರೆ ಕಲಿಕೆಗಾಗಿ ಮೌಲ್ಯಮಾಪನ.  ಕಲಿಕೆ  ಆಗದಿದ್ದಾಗ ಅದಕ್ಕೆ ಮಗುವಿಗೆ ಮತ್ತೆ ಅವಕಾಶ ಮಾಡಿಕೊಡಬೇಕಲ್ಲವ ಸಾರ್. ಕಲಿಕೆ ಆಗದಿರಲಿ  ಅಥವಾ ಕಲಿಕೆ ಆಗಲಿ ಉತ್ತೀರ್ಣ ಮಾಡುವುದು ಮಗುವಿಗೆ ದ್ರೋಹ ಮಾಡಿದಂತೆ ಅಲ್ಲವಾ ಸಾರ್. 
 ನಮ್ಮಶಾಲೆಯಲ್ಲಿ ಸುಮಾರು ೪೦ ಮಕ್ಕಳು ಕನಿಷ್ಟ ಅಕ್ಷರ ಜ್ಞಾನ ಇಲ್ಲದ ಮಕ್ಕಳಿದ್ದಾರೆ. ಅವರಿಗೆ ಈಗ ಪ್ರತ್ಯೇಕ  ಕೊಠಡಿಯಲ್ಲಿ ಕೂರಿಸಿಕೊಂಡು  ಅಕ್ಷರ ಹೇಳಿಕೊಡುತ್ತಿದ್ದೇವೆ. ಈ ಪರಿಸ್ಥಿತಿಗೆ ಕಾರಣವೇನು? ಪ್ರಾಥಮಿಕ  ಶಾಲಾ  ಶಿಕ್ಷಕರಾ? ಇಲಾಖೆಯಾ?  ಪೋಷಕರಾ? ಸಮಾಜನಾ? ಯಾರು ಹೊಣೆ ? ಕೇವಲ ಯಾರೊಬ್ಬರ ಮೇಲೇ  ಗೂಬೆ ಕೂರಿಸಲು ಬರುವುದಿಲ್ಲ.  ಎಲ್ಲಾರೂ ಒಂದಿಲ್ಲಾ ಒಂದು ರೀತಿಯಲ್ಲಿ ಹೊಣೆಗಾರರೇ.  ಅದನ್ನು ಸರಿಪಡಿಸು ನಾವೇನು ಮಾಡಿದ್ದೀವಿ ಎಂಬುದು ಮುಖ್ಯ. ಕೇವಲ  ಆದರ್ಶಗಳನ್ನ ಹೇಳಿದರೆ ಸಾಲುವುದಿಲ್ಲ. ಕೇಲವು ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಮಕ್ಕಳ ಕಲಿಕೆ ಮುಖ್ಯವೇ ಹೊರತು  ಬೇರೆ ಯಾವುದು ಅಲ್ಲ. ಅದಕ್ಕಾಗಿ  ಪರೀಕ್ಷೆ ಒಂದು ಸಾಧವೇ  ಹೊರತು ಅಸ್ತ್ರ ಅಲ್ಲ ಎಂಬುದು ನನ್ನ ಅನಿಸಿಕ

arjun hanchinal's profile photo
arjun.hanchinal@gmail.com
BAGALKOT
Ramachandra sir Really your opinion is good . Becz nicely analysis about this matter.
Harishchandra Prabhu's profile photo
hari.panjikallu7@gmail.com
gpuc bellare sullya
ರಾಮಚಂದ್ರ ಸರ್, ನೀವು ಕೊಟ್ಟಿರುವ ಮೇಲ್ ನಲ್ಲೇ ಉತ್ತರವಿದೆ. ಪರೀಕ್ಷೆ ಒಂದು ಸಾಧನ ವಾಗಬೇಕೇ ಹೊರತು ಅದನ್ನು ಮಗುವಿನ ಭವಿಷ್ಯ ನಿರ್ದರಿಸುವ ಅಳತೆಗೋಲು ಆಗಿ ಉಪಯೋಗಿಸಬಾರದು.ಕಲಿಕೆ ಆಗದಿದ್ದಾಗ ಕಲಿಕೆಯನ್ನು ಆಗುವಂತೆ ಮಾಡಬೇಕು ಅಲ್ಲದೆ ಮಗುವನ್ನು ಫೈಲ್ ಮಾಡುವುದು ಉತ್ತರವಾಗಲಾರದು ಎಂದು ನನ್ನ ಅನಿಸಿಕೆಯಾಗಿತ್ತು.ಕಲಿಕೆ ಆಗದೇ ಉತ್ತೀರ್ಣ ಮಾಡಬೇಕು ಎಂದು ನಾನು ಹೇಳಿಲ್ಲ. ಅವನಲ್ಲಿ ಕಲಿಕೆ ಯಾಗದೇ ಇರುವುದಕ್ಕೆ ಕಾರಣಗಳನ್ನು ಸರಿಪಡಿಸಬೇಕೇ ಹೊರತು ಫೈಲ್ ಮಾಡುವುದು ಮದ್ದಾಗಲಾರದು. ನೀವೇ ಹೇಳಿದಿರಿ ಕೆಲವು ಕಠಿಣ ತೀರ್ಮಾನಗಳನ್ನು ತೆಗೆದು ಕೊಳ್ಳಬೇಕು ಎಂದು ಹೇಳಿದಿರಿ . ಅದನ್ನು ಮಗುವಿನ ಮೇಲೇ ಮಾತ್ರ ಯಾಕೆ ತೆಗೆದುಕೊಳ್ಳಬೇಕು? ಶಿಕ್ಷಕರ ಮೇಲೂ ತೆಗೆದುಕೊಳ್ಳ ಬಹುದಲ್ಲವೇ?
ಅಕ್ಷರ ಜ್ಞಾನ ಇಲ್ಲ ಅಂದಿರಿ. ಅದಕ್ಕೆ ನಾವೇ ಅಲ್ಲವೇ ಕಾರಣ ? ಯೋಚಿಸಿ 7 ವರ್ಷದಲ್ಲಿಯೂ ಒಂದು ಮಗುವಿಗೆ ಅಕ್ಷರವನ್ನು ಕಲಿಸಲು ಸಾಧ್ಯವಾಗಿಲ್ಲ ಅಂದಾದರೆ ಯಾರ ತಪ್ಪು ಹೇಳಿ? ನಮ್ಮಕಡೆಗೆ ಬೆರಳು ತೋರಿಸುತ್ತದೆ ಅಲ್ಲವೇ?
ಮೆದುಳಿನ ಶಕ್ತಿಗೂ ಕಲಿಕೆಗೂ ವ್ಯತ್ಯಾಸ ವಿರದು ಸರ್, ಯಾರಿಗೆ ಐಕ್ಯು ನಾರ್ಮಲ್ ಆಗಿದೆಯೋ ಅವನಲ್ಲಿ ಅವನ ವಯಸ್ಸಿಗೆ ತಕ್ಕಂತೆ ಕಲಿಕೆ ಆಗಲೇ ಬೇಕು. ಆಗದೇ ಇದ್ದಲ್ಲಿ ಅದು ಅವನು ಕಲಿಕೆಯಲ್ಲಿ ಆಸಕ್ತಿ ಇಲ್ಲ ಅಂತ ತಿಳಿಯಬೇಕಾಗುತ್ತದೆ. ಮತ್ತು ಆಸಕ್ತಿ ಬರುವಂತೆ ಮಾಡಬೇಕಾಗುತ್ತದೆ.
ಇದು ನನ್ನ ಅನಿಸಿಕೆ ಅಷ್ಟೆ. ತಪ್ಪಾಗಿ ಭಾವಿಸ ಬೇಡಿ.ಚರ್ಚೆ ಇರಲಿ

Ramachandra Karur Seenappa's profile photo
jashreeramu@gmail.com
TEACHER
ಪ್ರಭು ಸಾರ್  ಯಾವುದಕ್ಕೂ ತಕ್ಷಣ ತೀರ್ಮಾನ ತೆಗೆದುಕೊಳ್ಳುವುದು ಬೇಡ. ಯಾವುದೇ  ತಪ್ಪುಗಳಿಗೆ ಅನೇಕ ಕಾರಣಗಳಿವೆ.ಶಿಕ್ಷಕರ ತಪ್ಪುಗಳನ್ನಶಿಕ್ಷಕರೇ  ತಿದ್ದಿಕೊಳ್ಳಬೇಕು. ಮತ್ತೇ ನಾನು ಹೇಳಿದ ಹಾಗೆ ಮೆದುಳಿಗೂ ಕಲಿಕೆಗೂ ವ್ಯತ್ಯಾಸ ಇರುತ್ತದೆ ಎಂಬುದಕ್ಕೆ ಶಿಕ್ಷಕರೀಗೂ ಅನುಭವದಲ್ಲಿ ಬಂದಿರುತ್ತದೆ. ನನ್ನ ಒಂದು  ಅನುಭವವನ್ನು ಹೇಳುತ್ತೇನೆ. ನನ್ನ ಒಬ್ಬ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ. ಯಲ್ಲಿ 600 ಕ್ಕಿಂತ ಹೆಚ್ಚು ಪಡೆಯುವ ಸಾಮರ್ಥ್ಯ ಹೊಂದಿದ್ದಳು. ಆದರೇ ಅವಳ ಕೌಟುಂಬಿಕ ಸಮಸ್ಯೆಯಿಂದ ಆಕೆಯ ಅಂಕ 512  ಮಾತ್ರ ಪಡದಳು.ಇಲ್ಲಿ ಅವಳ ಮೆದುಳಿನಶಿಕ್ತಿ  ಹೆಚ್ಚಿದ್ದರೂ ಅವಳ ಕೌಟುಂಬಿಕ ಸಮಸ್ಯೆಗಳಿಂದ ಕಡಿಮೆ ಅಂಕ ಬಂತು. ಇಲ್ಲಿ ಶಿಕ್ಷಕರ ಪಾತ್ರವೇನು ಇರಲಿಲ್ಲ.  ಆಕೆಗೆ ಎಲ್ಲಾ ರೀತಿಯ ಅವಕಾಶಗಳನ್ನ    ಶಿಕ್ಷಕರು ಮಾಡಿದ್ದರೂ ಫಲ ನೀಡಲಿಲ್ಲ. ನಮ್ಮಶಾಲೆಯಲ್ಲಿ ನಮ್ಮ ಮುಖ್ಯೋಪಾಧ್ಯಾಯರು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆ ತರಲು ಮಾಡುವ ಪ್ರಯತ್ನಗಳನ್ನ ನೋಡಿದರೆ ಬೇಜಾರಾಗುತ್ತದೆ.  ಮಕ್ಕಳ ಪರಿಸರವನ್ನು ಶಿಕ್ಷಕರಾದ ನಮಗೆ ಬದಲಾಯಿಸಲು ಆಗುತ್ತಿಲ್ಲ.  ಇಲ್ಲಿ  ಪೋಷಕ ಹಾಗೂ ಸಮಾಜದ ಪಾತ್ರವೇನು ಇಲ್ಲ ಅನ್ನಿಸುತ್ತದೆಯಾ? 
 ಇನ್ನು ಫೇಲ್ ಮಾಡುವ ವಿಚಾರ ಇಲ್ಲಿ  ಪದ ಬಳಕೆ ತಪ್ಪಾಗುತ್ತಿದೆ.  ಫೇಲ್ ಎಂದರೇ  ನಾಲಾಯಕ್ ಎಂಬುದಲ್ಲ. ಮಕ್ಕಳಿಗೆ ಕಲಿಕೆಗೆ ಮತ್ತೊಂದು ಅವಕಾಶ ನೀಡುವುದು ಎಂದಾಗಬೇಕಿತ್ತು. ಇಲ್ಲಿ ಒಬ್ಬ ವಿದ್ಯಾರ್ಥಿ  ಆತನ ಕಲಿಕಾ    ದೋಷದಿಂದ  ಅಥವಾ ಇನ್ಯಾವುದೇ ಕಾರಣದಿಂದ  ಕಲಿಕೆ  ಸಾಧ್ಯವಾಗದಿದ್ದಾಗ  ಆತನಿಗೆ ಮತ್ತೊಂದು ಅವಕಾಶ ನೀಡುವುದು ನಮ್ಮ ಕರ್ತ್ಯವ್ಯ ಅಲ್ಲವಾ.  ಇಂತಹ ಸಂದರ್ಭದಲ್ಲಿ ನಾವು ಮಕ್ಕಳನ್ನು ನೋಡುವ ಮನೋಭಾವ ಬದಲಾಗ    ಬೇಕು ಅಷ್ಟೆ. 
 ಕಠಿಣ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದ್ದು  ಕೇವಲ ಫೇಲ್ ಮಾಡುವುದಕ್ಕೆ ಮಾತ್ರ ಅಲ್ಲ ಸಾರ್. ಆತನ ಕಲಿಕೆಗೆ ಅವಕಾಶ ಮಾಡಿಕೊಡಲು ಹೌದು ಸಾರ್.  ಇದಕ್ಕೆಲ್ಲ ನನಗೆ ಒಂದು ಪರಿಹಾರ   ಎನ್ನಿಸುವುದೆಂದರೆ ಈ ತರಗತಿ (ವರ್ಗ) ವ್ಯವಸ್ಥೆ ಬದಲಾಗಬೇಕು. ಕಲಿಕೆ ಆಧಾರಿತ ವರ್ಗ ಅಸ್ಥಿತ್ವಕ್ಕೆ ಬರಬೇಕು. ಆಗ  ಈ ತಪ್ಪು ಅಭಿಪ್ರಾಯ ಇರುವುದಿಲ್ಲ.
  ನಾನು ಶಿಶುವಿಹಾರದಲ್ಲಿ  ಕೆಲಸ ಮಾಡುವಾಗ ಮಕ್ಕಳಿಗೆ ಯಾವುದೇ  syllabus ಇರುತ್ತಿರಲಿಲ್ಲ. ಮಕ್ಕಳಿಗೆ 93  ಸಾಮರ್ಥ್ಯಗಳನ್ನು  ಪಟ್ಟಿ ಮಾಡಿದ್ದೇವು. ಅದರ ಆಧಾರ ಮೇಲೆ ಮೂರು ವರ್ಷ ಶಿಕ್ಷಣ  ನೀಡಲಾಗುತ್ತಿತ್ತು.  ಈ  ಸಾಮರ್ಥ್ಯಗಳನ್ನು ಕೆಲವು ಮಕ್ಕಳು 2   ವರ್ಷದಲ್ಲೇ ಪೂರೈಸುತ್ತಿದ್ದರು.  ಅಂಥಹ ಮಕ್ಕಳ ಪೋಷಕರನ್ನು ಕರೆದು ಆ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಸಮರ್ಥನಾಗಿದ್ದಾನೆ ಎಂದು  ತಿಳಿಸುತ್ತಿದ್ದೇವು. ಉಳಿದ ಮಕ್ಕಳಿಗೆ ಇನ್ನು ಒಂದು ವರ್ಷ  ಅವಕಾಶ ಮಾಡಿಕೊಡುತ್ತಿದ್ದೇವು. ಕೆಲವೋಮ್ಮೆ ಪೋಷಕರು 5  ವರ್ಷ ವಾದಕೂಡಲೆ  ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಒತ್ತಾಯ ಮಾಡುತ್ತಿದ್ದರು. ಕೆಲವೊಬ್ಬರು ಒತ್ತಾಯ ಪೂರ್ವಕವಾಗಿ ಸೇರಿಸಿದಾಗ ಒಂದರಿಂದ ನಾಲ್ಕನೇ ತರಗತಿಯ ವರೆಗೆ ಆ ಮಗುವಿನ ಕಲಿಕೆ ಬಹಳ  ನಿದಾನವಾದಾಗ ಪೋಷಕರು ಪಶ್ಚಾತ್ತಾಪ ಪಡುತ್ತಿದ್ದರು. ಆಗ ಮಕ್ಕಳನ್ನು ಒಂದು ವರ್ಷ ಅದೇ ತರಗತಿಯಲ್ಲಿ ಕೂರಿಸಲು ಕೇಳಿಕೊಳ್ಳುತ್ತಿದ್ದರ. ಈ ಎಲ್ಲಾ    ನಿರ್ಧಾರಗಳ ಹಿಂದೆ ಮಕ್ಕಳ ಸಮಗ್ರ ವಿಕಾಸದ ಗುರಿ ಇತ್ತೇ ಹೊರತು ಶಿಕ್ಷಕರ ತಪ್ಪನ್ನು ಮುಚ್ಚಿಹಾಕುವ ಅಥವಾ ಇನ್ಯಾವುದೇ ದುರುದ್ದೇಶಗಳು ಇರುತ್ತಿರಲಿಲ್ಲ.  ನನ್ನ ಈ ಎಲ್ಲಾ ಅನುಭವದ ಆಧಾರದ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಸಾರ್. ನಿಮ್ಮ ಅನುಭವದಲ್ಲಿ ಇದು ತಪ್ಪೇಂದರೇ ವಿವರಣೆ ನೀಡಿ ಸಾರ್. ಆಭಿಪ್ರಾಯ ಬದಲಿಸಿಕೊಳ್ಳುತ್ತೇನೆ. ಅನ್ಯತಾ ಭಾವಿಸಬೇಡಿ 

Naganna shahabad's profile photo
nagushahabad@gmail.com
Assistent Master
ರಾಮಚಂದ್ರ ಸರ್ ನಿಮ್ಮ ಅಭಿಪ್ರಾಯ ನಿಜ

Harishchandra Prabhu's profile photo
hari.panjikallu7@gmail.com
gpuc bellare sullya
ಸರ್, ನಿಮ್ಮ ಶಿಶು ವಿಹಾರದ ಅನುಭವ ಖಂಡಿತಾ ಒಳ್ಳೆಯ ಅನುಭವ. ಅದನ್ನೇ ನಾನೂ ಕೂಡ ಹೇಳಿರುವುದು. ನೀವು ಶಿಶುವಿಹಾರದಲ್ಲಿ ಕಲಿಕೆಗಾಗಿ 93  ಸಾಮರ್ಥ್ಯ ವನ್ನು ಪಟ್ಟಿ ಮಾಡಿ ಅದನ್ನು 3 ವರ್ಷದ ಅವಧಿಗೆ ಬೋಧಿಸಿದಿರಿ. ಈ ಸಂದರ್ಬದಲ್ಲಿ ಬೇಗ ಕಲಿತಿರುವ ವಿದ್ಯಾರ್ಥಿ ಬೇಗ 1 ನೇ ತರಗತಿಗೆ ಸೇರಿಸುತ್ತಿದ್ದರು. ಕಲಿಕೆ ಆಗದ ವಿದ್ಯಾರ್ಥಿ ಮುಂದುವರಿಯುತ್ತಿದ್ದ ಎಂದು ಹೇಳಿದಿರಿ.ಇದು ನಮ್ಮ ಸರಕಾರಿ ಶಾಲೆಯ 1 ನೇ ತರಗತಿಯಿಂದ 4 ನೇ ತರಗತಿ ವರೆಗೆ ಇರುವ ನಲಿಕಲಿ ಪಧ್ಧತಿಯನ್ನು ತೋರಿಸುತ್ತದೆ. ಅಲ್ಲಿಯೂ ಇದೇ ಮಾದರಿಯನ್ನು ನೋಡಬಹುದು. ಕಲಿಕೆಯಾದ ವಿದ್ಯಾರ್ಥಿ ಮುಂದಿನ ಸಾಮರ್ತ್ಯ ವನ್ನು ಕಲಿಯುತ್ತಿದ್ದ. ನಲಿಕಲಿಯಲ್ಲಿಯೂ ಕೂಡ ತರಗತಿಯ ಕಲ್ಪನೆ ಇಲ್ಲ. ಕಲಕೆಯಾಗದ ವಿದ್ಯಾರ್ಥಿ ಅವನು ಪಡೆಯಬೇಕಾದ ಸಾಮರ್ತ್ವನ್ನು ಪಡೆದುಕೊಂಡು ಮುಂದುವರಿಯಬೇಕು. ಇದನ್ನೇ ಯಾಕೆ ಮೇಲಿನ ತರಗತಿಯಲ್ಲಿ ಅನುಸರಿಸಬಾರದು. ಆಗ ಅವನಲ್ಲಿ ತಾನು ಫೈಲ್ ಎಂಬ ಕಲ್ಪನೆಯೇ ಬರುವುದಿಲ್ಲ. 
ತಾವು ಹೇಳಿದಂತೆ ಅದೇ ತರಗತಿಯಲ್ಲಿ ಮುಂದುವರಿಯುವುದು ಅಂದರೆ ಅವನಿಗೆ ಮತ್ತೋಂದು ಅವಕಾಶ ನೀಡುವುದು ಎಂದಿರಿ.  ಆದರೆ ಅದು ನಮ್ಮಂತವರು ಮಾತ್ರ ತಿಳಿದುಕೊಳ್ಳುತ್ತಾರೆ. ಮಗುವಿಗೆ ಹಾಗೆ ಅನ್ನಿಸಬಹುದೇ? ತನ್ನೊಂದಿಗೆ ಇದ್ದ ವಿದ್ಯಾರ್ಥಿಗಳು ಮುಂದಿನ ತರಗತಿಯಲ್ಲಿ ಇರುವಾಗ ತಾನು ಸಾಮರ್ಥ್ಯ ಇಲ್ಲದವನು ಎಂದು ಅನ್ನಿಸುವುದಿಲ್ಲವೇ? ಸಹಜವಾಗಿಯೇ ಅದು ತಿಳಿದುಕೊಳ್ಳುವುದು ಏನೆಂದರೆ ತಾನು ಫೈಲ್ ಆಗಿದ್ದೇನೆ ಎಂದು. ಖಂಡಿತಾ ತಮ್ಮ ಅನುಭವ ದಷ್ಟು ನನ್ನ ಅನುಭವ ವಿಲ್ಲ ಸರ್.  ನನ್ನ ಅಬಿಪ್ರಾಯ ವೇನೆಂದರೆ ಯಾವುದೇ ತೀರ್ಮಾನಗಳು ಮಗು ಕೇಂದ್ರಿತವಾಗಿರಬೇಕೇ ವಿನಹ ಶಿಕ್ಷಕ ಕೇಂದ್ರಿಕೃತ ವಾಗಿರುವುದು ಒಳ್ಳೆಯದಲ್ಲ.
ತಾವು 600 ಅಂಕ ತೆಗೆಯುವ ವಿದ್ಯಾರ್ಥಿಯಬಗ್ಗೆ ಹೇಳಿದಿರಿ. ಅದು ಅವಳ ಕೌಟುಂಬಿಕ ಸಾಮಾಜಿಕ ಸಮಸ್ಯೆ . ಅವಳ ಮಿದುಳು ಶಕ್ತಿಯೂ ಚೆನ್ನಾಗಿತ್ತು ಹಾಗೆಯೇ ಅವಳಲ್ಲಿ ಕಲಿಕೆಯೂ ನಡೆದಿತ್ತು. ಅದು ಅವಳ ಕಲಿಕೆಯ ಸಮಸ್ಯೆ ಯಾಗಿರಲಿಲ್ಲ. ಸಾಮಾಜಿಕ ಸಮಸ್ಯೆಯಾಗಿತ್ತು. ನಾನು ಮೊನ್ನೆ ಹೇಳಿದ್ದು ಏನೆಂದರೆ ಮೆದುಳು ಶಕ್ತಿ ನಾರ್ಮಲ್ ಆಗಿದ್ದವನಿಗೆ ಕಲಿಕೆ ಯಾಗಲೇ ಬೇಕು ಎಂದು ಹೇಳಿದ್ದೆ. ನೀವು ಹೇಳಿರುವ ವಿದ್ಯಾರ್ಥಿಗೆ ಕಲಿಕೆಯ ಸಮಸ್ಯೆ ಯಾಗಿರಲಿಲ್ಲ. ನನಗೆ ಅದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ನಾನು ಓದಿದ ಶೈಕ್ಷಣಿಕ ಮನೋವಿಜ್ಞಾನದ ಪ್ರಕಾರ ಯಾವ ವ್ಯಕ್ತಿಗೂ ಮೆದುಳು ಶಕ್ತಿ ಕಡಿಮೆ ಅಂತವಿರುವುದಿಲ್ಲ. ಅದನ್ನು ಬಳಸಿಕೊಳ್ಳುವ ವಿಧಾನದಲ್ಲಿ  ವ್ಯತ್ಯಾಸವಿದೆ. ಅದು ಅವನ ಆಸಕ್ತಿಯ ಮೇಲೆ ಇದೆ.ಒಬ್ಬ ಕಲಿಕೆಯಲ್ಲಿ ಹಿಂದೆ ಇರುವ ವಿದ್ಯಾರ್ಥಿ ಮೆಕ್ಯಾನಿಕ್ ವಿಷಯದಲ್ಲಿ ಅದ್ಬುತ ಸಾಧನೆ ಮಾಡುತ್ತಾನೆ. ಹಾಗಾದರೆ ಅವನ ಮೆದುಳಿನ ಶಕ್ತಿ ಕಡಿಮೆ ಎಂದು ಹೇಳುವಿರಿ ಏನು?ಎಸ್ ಎಸ್ ಎಲ್ ಸಿ ಫೈಲ್ ಆದ ತೆಂಡುಲ್ಕರ್ ವಿಶ್ವ ಪ್ರಸಿದ್ದನಾದ. ಅವನು ಕಲಿಕೆಯಲ್ಲಿ ಆಸಕ್ತಿ ತೋರಿಸಲಿಲ್ಲ. ಅಷ್ಟೆ.ಅಭಿಪ್ರಾಯ ತಪ್ಪಾಗಿದ್ದರೆ ಕ್ಷಮಿಸಿ.

Ramachandra Karur Seenappa's profile photo
jashreeramu@gmail.com
TEACHER

ಹೌದು ಸಾರ್, ಕಲಿಕೆ ವಿದ್ಯಾರ್ಥಿ ಕೇಂದ್ರಿತವಾಗಿರಬೇಕು. ನಾನು ಹೇಳಿದ್ದು ಫೇಲ್ ಎನ್ನುವ ಪರಿಕಲ್ಪನೆ ತಪ್ಪು. ವಿದ್ಯಾರ್ಥಿಗೆ ಹೆಚ್ಚಿನ ಅವಾಕಾಶ ಮಾಡಿಕೊಡುವುದೇ ಪ್ರದಾನವಾಗಿರಬೇಕು. ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಕಲಿಕೆ ನಡುವೆ ಅಂತರವಿದೆ. ಒಮ್ಮೆ ಒಂದು ಪುಸ್ತಕದಲ್ಲಿ ಓದಿದ ನೆನಪು. ಮನುಷ್ಯನ ಮೆದುಳಿನ ಸಾಮರ್ಥ್ಯದ ಪೂರ್ಣ ಬಳಕೆಯನ್ನು ಎಲ್ಲೂ ಮಾಡುತ್ತಿಲ್ಲ. ಉದಾಹರಣೆ ಐನ್ ಸ್ಟಿನ್ ಹಾಗೂ ವಿಶ್ವೇಶ್ವರಯ್ಯ ನಂತವರು ತಮ್ಮ ಮೆದುಳಿನ ಶಕ್ತಿಯ ಕೇವಲ 5 %  ಮಾತ್ರ ಬಳಸಿದ್ದರು ಎಂದು. ಹಾಗಾದರೆ ಸಾಮಾನ್ಯ ಮನುಷ್ಯರಾದ ನಾವೇಷ್ಟು ನಮ್ಮ ಸಾಮರ್ಥ್ಯವನ್ನು ಬಳಸುತ್ತಿರಬಹುದು. ಅಂದರೇ  ವ್ಯಕ್ತಿಯಲ್ಲಿನ ಸಾಮರ್ಥ್ಯ ಹಾಗೂ ಬಳಕೆಯಲ್ಲಿ     ವ್ಯತ್ಯಾಸವಿದೆ ಎಂದಾಯ್ತು. ಹಾಗೇ ಬಳಕೆಯಲ್ಲಿನ ವ್ಯತ್ಯಾಸಕ್ಕೆ ವಿದ್ಯಾರ್ಥಿ, ಶಿಕ್ಷಕ, ಪೋಷಕ , ಸಮಾಜ ಎಲ್ಲರೂ ಕಾರಣರಿರಬಹುದು. ನೀವು ಹೇಳಿದಂತೆ ಶಿಕ್ಷಣ ಒಂದು ಮುಖ್ಯವಲ್ಲ. ಎಸ್.ಎಸ್.ಎಲ್.ಸಿ.ಫೇಲಾದ ತೆಂಡೂಲ್ಕರ್ ವಿಶ್ವ ಪ್ರಸಿದ್ಧನಾಗಿದ್ದಾನೆ. ಹೌದು. ನನ್ನ ಪರಿಚಯದ ಒಬ್ಬ ಮ್ಯಾಕಾನಿಕ್ ಏಳನೇ ತರಗತಿಯನ್ನು    ಪೂರ್ಣಗೊಳಿಸಿಲ್ಲ ಆದರೇ ದಿನಕ್ಕೆ ಕನಿಷ್ಟ ಆತ ಎರಡರಿಂದ ಮೂರು ಸಾವಿರ ದುಡಿಯುತ್ತಾನೆ. ಇನ್ನೂ ಆತನಿಗೆ ಇಪ್ಪತ್ತೆರಡು ವರ್ಷ. ಹಾಗಂತ ಶಾಲೆಯಲ್ಲಿ ಕಲಿಕೆಯನ್ನು  ಉದಾಸೀನ ಮಾಡುವಂತಿಲ್ಲ. ನಾನು ಮಕ್ಕಳಿಗೆ ಬೋಧಿಸುವಾಗ   ಬೋಧಿಸುವಾಗ ಹೇಳುವುದೇನೆಂದರೆ  ಡಾಕ್ಟರ್ ಆಗಿ ಕೆಲವರು ಕೆಲಸವಿಲ್ಲದೆ  ಪೇಷಂಟ್ ಇಲ್ಲದೆ ಕುಳಿತಿರುತ್ತಾರೆ.  ಅದೇ ಒಬ್ಬ ಪಾನಿಪುರಿ ಅಂಗಡಿ ಇಟ್ಟವನು ದಿನಕ್ಕೆ 4-5 ಸಾವಿರ ದುಡಿಯುತ್ತಾನೆ. ಅದಕ್ಕೆ ಏನೇ ಮಾಡಿ ಅದರಲ್ಲಿ ಪರಿಪೂರ್ಣತೆಯನ್ನು ಸಾದಿಸಿ. ಕೇವಲ ಪರೀಕ್ಷೆಗಾಗಿ ಕಲಿಯಬೇಡಿ. ಬದುಕಿಗಾಗಿ ಕಲಿಯಿರಿ ಎಂದು ಹೇಳುತ್ತೇನೆ. ಪರೀಕ್ಷೆ ಎಂದರೇ ಮಕ್ಕಳಿಗೆ ಶಿಕ್ಷೆಯಾಗಿರಬಾರದು. ಹಾಗೇ ಅದು ಮಕ್ಕಳಿಗೆ ಕಲಿಕೆಯಲ್ಲಿ ತೊಡಗಲು Motivate ಮಾಡುವ   ಸಾಧನವಾಗಬೇಕು. 
  ಆದರೇ  ಪ್ರಾಥಮಿಕ  ಶಾಲೆಯ ನಲಿ ಕಲಿಯಲ್ಲಿ ಉತ್ತಮ  ಅಂಶಗಳಿದ್ದರೂ ಅದಕ್ಕೆ ಪೂರಕ ವಾತಾವರಣ, ತರಬೇತಿ ಇದೇಯಾ. ಅಕಸ್ಮಾತ್ ಮಕ್ಕಳಲ್ಲಿ ಕಲಿಕೆಯ್ ದೋಷ ಕಂಡುಬಂದರೆ ವಿದ್ಯಾರ್ಥಿಯನ್ನು ಮತ್ತೇ ಅದೇ ತರಗತಿಯಲ್ಲಿ ಕೂರಿಸಲು ಅವಕಾಶ ಇದೇಯಾ? ಮುಂದಿನ ತರಗತಿಯಲ್ಲಿ ಕಲಿಕೆ ಆಗುವವರೆಗೆ ಮಗುವಿಗೆ ಅವಕಾಶ ಮಾಡಿಕೊಡಲು ವ್ಯವಸ್ಥೆ ಒಪ್ಪುತ್ತದೆಯೇ? ಕಲಿಕೆ ಆಗಲಿ ಬಿಡಲಿ ತಳ್ಳು ಯೋಜನೆ ಎಷ್ಟು ಸೂಕ್ತ? ಕಲಿಕೆ ಮುಖ್ಯವೋ ಮಗು ಪಾಸಾಗುತ್ತಾ ಸಾಗುವುದು ಮುಖ್ಯವೋ? ಇದಕ್ಕೆಲ್ಲಾ ಉತ್ತರ ಕೊಡುವವರು ಅಥವಾ ಕಂಡುಕೊಳ್ಳುವವರು ಯಾರು? 
 ಪ್ರಭು ಸಾರ್ ನಿಮ್ಮ  ನಿಮ್ಮ ಅಭಿಪ್ರಾಯದಲ್ಲಿ ತಪ್ಪುಗಳಿವೆ ಎಂದು ನನಗೆ ಅನ್ನಿಸುತ್ತಿಲ್ಲ. ನಾನರಿಯದ ಕೆಲವು ಅಂಶಗಳನ್ನು ನೀವು ವಿವರಿಸಿದ್ದೀರಿ. ಅದರಿಂದ ಕೆಲವು ವಿಚಾರಗಳಿಗೆ ಸ್ಪ ಷ್ಟತೆ ದೊರಕಿದೆ. ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ನಾನು ತಿಳಿದ ಮಟ್ಟಿಗೆ ಪ್ರಯತ್ನಿಸಿದ್ದೇನೆ. 

Harishchandra Prabhu's profile photo
hari.panjikallu7@gmail.com
gpuc bellare sully
ನಾನು ನಿಮ್ಮಿಂದ ಸಾಕಷ್ಟು ಕಲಿಯಲು ಇದೆ ಸರ್. ನಿಮ್ಮ ಅನುಭವದ ಮುಂದೆ ನನ್ನದು ಏನೂ ಅಲ್ಲ ಸರ್. ದಯವಿಟ್ಟು ನನ್ನ ಮೇಲ್ ನಿಂದ  ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ.ಸರ್
ಸರ್ ನನ್ನದು ಒಂದು ಪ್ರಶ್ನೆ ಸರ್.  ನಾವು ಮಕ್ಕಳಲ್ಲಿ ಕಲಿಕೆ ಉಂಟಾಗದೇ ಇದ್ದಲ್ಲಿ ಅದೇ ತರಗತಿಯಲ್ಲಿ ಮುಂದುವರಿಯಲಿ ಎಂಬ ಅರ್ಥದಲ್ಲಿ ವಾದಿಸುತ್ತೇವೆ. ಸರಿ. ಎಲ್ಲಾ ಶಿಕ್ಷಕರು ಕೂಡ ಉತ್ತಮ ಶಿಕ್ಷಕರೇ ಇರುತ್ತಾರೆಯೇ?  ನಮ್ಮ ಮಧ್ಯೆ ಅನೇಕ ಶಿಕ್ಷಕರು ಸಮಾಜವಿಜ್ಞಾನ  ಪಾಠವನ್ನ ತರಗತಿಯಲ್ಲಿ ಓದುದರ ಮೂಲಕ ಪಾಠಮುಗಿಸುವವರು ಇಲ್ಲವೇ? ಇತ್ತೀಚೆಗೆ  ಯಾವುದೋ ರಾಜ್ಯದಲ್ಲಿ ಬಹುಶಹ ಬಿಹಾರದಲ್ಲಿ ಇರಬೇಕು ಶಿಕ್ಷಕರಿಗೆ  ಪರೀಕ್ಷೆಯನ್ನು ಮಾಡಿದಾಗ  ಶೇಕಡಾ 60 ರಷ್ಟು ಶಿಕ್ಷಕರು ನಾಪಾಸಾಗಿದ್ದನ್ನು ಓದಿರಬಹುದು.ಇಂತಹವರಿಂದ ಕಲಿಕೆಯಾಗಲು ಸಾಧ್ಯವಿದೆಯೇ?  ಇವರ ವೇತನವನ್ನು [ವಾರ್ಷಿಕ ಭಡ್ತಿ] ತಡೆಹಿಡಿಯಲು ಆದೇಶವಾದಾಗ ಆ ರಾಜ್ಯದಲ್ಲಿ  ದೊಡ್ಡ ಗಲಾಟೆಯೇ ನಡೆಯಿತು.
ಈಗ ಹೇಳಿ, ಮಕ್ಕಳಿಗಾದರೆ ಕಲಿಕೆ ನಡೆಯದೇ ಇದ್ದಲ್ಲಿ ಅದೇ ತರಗತಿಯಲ್ಲಿ ಮುಂದುವರಿಯಬೇಕು,  ಶಿಕ್ಷಕರ  ಪರೀಕ್ಷೆಯಲ್ಲಿ ನಾಪಾಸಾದರೆ ಯಾವುದೇ ಸೌಲಭ್ಯ ತಡೆಯಬಾರದು . ಹೇಗಿದೆ ನಮ್ಮ ವ್ಯವಸ್ಥೆ. ನಮ್ಮ ರಾಜ್ಯದಲ್ಲಿ ಯೂ ಪರೀಕ್ಷೆಯ ಬಗ್ಗೆ ಸರಕಾರ ಪ್ರಸ್ತಾಪಿಸಿದಾಗ ನಾವು ವಿರೋಧಿಸಿದ್ದನ್ನು ನೆನಪಿಸಿಕೊಳ್ಳಿ ಸರ್. ಯಾಕೆ ವಿರೋಧಿಸಬೇಕು? 
ಸರ್, ಹಾಗಂತ ನಾನು ಶಿಕ್ಷಕರ ವಿರೋಧಿಯಲ್ಲ. ನನ್ನ ಪ್ರಶ್ನೆ  ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ?
ನಾನು 9 ನೇ ತರಗತಿಯಲ್ಲಿ ಹೋಗಿ ಇದೇ ವಿಷಯವನ್ನು ಚರ್ಚಿಸಿದೆ.. ಮಕ್ಕಳಲ್ಲಿ ನಾನು ಕೇಳಿದ ಪ್ರಶ್ನೆ ಏನೆಂದರೆ,  ಪ್ರಗತಿಯನ್ನು ಮಾಡದೇ ಇರುವ ವಿದ್ಯಾರ್ಥಿಯನ್ನು  ಫ್ಐಲ್ ಮಾಡಬಹುದೇ ಬೇಡವೇ?
ಅವರು ಕೊಟ್ಟ ುತ್ತರ ನೋಡಿ-
1.  ಫೈಲ್ ಮಾಡಬಾರದು.
2.ಯಾಕೆಂದರೆ ಫೈಲ್ ಮಾಡಿದರೆ ಮನಸ್ಸಿಗೆ ನೋವಾಗುತ್ತದೆ.
3.ನಮಗೆ ಕೆಲವು ಪಾಠಗಳು ಅರ್ಥವೇ ಆಗುವುದಿಲ್ಲ
4. ಪಾಠವನ್ನು ವೇಗವಾಗಿ ಮುಗಿಸುತ್ತಾರೆ ಹಾಗಾಗಿ ಅರ್ಥವಾಗುದಿಲ್ಲ
5. ನಮಗೆ ಓದುವ ಮನಸ್ಸಿದ್ದರೂ ಮನೆಯಲ್ಲಿಯ ಪರಿಸ್ತಿತಿಯಿಂದಾಗಿ ಓದಲಾಗುತ್ತಿಲ್ಲ.
6.ಗಣಿತ ಪಾಠದಂತಹ ಪಾಠಗಳು ನಮಗೆ ಕಷ್ಟವಾಗುತ್ತದೆ.
 ಹೀಗೆ ಕೆಲವೊಂದು ಅಭಿಪ್ರಾಯವನ್ನು ಹೇಳಿದರು. ಸೂಕ್ಮವಾಗಿ ಗಮನಿಸಿ. ಅವರು ಹೇಳಿದಂತಹ ವಿಷಯದಲ್ಲಿ ನಮ್ಮ ತಪ್ಪೇ ಹೆಚ್ಚು ಅಲ್ಲವೇ. ಅವನು ಪಾಠದಲ್ಲಿ ನಾಪಾಸಾಗಲು  ನಾವೇ ಕಾರಣ ಎನ್ನುವ ರೀತಿಯಲ್ಲಿ ಅವರ ಉತ್ತರಗಳು ಇವೆ.
ನೀವು ಗಮನಿಸಿ ಯಾವ ವಿದ್ಯಾರ್ಥಿಯ ಮನೆಯ ಪರಿಸ್ತಿತಿಯು  ಚೆನ್ನಾಗಿಲ್ಲವೋ ಅವರೇ ಹೆಚ್ಚಾಗಿ ಫೈಲ್ ಆಗುವುದು. ಕಲಿಕೆ ಯಾಗಲು ಅವರ ವಾತಾವರಣ ಬಿಡುತ್ತಿಲ್ಲ.


Ramachandra Karur Seenappa's profile photo
jashreeramu@gmail.com
TEACHER

ಪ್ರಭು ಸಾರ್ ನಿಮ್ಮ ವಾದದಲ್ಲಿ ಅರ್ಥ ಇದೆ. ಮಕ್ಕಳಿಗೆ ಕಲಿಕೆ ನೀದಾನವಾಗುವುದಕ್ಕೂ ಅನೇಕ ಕಾರಣಗಳಿವೆ. ಅದಕ್ಕೆ ವಿದ್ಯಾರ್ಥಿ ಮಾತ್ರ ಕಾರಣವಲ್ಲ. ಉದಾಹರಣೆಗೆ ಮಕ್ಕಳಿಗೆ ನಾವು ಕೇವಲ ಮಾಹಿತಿ ವರ್ಗಾವಣೆ ಮಾಡುವುದರಲ್ಲೆ ನಿರತರಾಗಿರುವುದು ಒಂದು. ಆದರೆ ಕಲಿಕೆಯ ಮೂಲ ಆಶಯವಾದ ಪರಿಕಲ್ಪನೆಗಳ ವರ್ಗಾವಣೆ ಆಗುವುದೇ ಇಲ್ಲ. ಈ ರೀತಿ ವರ್ಗಾವಣೆಗೆ ಅವಕಾಶವೂ ಕಡಿಮೆ. ಹಾಗೂ ಅದರ ಬಗ್ಗೆ ಎಲ್ಲಾ ಶಿಕ್ಷಕರಿಗೆ ಪರಿಪೂರ್ಣವಾದ ಜ್ಞಾನ ಇದೆ ಎಂದು ಹೇಳಲು ಬರುವುದಿಲ್ಲ.  ಪರಿಕಲ್ಪನೆಗಳ ವರ್ಗಾವಣೆಯಿಂದ ಮಕ್ಕಳಲ್ಲಿ ಸಾಮರ್ಥ್ಯ ವೃದ್ದಿಗೆ ಆಹಾರ ದೊರಕುತ್ತದೆ. ಮಾಹಿತಿ ವರ್ಗಾವಣೆ ಪರಿಕಲ್ಪನೆಯ ಆಂಶಿಕ ಭಾಗವೇ ಹೊರತು ಪರಿಪೂರ್ಣತೆ ಅಲ್ಲ. 
   ಮಕ್ಕಳಲ್ಲಿ ಸಾಮರ್ಥ್ಯ ವೃದ್ದಿಗೆ  ಚಟುವಟಿಕೆ ಅಗತ್ಯ.  ನಾನು ಶಿಶುವಿಹಾರದಲ್ಲಿ ಕಾರ್ಯ ನಿರ್ವಹಿಸುವಾಗ  ನಿರ್ಧಿಷ್ಠ ಸಾಮರ್ಥ್ಯ ಗುರುತಿಸಿ ಅದಕ್ಕೆ ಚಟುವಟಿಕೆಗಳನ್ನು ಜೋಡಿಸುತ್ತಿದ್ದೇವು. ಉದಾಹರಣೆಗೆ ಮಕ್ಕಳಿಗೆ ತಾಲ್ಮೇ ಬರಬೇಕು ಎಂದು  ಮರದ ಮಣಿಗಳನ್ನು  ಬರಿ ದಾರದಲ್ಲಿ ಪೋಣಿಸಲು ನೀಡುತ್ತಿದ್ದೆವು. ಭತ್ತ ಮತ್ತು ಗೋದಿಯನ್ನು ಮಿಶ್ರಣ ಮಾಡಿ ಅದನ್ನು ಬೇರ್ಪಡಿಸಲು ಕೊಡುತ್ತಿದ್ದೇವು. ಇದೇ ರೀತಿ ಅನೇಕ ಚಟುವಟಿಕೆಗಳನ್ನು ನೀಡುತ್ತಿದ್ದೇವು. ಆದರೇ ಅಲ್ಲಿ ಯಾವುದೇ ಔಪಚಾರಿಕ ಪಠ್ಯಕ್ರಮವಾಗಲಿ ಇರುತ್ತಿರಲಿಲ್ಲ. ನಮಗೆ ಸಂಪೂರ್ಣ ಸ್ವಾತಂತ್ರ್ಯ ಇತ್ತು. ಆದರೇ ಈಗ ಆ ಸ್ವಾತಂತ್ರ್ಯಾವಾಗಲಿ ಇಲ್ಲ. ಪಠ್ಯದಿಂದ ಹೊರತಾದ ಚಟುವಟಿಕೆ ರೂಪಿಸಲು ಅವಕಾಶ ಇಲ್ಲ.
   ಹಾಗೆ ಇಂದು ಮಕ್ಕಳಿಗೆ ಬೇಕಾಗಿರುವುದು ಅವರ ಸಾಮರ್ಥ್ಯ ವೃದ್ಧಿಗೆ ಅವಕಾಶ ಹಾಗೂ ವಾತವರಣ ಮುಖ್ಯ. ನಮ್ಮ ಶಿಕ್ಷಣ ಕ್ರಮದಲ್ಲಿ ಅನೇಕ ದೋಷಗಳಿವೆ. ನಿಮಗೆ ಗೊತ್ತಿರಬಹುದು ಸಾರ್ ಸಿ.ಸಿ.ಇ. ಬಂದಿದೆ. ಅದರೇ ಅದರ ಕಾರ್ಯಗತ ಮಾಡುವಲ್ಲಿ ಆಗುತ್ತಿರುವ ತೊಂದರೇಗಳು ಹಾಗೂ ಬದಲಾವಣೆಗಳು ಮತ್ತೇ ಶಿಕ್ಷಣದ ದಿಕ್ಕನ್ನು ಮತ್ತೇಲ್ಲಿಗೋ ತೆಗೆದುಕೊಂಡು ಹೋಗುತ್ತಿರುವುದು.  ಇಡಿ ಪರಿಸರ ಬದಲಾಗದೆ ಶಿಕ್ಷಣದ ದಿಕ್ಕು ಬದಲಾಗಲು ಸಾದ್ಯವಿಲ್ಲ. ಇದರಲ್ಲಿ ಶಿಕ್ಷಕರ ದೃಷ್ಟಿಕೋನವು ಬದಲಾಗಬೇಕು. ಸರ್ಕಾರ ಹೊಸ ವ್ಯವಸ್ಥೆ ಜಾರಿಗೊಳಿಸುವಾಗ ಅದಕ್ಕೇ ಪೂರಕ ವಾತವರಣ ರೂಪಿಸಬೇಕು. ಕೇವಲ ದಾಖಲಿಕರಣಕ್ಕೋಸ್ಕರ ವ್ಯವಸ್ಥೆ ಜಾರಿಗೊಳಿಸಿದರೆ ಅದರ ಫಲ ಸಹ ದಾಖಲಿಕರಣಕ್ಕೋಸ್ಕರ ಮಾತ್ರ ಆಗಿರುತ್ತದೆ. ಆದರೆ ಇಲ್ಲಿ ಬಲಿ ಪಶುಗಳಾಗುವುದು ಮಾತ್ರ ಮಕ್ಕಳು ಮತ್ತು   ಶಿಕ್ಷಕರು. ಎಷ್ಟೋ ಜನ ಅಧಿಕಾರಿಗಳು ಶಾಲೆಗೆ ಬೇಟಿ ನೀಡಿದಾಗ ಹೇಳುವ ಮಾತು ಎಲ್ಲಾ ಶಿಕ್ಷಕರ ಗಮನಕ್ಕೆ ಬಂದಿರಬಹುದು "ನೀವು ಹೇಗೆ ಬೋಧಿಸಿ ಅದು ಮುಖ್ಯವಲ್ಲ ನಮಗೆ ದಾಖಲೆ ಮುಖ್ಯ ಎಂಬುದು" ಇಂತಹ ಸಂದರ್ಭದಲ್ಲಿ ಶಿಕ್ಷಕರು ಏನು ಮಾಡಲು ಸಾಧ್ಯ. ಅಂದರೇ ಬದಲಾವಣೆ ಎಲ್ಲಾ ದಿಕ್ಕಿನಲ್ಲೂ ಆಗಬೇಕಿದೆ
ಉತ್ತಮ ಚರ್ಚೆಯಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದಗಳು ಪ್ರಭು ಸಾರ್

hulagappa hadaginala's profile photo
hbhadaginala@gmail.com


ಈ ಲೇಖನ ತುಂಬಾ  ಚನಾಗಿದೆನಾ.ಸರ್
Kiran Kumar
Kiran Kumar's profile photo
nandukiran.kk@gmai
Very good opinion sir


Mahabaleshwar Bhagwat's profile photo
bhagwatmc@gmail.com
kedoor
 Really nice discussion.ರಾಮಚಂದ್ರ ಸರ್ ಹೇಳಿದ ಹಾಗೆ ಬದಲಾವಣೆ ಎಲ್ಲಾ
ದಿಕ್ಕಿನಲ್ಲಿ ಸಹ ಆಗಬೇಕಿದೆ,ನಮ್ಮಲ್ಲಿ, ಶಾಲಾ ವಾತಾವರಣದಲ್ಲಿ,ಕಲಿಸುವ,ಕಲಿಯುವ
ವಿಧಾನದಲ್ಲಿ.


1 comment:

Unknown said...

Ramachandra Karur Seenappa
jashreeramu@gmail.com
TEACHER

ಚರ್ಚೆ ಮುಂದುವರಿಸೋಣ
ಪ್ರಭು ಸಾರ್ ಮಕ್ಕಳಿಗೆ ಪ್ರಶ್ನೆ ಹಾಕಿದಾಗ ಬಂದ ಉತ್ತರಗಳಲ್ಲಿ ಒಂದು ಗಣಿತ ಪಾಠಗಳು ಅರ್ಥವಾಗುತ್ತಿಲ್ಲ ಎಂಬುದು. ಇಂದು ಇದಕ್ಕೆ ಸ್ಪಲ್ಪ ಉತ್ತರ ಹುಡುಕೋಣ.
ಮೊದಲನೇಯದಾಗಿ ಗಣಿತ ಎಂದರೇ ’ಸುಲಭಿಕರಿಸುವುದು’ ಎಂದು ನನಗೆ ಗಣಿತ ಬೋಧಿಸಿದ ಶಿಕ್ಷಕರು ಹೇಳಿದ ನೆನಪು. ನಿಜವಾಗಲು ಅದು ಹೌದಲ್ಲವಾ. ಎಣಿಕೆ-ಸಂಕಲನ- ಗುಣಾಕಾರ - ಹೀಗೆ ಒಂದು ಇನ್ನೋಂದನ್ನು ಸರಳಿಕರಿಸುತ್ತಾ ಸಾಗುವ ಹಂತಗಳಾಗಿವೆ. ಅದರೇ ಈ ರೀತಿ ಸರಳೀಕರಿಸುತ್ತಾ ಹೋದಂತೆ ಅದು ಜಟಿಲತೆಯನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಸರಳವಾಗಬೇಕಿದ್ದ ಗಣಿತ ಕಬ್ಬಿಣದ ಕಡಲೆಯಾಗಿರುವುದಕ್ಕೆ ಕಾರಣ ಗಣಿತ ವಿಷಯದ ಬಗ್ಗೆ ಇರುವ ಕೆಲವು ತಪ್ಪು ಅಭಿಪ್ರಾಯಗಳು ಕಾರಣವಾಗಿದೆ ಎಂಬುದು ನನ್ನ ಅಭಿಪ್ರಾಯ. ಹೇಗೆಂದರೇ ಒಂದರಿಂದ ನಾಲ್ಕನೇ ತರಗತಿಯ ಗಣಿತದ ಪಠ್ಯವನ್ನು ಒಮ್ಮೆ ಗಮನಿಸಿ. ಇಲ್ಲಿ ಗಣಿತದ ಮೂಲಕ್ರಿಯೆಗಳ ಬಗ್ಗೆ ಹೆಚ್ಚು ಚಟುವಟಿಕೆಗಳು ಇವೆ. ಇಲ್ಲಿ ಸ್ಪಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಮೂರಕ್ಗ್ರಿಯೆಗಿಂತ ಗಣಿತದ ಮೂಲ ಪರಿಕಲ್ಪನೆಗಳಿಗೆ ಆಧ್ಯತೆ ಕಡಿಮೆ ಇರುವುದು ಗಮನಿಸಬಹುದು. ಅಂದರೇ ಕೂಡುವುದು, ಕಳೆಯುವುದು ಗುಣಾಕಾರ ಭಾಗಾಕಾರ ಇವು ಮೂಲ ಕ್ರಿಯೆಗಳಾದರೆ ಇವುಗಳನ್ನು ಅರ್ಥೈಸಿಕೊಳ್ಳಲು ಮೂಲ ಪರಿಕಲ್ಪನೆಗಳ ಅವಶ್ಯಕತೆ ಇದೆ. ಅವುಗಳೆಂದರ ದೊಡ್ಡದು, ಚಿಕ್ಕದು, ಹೆಚ್ಚು, ಕಡಿಮೆ, ಎರಡು ಅಂಶಗಳ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸ ಗುರುತಿಸುವುದು. ಇತ್ಯಾದಿ. ಇವು ಮಕ್ಕಳಲ್ಲಿ ಗಣಿತದ ಮೂಲಕ್ರಿಯೆಗಳನ್ನು ಅರ್ಥೈಸಿಕೊಳ್ಳುಲು ಅಗತ್ಯವಾದ ಸಾಮರ್ಥ್ಯಗಳಾಗಿವೆ.ಆದರೇ ಈ ಹಂತದಲ್ಲಿ ಮೂಲ ಪರಿಕಲ್ಪನೆಗಳ ಬಗ್ಗೆ ಹೆಚ್ಚು ಚಟುವಟಿಕೆಗಳನ್ನು ಜೋಡಿಸುವುದರ ಬದಲು ಮೂಲಕ್ರಿಯೆಗಳಿಗೆ ಆಧ್ಯತೆ ನೀಡಿರುವುದರಿಂದ ( ಅನಗತ್ಯ ಮಗ್ಗಿ ಬಾಯಿಪಾಠ, ಇತ್ಯಾದಿ) ಗಣಿತ ಆ ಹಂತದಲ್ಲಿ ಕಾಠಿಣ್ಯತೆಯನ್ನ ಪಡೆದುಕೊಳ್ಳುತ್ತಾ ಸಾಗುತ್ತದೆ. ಮೂಲ ಪರಿಕಲ್ಪನೆಗಳಿಗೆ ಚಟುವಟಿಕೆಗಳನ್ನುಜೋಡಿಸಿದ ನಂತರ ಮೂಲಕ್ರಿಯೆಗಳಿಗೆ ಚಟುವಟಿಕೆ ಜೋಡಿಸ ಬೇಕು. ಆಗ ಪುನಃ ಪರಿಕಲ್ಪನೆಗಳನ್ನು ಆಧರಿಸಿಯೇ ಮೂಲಕ್ರಿಯೆಗಳಿಗೆ ಚಟುವಟಿಕೆ ಜೋಡಿಸಬೇಕು. ಉದಾಹರಣೆಗೆ ಮೂಲಪರಿಕಲ್ಪನೆಗಳಲ್ಲಿ (ಸಾಮರ್ಥ್ಯ) ಒಂದು ವ್ಯತ್ಯಾಸಗುರುತಿಸುವುದು. ಇದನ್ನು ಆದರಿಸಿ ಹೇಗೆ ಚಟುವಟಿಕೆ ಜೋಡಿಸುವುದೆಂದರೆ 1+1=?, 1+2=? 1+3=? ಈ ರೀತಿ ಮೊದಲನೇ ಲೆಕ್ಕಕ್ಕು ಎರಡನೇ ಲೆಕ್ಕಕ್ಕೂ ಸ್ಪಲ್ಪ ಹೋಲಿಕೆ ಇರುವ ಲೆಕ್ಕಗಳನ್ನು ನೀಡುವುದು. [2+2= 3+3= 4+4= ] ಈ ರೀತಿ ಲೆಕ್ಕಗಳನ್ನು ನೀಡುವುರಿಂದ ಮಕ್ಕಳಲ್ಲಿ ವ್ಯತ್ಯಾಸ ಗುರುತಿಸುವ, ಸಂಬಂಧಿಕರಿಸುವ ಸಾಮರ್ಥ್ಯಗಳು ವಿಕಾಸ ಹೊಂದುತ್ತಾ ಸಾಗುತ್ತದೆ. ಆಗ ಗಣಿತ ಸರಳಿಕರಣ ಗೊಳ್ಳುತ್ತಾ ಸಾಗುತ್ತದೆ. ಆದರೇ ಪ್ರಾಥಮಿಕ ಶಾಲೆಯಲ್ಲಿ ಈ ರೀತಿಯ ಬೋಧನೆ ನಡೆಯುತ್ತದೆಯೇ? ನೇರವಾಗಿ ಮೂಲಕ್ರಿಯೆಗಳ ಹಂತಕ್ಕೆ ಹೋದಾಗ ಕಠಿಣಗೋಂಡಂತೆ ಗಣಿತ ನಿರಸ ವಾಗುತ್ತಾ ಸಾಗುತ್ತದೆ. ಪ್ರೌಢಶಾಲೆಗಳಲ್ಲಿ ಇನ್ನು ಒಂದು ಹಂತ ಮುಂದೇ ಹೋಗುವುದನ್ನು ನೋಡಿದ್ದೇವೆ. ಗಣಿತ ಅರ್ಥೈಸಿಕೊಂಡು ಮಾಡುವುದಕ್ಕಿಂತ ಪ್ರಮೇಯ, ಇತ್ಯಾದಿ ಲೆಕ್ಕಗಳನ್ನು 50 ಸಾರಿ 60 ಸಾರಿ ಬರೆಸಿ ಬಾಯಿಪಾಠ (ಕೈಪಾಠ) ಮಾಡಿ ಬರೆಯಲು ಹೇಳುವುದನ್ನು ನೋಡಿದ್ದೇವೆ. ಈ ಸಂದರ್ಬದಲ್ಲಿ ಮಕ್ಕಳು ಅದನ್ನುಆರ್ಥ ಮಾಡಿಕೊಂಡು ಮಾಡುವುದರ ಬದಲು ಬಲವಂತವಾಗಿ, ಯಾಂತ್ರಿಕವಾಗಿ ನಕಲು ಮಾಡಲು ತಮ್ಮಶ್ರಮವನ್ನು ತೊಡಗಿಸುತ್ತಾರೆ. ಇದರಿಂದ ಸ್ಪಲ್ಪ ಯಶಸ್ಸು ದೊರೆತಂತೆ ಬಾಸವಾದರೂ ಅದು ಕ್ಷಣಿಕವಾಗಿರುತ್ತದೆ. ಆದ್ದರಿಂದ ಯಾವುದೇ ವಿಷಯ ಬೋಧಿಸುವಾಗ ಪರಿಕಲ್ಪನೆಗೆ ಒತ್ತು ನೀಡಿದರೆ ಆ ಕಲಿಕೆ ಬದುಕಿಗೆ ಹತ್ತಿರಾಗುತ್ತದೆ ಮತ್ತು ಮಕ್ಕಳ ಹೃದಯಕ್ಕೆ ಹತ್ತಿರವಾಗುತ್ತದೆ. ಇಂತಹ ಕಲಿಕೆ ಶಾಶ್ವತವಾಗಿರುತ್ತದೆ ಎಂಬುದು ನನ್ನ ಅನಿಸಿಕೆ. ನಾನು ಗಣಿತ ಶಿಕ್ಷಕನಲ್ಲ. ಆದರೇ ನನ್ನ ಶಿಶುವಿಹಾರ ಹಾಗೂ ಪ್ರಾಥಮಿಕ ಶಾಲೆಯ ಅನುಭವ ಆಧರಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಈ ವಿಚಾರವಾಗಿ ಹೆಚ್ಚಿನ ವಿವರಣೆ ತಿಳಿದಿದ್ದರೆ ಶಿಕ್ಷಕರು ವೇದಕೆಯಲ್ಲಿ ಹಂಚಿಕೊಳ್ಳಿ
ಧನ್ಯವಾದಗಳು