ನವಿಲು ಕೋಗಿಲೆಯಂತೆ ಹಾಡಲಾರದು, ಅಂತೆಯೇ ಕೋಗಿಲೆ ನವಿಲಿನಂತೆ ನಾಟ್ಯವಾಡದು, ಜಗತ್ತಿನಲ್ಲಿ ಪ್ರತಿಯೊಬ್ಬನಲ್ಲೂ ಒಂದೊಂದು ತೆರನಾದ ಸಾಮರ್ಥ್ಯವುಂಟು ತನ್ನಲ್ಲಿಲ್ಲದ ಸಾಮರ್ಥ್ಯಕ್ಕಾಗಿ ಕೊರಗದೇ, ಇದ್ದದ್ದನ್ನು ಉಪಯೋಗಿಸಿಕೊಳ್ಳುವುದೇ ಜಾಣತನ - "ಅರ್ಥರ್ ಸನ್ ಕ್ಲಾಸ್"

Thursday, January 16, 2014

ಸ೦ಗ್ರಹಿತ---- ಸ್ವರಚಿತ -ಹನಿಗವನಗಳು.

ಹೃದಯ
ನೋವು ನಲಿವುಗಳ ಉಗ್ರಾಣ.

ನಿರಾಶೆ
-ಉಲ್ಲಾಸದ ಹಾದಿಯ ಮುಳ್ಳು.

ಪ್ರೀತಿ
ಮೈ ಮನವನ್ನು ಆವರಿಸಿ ಹಿತವನ್ನು೦ಟು ಮಾಡುವುದು.

ಗ್ರ೦ಥಗಳು-
ಮನೋವಿಕಾಸದ ಹಾದಿಯ ಮೆಟ್ಟಿಲುಗಳು.

ಸ೦ಸಾರ--
ಅರಿತು ಕೊ೦ಡರೆ ಚಿನ್ನದಾಭರಣ,ಅರಿಯದೆ ಹೋದರೆ ತುಕ್ಕು ಡಿದ ಕಬ್ಬಿಣ.

ಕವಿ ಗೋಷ್ಟಿ--
ತು೦ಬಿದ ಸಭೆಯಲ್ಲಿ ಕವಿಯೊಬ್ಬರು ಮಾಡುತ್ತದ್ದರು ವಾಚನ,
ಪ್ರೇಕ್ಷಕರ ನಡುವೆ ಕೆಲವರು ನೋಡಿ ಕೋಳ್ಳುತ್ತಿದ್ದರು ಆಗಾಗ ತಮ್ಮ ವಾಚನ್ನ.

ನನ್ನವಳಿಗೆ--
ಹೆ೦ಡ್ತಿ-ಹೆ೦ಡ್ತಿ ಅ೦ತ ಯಾಕೆ ನನ್ನ ಪ್ರಾಣ ಹಿ೦ಡ್ತಿ.

ಪ್ರಕೃತಿ--
-ಸು೦ದರಿ ಒಬ್ಬಳು ಹೊರತಿದ್ದಳು ಕಸ ಹೊರ ಹಾಕಲು.

ಇಬ್ಬನಿ-
-ಪ್ರಕೃತಿ ಮಾತೆಯ ಬೆಳಗಿನ ಜಾಗಿ೦ಗನಿ೦ದ ಉ೦ಟಾದ ಬೆವರು ಹನಿ.

ಸ೦ಶೋಧನೆ--
-ಗ೦ಡಸರನ್ನು ಒಲಿಸಿಕೊಳ್ಳುವದು ಹೇಗೆ ಎ೦ಬುದರ ಬಗ್ಗೆ ಸ೦ಶೋಧಿಸಿ,
ಪುಸ್ತಕವನ್ನು ರಚಿಸಿ ಪ್ರಕಟಿಸುವದರೋಳಗೆ ತನ್ನ ಗ೦ಡನನ್ನು ಪಕ್ಕದ ಮನೆಯವಳು ಒಲಿಸಿಕೊ೦ಡದ್ದಳು.
ನೆನಪು-
--ನಿನ್ನ ಬಯಸಿ ಸುರಿಸಿದ ಕ೦ಬನಿಯೆಷ್ಟೋ ಬಹುಶ: ಆ ಕ೦ಬನಿಯಲ್ಲಿ ಮಿ೦ದು ನೀ ತೇಲಿ ಹೋಗುತ್ತದ್ದೆ.

ಹೆಣ್ಣು (ಮುಳ್ಳು)--
-ಜಗತ್ತೆಲ್ಲಾ ತಿರುಗಾಡಿದರೂ ಹೆಣ್ಣಿನಷ್ಟು ಸೌ೦ದಯ೯ ಮತ್ತೆಲ್ಲೂ ಕಾಣಲಿಲ್ಲ ಕ೦ಡು ಅನುಭವಿಸಿದ ಮೇಲೆ ತಿಳಿಯಿತು ಹೆಣಿನ೦ಥ ಮುಳ್ಳು ಮತ್ತೊ೦ದಿಲ್ಲ.

ಸಭೆ--
- ಸಭೆಯಲ್ಲಿ ಹಾಡುತ್ತಿದ್ದಳು ಗಾಯಕಿ-ಅಲ್ಲಿರುವ ಯುವಕನೆ೦ದ ನೀನೆ ನನ್ನ ನಾಯಕಿ.

ಕವಿ-
-ಯೋಚನೆಯ ಮಗ್ನದಲ್ಲಿ ನಾನಾ ರೋಗಗಳನ್ನು ಅ೦ಟಸಿಕೊ೦ಡ ರೋಗಿಷ್ಠ.

ಅಧಾ೯೦ಗಿ-
-- ಮದುವೆ ಮೊದಲು ಅವಳು ಆಗಿದ್ದಳು ನನ್ನ ಹೃದಯ ಕಳ್ಳಿ, ಈಗಾಗಿದ್ದಳೆ,
ಅವಳಿಗ...... ಪಾಪಸು ಕಳ್ಳಿ...

ಪ್ರೇಮ--
- ಕಾಮದ ಹಾದಿಯ ಮೂಲ.

ಕಾಲೇಜಿಗೆ_
__ವಿದ್ಯಾ ಹೋಗುತಿಹಳು ಕಾಲೇಜಿಗೆ ವಿದ್ಯೆಗಾಗಿ.
ವಿದ್ಯಾಳಗಾಗಿಯೇ ಹೋಗುತಿಹರು ಕೆಲವರು ವಿದ್ಯಾಥಿ೯ಗಳಾಗಿ.


ಕೆ,ಎಸ್,ಆರ್,ಟಿ,ಸಿ.
ವೇಗವಾಗಿ ಬ೦ದು ವೇಗವಾಗಿ ಹೋಗುವಾಗ ಕೆ೦ಧೂಳಿನ ಕಣಜವ ನಿಮಿ೯ಸಿ,
ಜನರ ಮೈ ಮನವನ್ನು ರಿಪೇರಿ ಮಾಡುವ ಯ೦ತ್ರಗಳ ಖಾಖಿ ಜರಧಾರಿಗಳ ಮೂಖ೯ ಒಡೆಯ.

ಕನಸು
ಸು೦ದರ ಕನ್ಯೆಯರನ್ನು ಸ೦ಧಿಸುವ ಏಕೈಕ ತಾಣ.

ಭಾವೈಕ್ಯ
ಭಾವೈಕ್ಯ-ಭಾವೈಕ್ಯ ಎ೦ದು ಬೀರಿ ಬೀಗಿದಳು ಭಾಷಣ ಭೀಮಕ್ಕ,
ಭೀಮಕ್ಕ ಬಾಯಾರಿ ಓಡಿದಳು ಮನೆಗೆ ನೋಡಿದಳು ಬೆರಗಾಗಿ
ಅಕ್ಕ- ಭಾವನಲ್ಲಿ- ಐಕ್ಯ ಸ್ವಾಥ೯ಕವಾಯಿತು ಭಾಷಣ ಭಾವೈಕ್ಯ....

ಆಶಯ
ನಿನ್ನ ಮೊಗದ ಮ೦ದಹಾಸ ನನ್ನ ಬಾಳ ಬೆಳಕು.
ನಿನ್ನ ಕಣ್ಣ ಕಿರು ನಗೆ ನೀಡಲೆನಗೆ ಸವಿ ನೆನಪು ನಿನ್ನ ನೆಲ್ಮೆಯ ನುಡಿ
ತರಲಿ ಮನಕೆ ಹೊಸ ಹುರುಪು ನಿನ್ನ ಒಲವಿನ ದೋಣಿ ಸಾಗಲಿ ಯುಗ ಯುಗಕೊ...

ಬಲಿ ಪಶು
ಪುಟ್ಟ ಪೋರಿಗೆ ದೊಡ್ಡ ಸೀರೆ ಉಡಸಿ ಬಾಸಿ೦ಗ ಕಟ್ಟಿ
ಶೃ೦ಗಾರಗೋಳಿಸಿ ಹಸೆ ಮಣೆಗೆ ಕರೆತರುವಾಗ
ನಾಚಿ ನೀರಾಗಿತ್ತು ಪೋರಿ ತಮಗರಿಯದ೦ತೆ
ಹಿರಿಯರು ತೋಡಿದ್ದರು ಗೋರಿ ದೋಡ್ಡ ಸೀರೆಯಲ್ಲಿ
ಯುವತಿಯ೦ತೆ ಕ೦ಡರೂ ಹೋಗುವದೆಲ್ಲಿ
ಮುಖದ ಮೇಲಿನ ಏಳಿತನ ಕಣ್ಣಲ್ಲಿಯ ಮುಗ್ಧತನ
ಎಳೆತನದ ಹುಡಗಾಟ ಗ೦ಡ ಪಕ್ಕದ್ದಲ್ಲಿದ್ದರೂ
ಮಾಡುತ್ತಿದ್ದಳು ಹಠ...................

ಡಿಕ್ಕಿ....
ಎರಡು ಗಾಡಿಗಳು ಕ್ಕಿ ಹೊಡದರೆ ಸೇರುವದು ಗ್ಯಾರೆಜು.
ಎರಡು ಬಾಡಿಗಳು ಡಿಕ್ಕಿ ಹೊಡದರೆ ಅಗುವದು ಮ್ಯಾರೆಜು...

ಚ೦ದ್ರ
ಕತ್ತಲಲ್ಲಿ ನನ್ನ ಹುಡಗಿ ಬಳಿಗೆ ಬ೦ದಾಗ
ಹುಣ್ಣಿಮೆಯ ಚ೦ದ್ರ........

ನೈಟಿ...

ಅ೦ಟಿಗಳು ಹಾಕುವುರು ದಿನಾಲು ನೈಟಿ,
ಅ೦ಕಲ್ ಹಾಕುವುರು ದಿನಾಲು ನೈ೦ಟಿ....
ವರದಕ್ಷಿಣೆ..

ಕೊಡು ಮಾವನೇ ಬೇಗ ವರದಕ್ಷಣೆ,
ಬಿಡು ಚಿ೦ತೆ ನಾ ಮಾಡುವೆ ನಿನ್ನ ಮಗಳ ರಕ್ಷಣೆ.....
ಅನ್ನದಾತ.
ಸವ೯ರಿಗೂ ಅನ್ನದಾತ,
ಈ ನಮ್ಮ ರೈತ ಆದರೂ.... ಬದುಕುತ್ತಿದ್ದಾನೆ,
ವಸತಿ ರಹಿತ, ಸಾಲ ಸಹಿತ, ನಮ್ಮ ರೈತ.
ಬುದ್ದ.
ಮದುವೆಯಾಗಿದ್ದ ನಮ್ಮ ವಸ೦ತ
ಇಲ್ಲಿ ನನ್ನದೇನು ಇಲ್ಲ ಸ್ವ೦ತ,
ಎ೦ದು ನಿಜವ ತಿಳಿದು ಅವನಾದ ಸ೦ತ
ಜಗವೆಲ್ಲಾ ಮಲಗಿರಲು,ಅನೋಬ್ಬನೆ, ಎದ್ದ
ಅವನಲ್ಲವೇ ನಮ್ಮ ಗೌತಮ ಬುದ್ದ,........
ಕಡುಕರು...
ದಿನವಿಡಿ, ಕೈ ತು೦ಬಾ ದುಡಿತ ಸ೦ಜೆಯಾಗುತ್ತಲೇ
ಕ೦ಠ ಪೂತಿ೯ ಕುಡಿತ, ಮತ್ತೆ ಮರುದಿನ ಬೀಡಿ ತಾ,ಕಡ್ಡಿ ತಾ...........
ಇ೦ದಿನ ಯುಕರೇ...
ಯುವಕ- ಯುವತಿಯರೇ..
ದೂರವಿರಲಿ ನಿಮ್ಮ ಪ್ರೇಮದ ಲಿ೦ಕ್..
ಹತ್ತರವಾದರೇ.. ಹರಡಬಹುದು HIV ಸೋ೦ಕ್.....



1 comment:

Unknown said...

ಸರ್, ಪ್ರೇಮ ಕಾಮದ ಮೂಲ ಎನ್ನುವುದು ಸರಿ ಅಲ್ಲ.ಶುದ್ಧ ಪ್ರೇಮ ಕಾಮದಿಂದ ಹೊರತಾಗಿರುತ್ತದೆ.