ನವಿಲು ಕೋಗಿಲೆಯಂತೆ ಹಾಡಲಾರದು, ಅಂತೆಯೇ ಕೋಗಿಲೆ ನವಿಲಿನಂತೆ ನಾಟ್ಯವಾಡದು, ಜಗತ್ತಿನಲ್ಲಿ ಪ್ರತಿಯೊಬ್ಬನಲ್ಲೂ ಒಂದೊಂದು ತೆರನಾದ ಸಾಮರ್ಥ್ಯವುಂಟು ತನ್ನಲ್ಲಿಲ್ಲದ ಸಾಮರ್ಥ್ಯಕ್ಕಾಗಿ ಕೊರಗದೇ, ಇದ್ದದ್ದನ್ನು ಉಪಯೋಗಿಸಿಕೊಳ್ಳುವುದೇ ಜಾಣತನ - "ಅರ್ಥರ್ ಸನ್ ಕ್ಲಾಸ್"

Saturday, March 22, 2014

ಮಕ್ಕಳ ಹಕ್ಕುಗಳ ನೆಪದಲ್ಲಿ ಶಿಕ್ಷಕರಿಗೇಕೆ ಶಿಕ್ಷೆ? - ಮೂಲ -ಕನ್ನಡ ಪ್ರಭಾ

ಮಕ್ಕಳ ಹಕ್ಕುಗಳ ನೆಪದಲ್ಲಿ ಶಿಕ್ಷಕರಿಗೇಕೆ ಶಿಕ್ಷೆ?

22 Mar 2014 04:32 AM
                                                                     ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಪಾಲಕರು ರೌದ್ರಾವತಾರ ತಾಳುತ್ತಾರೆ. ಅಂತಿಮವಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದಿದ್ದರೂ ಇದೇ ಪಾಲಕರಿಂದ ಶಿಕ್ಷಕರು ಬೈಗುಳಗಳ ಸಹಸ್ರನಾಮ ಸ್ವೀಕರಿಸಬೇಕು. ಎಲ್ಲ ಮುಗಿಸಿ ಉದ್ಯೋಗ ವಲಯಕ್ಕೆ ಕಾಲಿಟ್ಟ ಮೇಲೆ ಅಲ್ಲೂ ಫಿಟ್ ಎನಿಸಿಕೊಳ್ಳದಿದ್ದರೆ, ಆ ಸಂಸ್ಥೆಯ ಬಾಸ್ ಎನಿಸಿಕೊಂಡವನ ಮೊದಲ ಬೈಗುಳ ಕೂಡ ಶಿಕ್ಷಕರಿಗಿರುತ್ತದೆ. ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಬಂದ ದಿನದಿಂದ ಶೈಕ್ಷಣಿಕವಾಗಿ ಮುಂದುವರಿದ ರಾಜ್ಯಗಳಲ್ಲಿ ಇಂತಹ ಸಾಕಷ್ಟು ಗೋಳುಗಳು ಕೇಳಿಬರುತ್ತಿವೆ. ಮಕ್ಕಳ ಹಕ್ಕುಗಳ ನೆಪದಲ್ಲಿ ದೊಡ್ಡದೊಂದು ಪ್ರಲಾಪ ನಡೆಯುತ್ತಿದೆ. ಶಿಕ್ಷಕ ವಲಯದ ನೈತಿಕ ಸ್ಥೈರ್ಯವನ್ನು ಹಾಳುಮಾಡುವ ಪ್ರಯತ್ನ ನಡೆದಿದೆ. ಇದೆಲ್ಲದರ ಪರಿಣಾಮವಾಗಿ ನಮಗೇ ಗೊತ್ತಿಲ್ಲದಂತೆ ನಮ್ಮ ಮನೆಯ ಮಕ್ಕಳನ್ನು 'ಅತಿ ಸೂಕ್ಷ್ಮಜೀವಿ'ಗಳನ್ನಾಗಿ ರೂಪಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಮೊನ್ನೆ ನಡೆದ ಘಟನೆಯೊಂದು ಸಣ್ಣ ಉದಾಹರಣೆಯಷ್ಟೆ. ಆ ಇಬ್ಬರು ಹೆಣ್ಣು ಜೀವಗಳನ್ನು ಕಳೆದುಕೊಂಡ ತಾಯಂದಿರ ದುಃಖಗಳಿಗೆ ನಮ್ಮ ಯಾವ ಮಾತುಗಳು ಸಂತೈಸಲಾರವು. ಆದರೆ ಈ ಸಂದರ್ಭದಲ್ಲಿ ರಾಜ್ಯದಲ್ಲಿರುವ ಸುಮಾರು ಒಂದೂಕಾಲು ಕೋಟಿ ಮಕ್ಕಳ ಪಾಲಕರು ಒಮ್ಮೆ ತಾವು ಹೋಗುತ್ತಿರುವ ದಾರಿಯ ಬಗ್ಗೆ ಆಲೋಚಿಸಬೇಕು. ಈ ಕಾನ್ವೆಂಟ್ ಶಾಲೆಯ ಇಬ್ಬರು ಶಿಕ್ಷಕರನ್ನು ಮರೆತು ನಮ್ಮ-ನಿಮ್ಮ ಮನೆಯ ಮಕ್ಕಳು ಓದುತ್ತಿರುವ ಶಾಲೆಯ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಇದೆಲ್ಲದರ ಜತೆಗೆ ಮಕ್ಕಳನ್ನು ಎಂತಹ ಭ್ರಮಾ ಲೋಕಕ್ಕೆ ತಳ್ಳುತ್ತಿದ್ದೇವೆ ಎಂಬುದನ್ನು ಆಲೋಚಿಸಿ. ಆಗ ಖಂಡಿತ ಶಿಕ್ಷಕರಿಗೆ ಬೈಯುವವರ ಸಂಖ್ಯೆ ಕಡಿಮೆಯಾಗುತ್ತದೆ. ಸುಮಾರು 15 ವರ್ಷಗಳ ಹಿಂದಿನ ಮಾತಿದು. ನಮ್ಮ ಊರಿನ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕ, ಶಿಕ್ಷಕಿಯರು ಶಾಲೆಯ ಹತ್ತಿರವಿರುವ ಯಾವುದಾದರೊಂದು ಮನೆಯಲ್ಲಿ ವಾಸವಾಗುತ್ತಿದ್ದರು. ನಾಲ್ಕೂವರೆಗೆ ಶಾಲೆ ಬಿಟ್ಟು ಮನೆಗೆ ಬರುವಷ್ಟರಲ್ಲಿ ಆರು ಗಂಟೆಯಾಗುತ್ತಿತ್ತು. ಶಾಲೆಯಿಂದ ಬರುವಾಗ ದಾರಿಯಲ್ಲಿ ಸಿಗುವ ಪ್ರತಿಯೊಬ್ಬರ ಮನೆಯ ಎದುರು ಒಂದೈದು ನಿಮಿಷ ನಿಂತು ಮಾತನಾಡಿ, ಅವರ ಮಕ್ಕಳ ಬಗ್ಗೆ ದಿನದ ಪ್ರಮಾಣಪತ್ರ ನೀಡಿಯಾಗುತ್ತಿತ್ತು. 'ಮನೇಲಿ ಒಂದಕ್ಷರ ಓದಲ್ಲ, ಸರಿಯಾಗಿ ನಾಲ್ಕು ಹೊಡೆದು ಓದ್ಸಿ. ಬೆತ್ತದ ಕೋಲು ಬೇಕಾದ್ರೆ ನಾವೆ ಕೊಡ್ತೀವಿ' ಎನ್ನುವ ಮಾತುಗಳು ತಂದೆ-ತಾಯಂದಿರ ಬಾಯಿಂದ ಬರುತ್ತಿತ್ತು. 'ಹೇ... ಹಾಗೇನಿಲ್ಲ, ಚೆನ್ನಾಗೆ ಓದ್ತಿದಾನೆ, ಸ್ವಲ್ಪ ಸುಧಾರಿಸಬೇಕು' ಎಂದು ಮಕ್ಕಳೆದುರೇ ಹೊಗಳಿ ಮನೆಯತ್ತ ಶಿಕ್ಷಕರು ಹೆಜ್ಜೆ ಇಡುತ್ತಿದ್ದರು. ಆದರೆ ಇಂದು ಯಾವ ಶಿಕ್ಷಕರು ಶಾಲೆಯಿರುವ ಊರಿನಲ್ಲಿ ನೆಲೆಸುವುದಿಲ್ಲ. ಶಿಕ್ಷಕರು ಹಾಗೂ ಪಾಲಕರ ಮಧ್ಯೆ ಇಂತಹ ಅನ್ಯೋನ್ಯ ಸಂಬಂಧಗಳು ಕಣ್ಮರೆಯಾಗಿವೆ. ಪಾಲಕರು ಕಾಯಿದೆಗಳನ್ನು ಹೆಚ್ಚು ಓದಿಕೊಂಡಿದ್ದಾರೆ, ಇತ್ತ ಶಿಕ್ಷಕರು ತಮ್ಮ ಕಾರ್ಯಕ್ಷೇತ್ರದ ಪರಿಧಿಯನ್ನು ರಚಿಸಿಕೊಂಡಿದ್ದಾರೆ. ಇವೆಲ್ಲದರ ಪರಿಣಾಮವಾಗಿ ವಿದ್ಯಾರ್ಥಿಗಳು ತಮ್ಮದೇ ಆದ ಭ್ರಮಾ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಶಾಲೆಯನ್ನು ಸೂಕ್ಷ್ಮ ವಲಯವನ್ನಾಗಿ ರೂಪಿಸುತ್ತಿದ್ದೇವೆ. ಪುರಾಣ ಕಾಲದಿಂದಲೂ ಇತ್ತೀಚಿನ ಶೈಕ್ಷಣಿಕ ದಾರ್ಶನಿಕರೆಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಒಬ್ಬ ಶಿಲ್ಪಿ ಮತ್ತು ಕಲ್ಲಿಗೆ ಹೋಲಿಸುತ್ತಾರೆ. ಕಲ್ಲನ್ನು ಎಷ್ಟು ಸ್ಪುಟವಾಗಿ ಕೆತ್ತಲು ಶಿಲ್ಪಿ ಯಶಸ್ವಿಯಾಗುತ್ತಾನೋ ಅದಕ್ಕೆ ಮಾರುಕಟ್ಟೆಯಲ್ಲಿ ಅದೇ ಪ್ರಮಾಣದ ಬೆಲೆ ಸಿಗುತ್ತದೆ. ಕಲ್ಲಿಗೆ ನೋವಾಗುತ್ತದೆ ಎಂದು ಶಿಲ್ಪಿ ಸುಮ್ಮನಾದರೆ ಅಥವಾ "ಕಲ್ಲಿನ ಹಕ್ಕುಗಳ ಹೋರಾಟ ಸಮಿತಿ" ಹುಟ್ಟಿಕೊಂಡರೆ ನಷ್ಟವಾಗುವುದು ಆ ಕಲ್ಲಿನ ಬೆಲೆಗೆ ಅಥವಾ ಅದರ ಮಾಲೀಕನಿಗೆ. ಹೋರಾಟ ಸಮಿತಿಗೆ ಇದರಿಂದ ಯಾವುದೆ ನಷ್ಟವಿರುವುದಿಲ್ಲ. ಅವರು ಹೋರಾಟದಲ್ಲಿಯೇ ಕಮಾಯಿ ಮಾಡುತ್ತಾರೆ. ವಿದ್ಯಾರ್ಥಿಗಳ ವಿರುದ್ಧ ಹಠ ಹೊಂದಿರುವ ಅಥವಾ ಸಿಟ್ಟು ಹೊಂದಿರುವ ಕೆಲ ಬೆರಳೆಣಿಕೆಯ ಶಿಕ್ಷಕರಿರಬಹುದು. ವಿದ್ಯಾರ್ಥಿಗಳಿಗೆ ಮಾರಣಾಂತಿಕವಾಗಿ ಶಿಕ್ಷೆ ಕೊಡುವ ಕೆಲವು ಉಪಾಧ್ಯಾಯರಿರಬಹುದು. ಆದರೆ ಇದನ್ನು ಸಾಮೂಹಿಕಗೊಳಿಸಿ ಎಲ್ಲ ಶಿಕ್ಷಕರನ್ನು ಹಣಿಯುವ ಕೆಲಸ ಮಾಡಬಾರದು. ಕಾಯಿದೆಯ ನೆಪದಲ್ಲಿ ಶಿಕ್ಷಕರನ್ನು ವಿದ್ಯಾರ್ಥಿಗಳೆದುರೆ ಹೀಯಾಳಿಸಿದರೆ, ಆಗ ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳಿಗಿಂತ ಹಕ್ಕುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಬದಲಾಗಿ ಶಿಕ್ಷಕರ ಜತೆ ಸೌಹಾರ್ದತಯುತವಾಗಿ ಸಂಬಂಧ ಬೆಳೆಸಿಕೊಂಡರೆ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ಪೂಜ್ಯ ಭಾವನೆ ಬರುತ್ತದೆ. ಆಗ ಶಾಲೆಯಲ್ಲಿನ ಶಿಕ್ಷಕರ ಬೈಗುಳ ಅಥವಾ ಮಾತುಗಳು ಅವಮಾನ ಎನಿಸುವ ಬದಲು, ನೀತಿ ಬೋಧನೆಯಾಗುತ್ತದೆ. ಆದರೆ ಯಾವಾಗ ಹಕ್ಕುಗಳು ತಲೆಯಲ್ಲಿ ಹೊಕ್ಕು ಶಿಕ್ಷಕರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ ಎಂಬ ವಿಚಾರ ತಲೆಯಲ್ಲಿ ಬಂದಾಗ ಸಣ್ಣ ಬೈಗುಳವು ಅವಮಾನವಾಗಿ ಪರಿಣಮಿಸುತ್ತದೆ. ಬೆಂಗಳೂರಿನಲ್ಲಿ ಪ್ರಿಯಾಂಕಾ ಮತ್ತು ಸೋನಾಲಿ ಆತ್ಮಹತ್ಯೆ ಬಗ್ಗೆ ತೀರ್ಪು ನೀಡಲು ಸಾಧ್ಯವಿಲ್ಲ. ಆದರೆ ಆ ವಿದ್ಯಾರ್ಥಿನಿಯರ ಆತ್ಮಹತ್ಯೆಯ ನೆಪದಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಚರ್ಚಿಸಲೇಬೇಕು. ಶಿಕ್ಷಣವನ್ನು ಕಾನೂನಿನ ಕಣ್ಗಾವಲಲ್ಲಿ ಮಾತ್ರ ನೋಡಿದರೆ ಇನ್ನಷ್ಟು ಆತ್ಮಹತ್ಯೆಗಳ ಸುದ್ದಿಯನ್ನು ನಾವು ಬರೆಯಬೇಕಾಗುತ್ತದೆ, ನೀವು ಓದಿ ಮನ ಕೆಡಿಸಿಕೊಳ್ಳಬೇಕಾಗುತ್ತದೆ. ಶಿಕ್ಷಕರು ತಮ್ಮ ಮಿತಿ ಮೀರಿ ವಿದ್ಯಾರ್ಥಿನಿಯರನ್ನು ನಿಂದಿಸಿರುವ ಸಾಧ್ಯತೆಯಿದೆ. ಇದಕ್ಕೆ ಮನನೊಂದು ಅಥವಾ ಅವಮಾನಿತಗೊಂಡು ಆತ್ಮಹತ್ಯೆಗೆ ಶರಣಾಗಿರಬಹುದು. ಆದರೆ ನಮ್ಮ ಮಕ್ಕಳ ಮನಸ್ಸನ್ನು ಇಷ್ಟು ದುರ್ಬಲವಾಗುವಂತೆ ಶಿಕ್ಷಣ ವ್ಯವಸ್ಥೆ ರೂಪುಗೊಂಡಿದೆ ಎಂದಾದರೆ ಯಾರನ್ನು ತೆಗಳಬೇಕು? ತರಗತಿಯಲ್ಲಿನ ಶಿಕ್ಷಕರು, ಮನೆಯಲ್ಲಿ ಅಪ್ಪ-ಅಮ್ಮಂದಿರು ಒಳಿತಿಗಾಗಿ ಹೇಳುವ ನಾಲ್ಕು ಗಟ್ಟಿ ಮಾತುಗಳನ್ನು ಕೇಳಲು ಸಾಧ್ಯವಾಗದಿದ್ದರೆ ಮುಂದೊಂದು ದಿನ ದೊಡ್ಡ ಕಂಪನಿಗಳಲ್ಲಿ ಬಾಸ್‌ಗಳ ಬೈಗುಳವನ್ನು ಹೇಗೆ ಸಹಿಸಿಕೊಳ್ಳುತ್ತಾರೆ? ಸ್ವಂತ ಉದ್ಯೋಗ ಪ್ರಾರಂಭಿಸಿ ಹತ್ತಾರು ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯ ಎದುರಾದಾಗಲೂ ಆತ್ಮಹತ್ಯೆಗೆ ಶರಣಾಗುವ ನಾಗರಿಕರನ್ನು ನಮ್ಮ ಶಿಕ್ಷಣ ವ್ಯವಸ್ಥೆ ರೂಪಿಸುತ್ತಿರುವ ಹಾಗಿದೆ. ರಾಜಕೀಯ ಕ್ಷೇತ್ರದಲ್ಲಿ ದುಡ್ಡು ಹಾಗೂ ತೋಳ್ಬಲದಿಂದ ಪ್ರಶ್ನಾತೀತ ನಾಯಕರಾಗುತ್ತಿರುವಂತೆ ವಿದ್ಯಾರ್ಥಿಗಳು ಇದೇ ಪ್ರಶ್ನಾತೀತ ನಾಯಕರ ಪಟ್ಟಿಗೆ ಸೇರುತ್ತಿರುವುದು ದೊಡ್ಡ ದುರಂತ. ಮನೆಯಲ್ಲಿರುವ ಒಂದು ಅಥವಾ ಎರಡು ಮಕ್ಕಳ ಮಾತನ್ನೇ ಕೇಳಿಸಲು ಪಾಲಕರು ಹರಸಾಹಸ ಪಡಬೇಕಾಗುತ್ತದೆ. ಆದರೆ 30-40 ವಿದ್ಯಾರ್ಥಿಗಳಿರುವ ಒಂದು ತರಗತಿಯನ್ನು ಯಾವುದೇ ಬೈಗುಳವಿಲ್ಲದೆ ಮುಗಿಸಬೇಕು ಎನ್ನುವುದು ಕಾಯಿದೆಯ ಪುಸ್ತಕದಲ್ಲಿ ಹೇಳುವುದು ಬಹಳ ಸುಲಭ. ಆದರೆ ಇದೇ ಕಾಯಿದೆ ಮಾಡಿರುವ ವ್ಯಕ್ತಿಗಳಿಗೆ ಒಂದು ಬೈಗುಳ ಅಥವಾ ಗಟ್ಟಿಯ ಮಾತಿಲ್ಲದೆ ಒಂದು ಸಭೆಯನ್ನೂ ನಡೆಸಲಾಗುವುದಿಲ್ಲ. ಆದರೆ ಶಿಕ್ಷಕರಿಗೆ ಮಾತ್ರ ಹಾಗಿರಿ, ಹೀಗಿರಿ ಎಂದೆಲ್ಲ ಬುದ್ಧಿವಾದ ಹೇಳುವುದು ಎಷ್ಟರ ಮಟ್ಟಿಗೆ ಸರಿ? ಇವತ್ತಿನ ಮಾಧ್ಯಮ ಪ್ರಪಂಚ ಅಥವಾ ಸಾಮಾಜಿಕ ತಾಣಗಳ ಪ್ರಭಾವದಿಂದ ಮಕ್ಕಳ ಮನಸ್ಸು ದುರ್ಬಲವಾಗಿರಬಹುದು. ಆದರೆ ಇಂತಹ ಕಠಿಣ ಪರಿಸ್ಥಿತಿಗಳನ್ನು ಎದುರಿಸಲು ಮಕ್ಕಳನ್ನು ಪಾಲಕರು ತಯಾರಿ ಮಾಡಲೇಬೇಕು. ವಿದ್ಯಾರ್ಥಿ ಜೀವನದಲ್ಲಿ ಎಷ್ಟು ಏಟು ತಿಂದು ಕಠಿಣವಾಗುತ್ತೇವೋ ಅಷ್ಟೇ ಮುಂದೆ ಯಶ ಸಾಧಿಸಬಹುದು. ಕಠಿಣ ಪರಿಸ್ಥಿತಿಯಲ್ಲಿ ಬೆಳಕು ಕಾಣಬಹುದು. ಶಿಕ್ಷಕರೊಂದಿಗಿನ ಸಂಬಂಧವನ್ನು ಯಾಂತ್ರೀಕೃತ ಮಾಡಿಕೊಂಡು ಹೋದಷ್ಟು ಇಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ಪಾಲಕರೇ ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು. ಶಾಲೆಗೆ ವಿದ್ಯಾರ್ಥಿಗಳು ಹೋಗುವುದು ಯಾವುದೇ ಪ್ರತಿಷ್ಠೆ ಸಾಧಿಸಲಲ್ಲ, ಕೇವಲ ಕಲಿಕೆಗಾಗಿ. ಪಾಲಕರು ತಮ್ಮ ಪ್ರತಿಷ್ಠೆಯನ್ನು ಮಕ್ಕಳ ತಲೆಯಲ್ಲಿ ಬಿತ್ತುವ ಬುದ್ಧಿ ಬಿಡಬೇಕು. ಜಾತಿ, ಕಾಯಿದೆಗಳು ವಿದ್ಯಾರ್ಥಿಗಳ ತಲೆಯಲ್ಲಿ ಹೋದಾಗ ಕಷ್ಟದ ಪರಿಸ್ಥಿತಿಯಲ್ಲಿ ಇದನ್ನೇ ಶಸ್ತ್ರವನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ. ಒಂದಂಶವನ್ನು ನಾವೆಲ್ಲ ತಿಳಿದುಕೊಳ್ಳಬೇಕು. ಇಂತಹ ವಿಚಿತ್ರ ಶೈಕ್ಷಣಿಕ ವಾತಾವರಣದಿಂದ ಶಿಕ್ಷಕರ ಸಂಬಳಕ್ಕೇನು ಕುತ್ತಾಗುವುದಿಲ್ಲ. ಆದರೆ ಮಕ್ಕಳ ಭವಿಷ್ಯಕ್ಕೆ ಖಂಡಿತ ಪೆಟ್ಟು ಬೀಳುತ್ತದೆ. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಪಾಲಕರ ಪಾತ್ರವಿರುವಷ್ಟೇ ಶಿಕ್ಷಕರ ಜವಾಬ್ದಾರಿಯೂ ಇರುತ್ತದೆ. ಆದರೆ ಭಯದ ಪರಿಸರದಲ್ಲಿ ಯಾರೂ ಜವಾಬ್ದಾರಿಯನ್ನು ಮೈಮೇಲೆ ಎಳೆದು ಕೊಳ್ಳಲು ಇಷ್ಟಪಡುವುದಿಲ್ಲ. - ರಾಜೀವ ಹೆಗಡೆ meet.hegde@gmail.com "ತರಗತಿಗೆ ಸರಿಯಾಗಿ ಬರುತ್ತಿಲ್ಲ, ಗಣಿತ ಹಾಗೂ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಮನೆ ಕೆಲಸಗಳನ್ನು ಮಾಡುವುದೇ ಇಲ್ಲ" ಎಂದು ವಿದ್ಯಾರ್ಥಿನಿಗೆ ಸ್ವಲ್ಪ ಬೈದಿರುವುದಕ್ಕಾಗಿ ಆ ಶಿಕ್ಷಕಿಯ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ದಾಖಲಿಸಲಾಗಿತ್ತು. ಶಿವಮೊಗ್ಗದ ಸಮೀಪದ ಹಳ್ಳಿಯಿಂದ ದೂರಿನ ವಿಚಾರಣೆಗೆ ವಿದ್ಯಾರ್ಥಿನಿ, ಪಾಲಕರು ಹಾಗೂ ಶಿಕ್ಷಕಿ ಬೆಂಗಳೂರಿಗೆ ಬಂದಿದ್ದರು. ವಿಚಾರಣೆಗೆ ಕುಳಿತಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಬ್ಬರು ಶಿಕ್ಷಕಿಗೆ ಬೆವರಿಳಿಸಿದರು. "ನನ್ನ ಮಗಳು ಓದಲಿ, ಬಿಡಲಿ. ಈಯಮ್ಮನಿಗೇನು ತಲೆ ಬಿಸಿ?" ಎಂದು ವಿದ್ಯಾರ್ಥಿನಿಯ ತಾಯಿ ಹೇಳುತ್ತಿದ್ದಳು. ವಿದ್ಯಾರ್ಥಿನಿಗೆ ಹೇಗೆ ಶಿಕ್ಷೆ ಕೊಡಲಾಗುತ್ತಿದೆ ಎಂದು ಆಕೆಯ ತಂದೆಯೇ ಮಗುವಿನ ಜುಟ್ಟು ಹಿಡಿದು ಹೊಡೆದು ತೋರಿಸಿದ. ಶಿಕ್ಷಕಿ ನಿಜವಾಗಿ ನೀಡಿದ್ದ ಶಿಕ್ಷೆಗಿಂತಲೂ ಆಕೆಯ ತಂದೆ ವಿಚಾರಣೆ ಸಭೆಯಲ್ಲಿ ತೋರಿಸಿದ್ದು ಭೀಕರವಾಗಿತ್ತು!ಇದು ನಮ್ಮ ಕಾನೂನು ಹಾಗೂ ಶಿಕ್ಷಣ ವ್ಯವಸ್ಥೆಯ ಇಂದಿನ ನೈಜ ಮುಖ. ಓದುತ್ತಿಲ್ಲ ಎಂದು ಹೇಳಿದ ಶಿಕ್ಷಕಿಯ ಮೇಲೆ ವಿದ್ಯಾರ್ಥಿನಿ ಹಾಗೂ ಪಾಲಕರಿಗೆ ಕಾಳಜಿಗಿಂತ ಹೆಚ್ಚು ಜಾತಿ ಮತ್ತು ಸೇಡಿನ ವಿಚಾರಗಳು ಕಣ್ಣಿಗೆ ಕಂಡಿತ್ತು. ಕಾಯಿದೆ ಮೂಲಕ ದೇಶವನ್ನು ಕಟ್ಟಲು ಮುಂದಾಗಿರುವ ಸರ್ಕಾರ ವಿದ್ಯಾರ್ಥಿ, ಪಾಲಕರು ಹಾಗೂ ಶಿಕ್ಷಣ ವಲಯವನ್ನು ಮತ್ತಷ್ಟು ಸೂಕ್ಷ್ಮಗೊಳಿಸುತ್ತಿದೆ. ವಿದ್ಯಾರ್ಥಿಗಳಿಗೆ ಬೈದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಪಾಲಕರು ರೌದ್ರಾವತಾರ ತಾಳುತ್ತಾರೆ. ಅಂತಿಮವಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದಿದ್ದರೂ ಇದೇ ಪಾಲಕರಿಂದ ಶಿಕ್ಷಕರು ಬೈಗುಳಗಳ ಸಹಸ್ರನಾಮ ಸ್ವೀಕರಿಸಬೇಕು. ಎಲ್ಲ ಮುಗಿಸಿ ಉದ್ಯೋಗ ವಲಯಕ್ಕೆ ಕಾಲಿಟ್ಟ ಮೇಲೆ ಅಲ್ಲೂ ಫಿಟ್ ಎನಿಸಿಕೊಳ್ಳದಿದ್ದರೆ, ಆ ಸಂಸ್ಥೆಯ ಬಾಸ್ ಎನಿಸಿಕೊಂಡವನ ಮೊದಲ ಬೈಗುಳ ಕೂಡ ಶಿಕ್ಷಕರಿಗಿರುತ್ತದೆ.ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಬಂದ ದಿನದಿಂದ ಶೈಕ್ಷಣಿಕವಾಗಿ ಮುಂದುವರಿದ ರಾಜ್ಯಗಳಲ್ಲಿ ಇಂತಹ ಸಾಕಷ್ಟು ಗೋಳುಗಳು ಕೇಳಿಬರುತ್ತಿವೆ. ಮಕ್ಕಳ ಹಕ್ಕುಗಳ ನೆಪದಲ್ಲಿ ದೊಡ್ಡದೊಂದು ಪ್ರಲಾಪ ನಡೆಯುತ್ತಿದೆ. ಶಿಕ್ಷಕ ವಲಯದ ನೈತಿಕ ಸ್ಥೈರ್ಯವನ್ನು ಹಾಳುಮಾಡುವ ಪ್ರಯತ್ನ ನಡೆದಿದೆ. ಇದೆಲ್ಲದರ ಪರಿಣಾಮವಾಗಿ ನಮಗೇ ಗೊತ್ತಿಲ್ಲದಂತೆ ನಮ್ಮ ಮನೆಯ ಮಕ್ಕಳನ್ನು 'ಅತಿ ಸೂಕ್ಷ್ಮಜೀವಿ'ಗಳನ್ನಾಗಿ ರೂಪಿಸುತ್ತಿದ್ದೇವೆ.ಬೆಂಗಳೂರಿನಲ್ಲಿ ಮೊನ್ನೆ ನಡೆದ ಘಟನೆಯೊಂದು ಸಣ್ಣ ಉದಾಹರಣೆಯಷ್ಟೆ. ಆ ಇಬ್ಬರು ಹೆಣ್ಣು ಜೀವಗಳನ್ನು ಕಳೆದುಕೊಂಡ ತಾಯಂದಿರ ದುಃಖಗಳಿಗೆ ನಮ್ಮ ಯಾವ ಮಾತುಗಳು ಸಂತೈಸಲಾರವು. ಆದರೆ ಈ ಸಂದರ್ಭದಲ್ಲಿ ರಾಜ್ಯದಲ್ಲಿರುವ ಸುಮಾರು ಒಂದೂಕಾಲು ಕೋಟಿ ಮಕ್ಕಳ ಪಾಲಕರು ಒಮ್ಮೆ ತಾವು ಹೋಗುತ್ತಿರುವ ದಾರಿಯ ಬಗ್ಗೆ ಆಲೋಚಿಸಬೇಕು. ಈ ಕಾನ್ವೆಂಟ್ ಶಾಲೆಯ ಇಬ್ಬರು ಶಿಕ್ಷಕರನ್ನು ಮರೆತು ನಮ್ಮ-ನಿಮ್ಮ ಮನೆಯ ಮಕ್ಕಳು ಓದುತ್ತಿರುವ ಶಾಲೆಯ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಇದೆಲ್ಲದರ ಜತೆಗೆ ಮಕ್ಕಳನ್ನು ಎಂತಹ ಭ್ರಮಾ ಲೋಕಕ್ಕೆ ತಳ್ಳುತ್ತಿದ್ದೇವೆ ಎಂಬುದನ್ನು ಆಲೋಚಿಸಿ. ಆಗ ಖಂಡಿತ ಶಿಕ್ಷಕರಿಗೆ ಬೈಯುವವರ ಸಂಖ್ಯೆ ಕಡಿಮೆಯಾಗುತ್ತದೆ.ಸುಮಾರು 15 ವರ್ಷಗಳ ಹಿಂದಿನ ಮಾತಿದು. ನಮ್ಮ ಊರಿನ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕ, ಶಿಕ್ಷಕಿಯರು ಶಾಲೆಯ ಹತ್ತಿರವಿರುವ ಯಾವುದಾದರೊಂದು ಮನೆಯಲ್ಲಿ ವಾಸವಾಗುತ್ತಿದ್ದರು. ನಾಲ್ಕೂವರೆಗೆ ಶಾಲೆ ಬಿಟ್ಟು ಮನೆಗೆ ಬರುವಷ್ಟರಲ್ಲಿ ಆರು ಗಂಟೆಯಾಗುತ್ತಿತ್ತು. ಶಾಲೆಯಿಂದ ಬರುವಾಗ ದಾರಿಯಲ್ಲಿ ಸಿಗುವ ಪ್ರತಿಯೊಬ್ಬರ ಮನೆಯ ಎದುರು ಒಂದೈದು ನಿಮಿಷ ನಿಂತು ಮಾತನಾಡಿ, ಅವರ ಮಕ್ಕಳ ಬಗ್ಗೆ ದಿನದ ಪ್ರಮಾಣಪತ್ರ ನೀಡಿಯಾಗುತ್ತಿತ್ತು. 'ಮನೇಲಿ ಒಂದಕ್ಷರ ಓದಲ್ಲ, ಸರಿಯಾಗಿ ನಾಲ್ಕು ಹೊಡೆದು ಓದ್ಸಿ. ಬೆತ್ತದ ಕೋಲು ಬೇಕಾದ್ರೆ ನಾವೆ ಕೊಡ್ತೀವಿ' ಎನ್ನುವ ಮಾತುಗಳು ತಂದೆ-ತಾಯಂದಿರ ಬಾಯಿಂದ ಬರುತ್ತಿತ್ತು. 'ಹೇ... ಹಾಗೇನಿಲ್ಲ, ಚೆನ್ನಾಗೆ ಓದ್ತಿದಾನೆ, ಸ್ವಲ್ಪ ಸುಧಾರಿಸಬೇಕು' ಎಂದು ಮಕ್ಕಳೆದುರೇ ಹೊಗಳಿ ಮನೆಯತ್ತ ಶಿಕ್ಷಕರು ಹೆಜ್ಜೆ ಇಡುತ್ತಿದ್ದರು.ಆದರೆ ಇಂದು ಯಾವ ಶಿಕ್ಷಕರು ಶಾಲೆಯಿರುವ ಊರಿನಲ್ಲಿ ನೆಲೆಸುವುದಿಲ್ಲ. ಶಿಕ್ಷಕರು ಹಾಗೂ ಪಾಲಕರ ಮಧ್ಯೆ ಇಂತಹ ಅನ್ಯೋನ್ಯ ಸಂಬಂಧಗಳು ಕಣ್ಮರೆಯಾಗಿವೆ. ಪಾಲಕರು ಕಾಯಿದೆಗಳನ್ನು ಹೆಚ್ಚು ಓದಿಕೊಂಡಿದ್ದಾರೆ, ಇತ್ತ ಶಿಕ್ಷಕರು ತಮ್ಮ ಕಾರ್ಯಕ್ಷೇತ್ರದ ಪರಿಧಿಯನ್ನು ರಚಿಸಿಕೊಂಡಿದ್ದಾರೆ. ಇವೆಲ್ಲದರ ಪರಿಣಾಮವಾಗಿ ವಿದ್ಯಾರ್ಥಿಗಳು ತಮ್ಮದೇ ಆದ ಭ್ರಮಾ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಶಾಲೆಯನ್ನು ಸೂಕ್ಷ್ಮ ವಲಯವನ್ನಾಗಿ ರೂಪಿಸುತ್ತಿದ್ದೇವೆ. ಪುರಾಣ ಕಾಲದಿಂದಲೂ ಇತ್ತೀಚಿನ ಶೈಕ್ಷಣಿಕ ದಾರ್ಶನಿಕರೆಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಒಬ್ಬ ಶಿಲ್ಪಿ ಮತ್ತು ಕಲ್ಲಿಗೆ ಹೋಲಿಸುತ್ತಾರೆ. ಕಲ್ಲನ್ನು ಎಷ್ಟು ಸ್ಪುಟವಾಗಿ ಕೆತ್ತಲು ಶಿಲ್ಪಿ ಯಶಸ್ವಿಯಾಗುತ್ತಾನೋ ಅದಕ್ಕೆ ಮಾರುಕಟ್ಟೆಯಲ್ಲಿ ಅದೇ ಪ್ರಮಾಣದ ಬೆಲೆ ಸಿಗುತ್ತದೆ. ಕಲ್ಲಿಗೆ ನೋವಾಗುತ್ತದೆ ಎಂದು ಶಿಲ್ಪಿ ಸುಮ್ಮನಾದರೆ ಅಥವಾ "ಕಲ್ಲಿನ ಹಕ್ಕುಗಳ ಹೋರಾಟ ಸಮಿತಿ" ಹುಟ್ಟಿಕೊಂಡರೆ ನಷ್ಟವಾಗುವುದು ಆ ಕಲ್ಲಿನ ಬೆಲೆಗೆ ಅಥವಾ ಅದರ ಮಾಲೀಕನಿಗೆ. ಹೋರಾಟ ಸಮಿತಿಗೆ ಇದರಿಂದ ಯಾವುದೆ ನಷ್ಟವಿರುವುದಿಲ್ಲ. ಅವರು ಹೋರಾಟದಲ್ಲಿಯೇ ಕಮಾಯಿ ಮಾಡುತ್ತಾರೆ.ವಿದ್ಯಾರ್ಥಿಗಳ ವಿರುದ್ಧ ಹಠ ಹೊಂದಿರುವ ಅಥವಾ ಸಿಟ್ಟು ಹೊಂದಿರುವ ಕೆಲ ಬೆರಳೆಣಿಕೆಯ ಶಿಕ್ಷಕರಿರಬಹುದು. ವಿದ್ಯಾರ್ಥಿಗಳಿಗೆ ಮಾರಣಾಂತಿಕವಾಗಿ ಶಿಕ್ಷೆ ಕೊಡುವ ಕೆಲವು ಉಪಾಧ್ಯಾಯರಿರಬಹುದು. ಆದರೆ ಇದನ್ನು ಸಾಮೂಹಿಕಗೊಳಿಸಿ ಎಲ್ಲ ಶಿಕ್ಷಕರನ್ನು ಹಣಿಯುವ ಕೆಲಸ ಮಾಡಬಾರದು. ಕಾಯಿದೆಯ ನೆಪದಲ್ಲಿ ಶಿಕ್ಷಕರನ್ನು ವಿದ್ಯಾರ್ಥಿಗಳೆದುರೆ ಹೀಯಾಳಿಸಿದರೆ, ಆಗ ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳಿಗಿಂತ ಹಕ್ಕುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಬದಲಾಗಿ ಶಿಕ್ಷಕರ ಜತೆ ಸೌಹಾರ್ದತಯುತವಾಗಿ ಸಂಬಂಧ ಬೆಳೆಸಿಕೊಂಡರೆ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ಪೂಜ್ಯ ಭಾವನೆ ಬರುತ್ತದೆ. ಆಗ ಶಾಲೆಯಲ್ಲಿನ ಶಿಕ್ಷಕರ ಬೈಗುಳ ಅಥವಾ ಮಾತುಗಳು ಅವಮಾನ ಎನಿಸುವ ಬದಲು, ನೀತಿ ಬೋಧನೆಯಾಗುತ್ತದೆ. ಆದರೆ ಯಾವಾಗ ಹಕ್ಕುಗಳು ತಲೆಯಲ್ಲಿ ಹೊಕ್ಕು ಶಿಕ್ಷಕರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ ಎಂಬ ವಿಚಾರ ತಲೆಯಲ್ಲಿ ಬಂದಾಗ ಸಣ್ಣ ಬೈಗುಳವು ಅವಮಾನವಾಗಿ ಪರಿಣಮಿಸುತ್ತದೆ.ಬೆಂಗಳೂರಿನಲ್ಲಿ ಪ್ರಿಯಾಂಕಾ ಮತ್ತು ಸೋನಾಲಿ ಆತ್ಮಹತ್ಯೆ ಬಗ್ಗೆ ತೀರ್ಪು ನೀಡಲು ಸಾಧ್ಯವಿಲ್ಲ. ಆದರೆ ಆ ವಿದ್ಯಾರ್ಥಿನಿಯರ ಆತ್ಮಹತ್ಯೆಯ ನೆಪದಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಚರ್ಚಿಸಲೇಬೇಕು. ಶಿಕ್ಷಣವನ್ನು ಕಾನೂನಿನ ಕಣ್ಗಾವಲಲ್ಲಿ ಮಾತ್ರ ನೋಡಿದರೆ ಇನ್ನಷ್ಟು ಆತ್ಮಹತ್ಯೆಗಳ ಸುದ್ದಿಯನ್ನು ನಾವು ಬರೆಯಬೇಕಾಗುತ್ತದೆ, ನೀವು ಓದಿ ಮನ ಕೆಡಿಸಿಕೊಳ್ಳಬೇಕಾಗುತ್ತದೆ.ಶಿಕ್ಷಕರು ತಮ್ಮ ಮಿತಿ ಮೀರಿ ವಿದ್ಯಾರ್ಥಿನಿಯರನ್ನು ನಿಂದಿಸಿರುವ ಸಾಧ್ಯತೆಯಿದೆ. ಇದಕ್ಕೆ ಮನನೊಂದು ಅಥವಾ ಅವಮಾನಿತಗೊಂಡು ಆತ್ಮಹತ್ಯೆಗೆ ಶರಣಾಗಿರಬಹುದು. ಆದರೆ ನಮ್ಮ ಮಕ್ಕಳ ಮನಸ್ಸನ್ನು ಇಷ್ಟು ದುರ್ಬಲವಾಗುವಂತೆ ಶಿಕ್ಷಣ ವ್ಯವಸ್ಥೆ ರೂಪುಗೊಂಡಿದೆ ಎಂದಾದರೆ ಯಾರನ್ನು ತೆಗಳಬೇಕು? ತರಗತಿಯಲ್ಲಿನ ಶಿಕ್ಷಕರು, ಮನೆಯಲ್ಲಿ ಅಪ್ಪ-ಅಮ್ಮಂದಿರು ಒಳಿತಿಗಾಗಿ ಹೇಳುವ ನಾಲ್ಕು ಗಟ್ಟಿ ಮಾತುಗಳನ್ನು ಕೇಳಲು ಸಾಧ್ಯವಾಗದಿದ್ದರೆ ಮುಂದೊಂದು ದಿನ ದೊಡ್ಡ ಕಂಪನಿಗಳಲ್ಲಿ ಬಾಸ್‌ಗಳ ಬೈಗುಳವನ್ನು ಹೇಗೆ ಸಹಿಸಿಕೊಳ್ಳುತ್ತಾರೆ? ಸ್ವಂತ ಉದ್ಯೋಗ ಪ್ರಾರಂಭಿಸಿ ಹತ್ತಾರು ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯ ಎದುರಾದಾಗಲೂ ಆತ್ಮಹತ್ಯೆಗೆ ಶರಣಾಗುವ ನಾಗರಿಕರನ್ನು ನಮ್ಮ ಶಿಕ್ಷಣ ವ್ಯವಸ್ಥೆ ರೂಪಿಸುತ್ತಿರುವ ಹಾಗಿದೆ. ರಾಜಕೀಯ ಕ್ಷೇತ್ರದಲ್ಲಿ ದುಡ್ಡು ಹಾಗೂ ತೋಳ್ಬಲದಿಂದ ಪ್ರಶ್ನಾತೀತ ನಾಯಕರಾಗುತ್ತಿರುವಂತೆ ವಿದ್ಯಾರ್ಥಿಗಳು ಇದೇ ಪ್ರಶ್ನಾತೀತ ನಾಯಕರ ಪಟ್ಟಿಗೆ ಸೇರುತ್ತಿರುವುದು ದೊಡ್ಡ ದುರಂತ.ಮನೆಯಲ್ಲಿರುವ ಒಂದು ಅಥವಾ ಎರಡು ಮಕ್ಕಳ ಮಾತನ್ನೇ ಕೇಳಿಸಲು ಪಾಲಕರು ಹರಸಾಹಸ ಪಡಬೇಕಾಗುತ್ತದೆ. ಆದರೆ 30-40 ವಿದ್ಯಾರ್ಥಿಗಳಿರುವ ಒಂದು ತರಗತಿಯನ್ನು ಯಾವುದೇ ಬೈಗುಳವಿಲ್ಲದೆ ಮುಗಿಸಬೇಕು ಎನ್ನುವುದು ಕಾಯಿದೆಯ ಪುಸ್ತಕದಲ್ಲಿ ಹೇಳುವುದು ಬಹಳ ಸುಲಭ. ಆದರೆ ಇದೇ ಕಾಯಿದೆ ಮಾಡಿರುವ ವ್ಯಕ್ತಿಗಳಿಗೆ ಒಂದು ಬೈಗುಳ ಅಥವಾ ಗಟ್ಟಿಯ ಮಾತಿಲ್ಲದೆ ಒಂದು ಸಭೆಯನ್ನೂ ನಡೆಸಲಾಗುವುದಿಲ್ಲ. ಆದರೆ ಶಿಕ್ಷಕರಿಗೆ ಮಾತ್ರ ಹಾಗಿರಿ, ಹೀಗಿರಿ ಎಂದೆಲ್ಲ ಬುದ್ಧಿವಾದ ಹೇಳುವುದು ಎಷ್ಟರ ಮಟ್ಟಿಗೆ ಸರಿ? ಇವತ್ತಿನ ಮಾಧ್ಯಮ ಪ್ರಪಂಚ ಅಥವಾ ಸಾಮಾಜಿಕ ತಾಣಗಳ ಪ್ರಭಾವದಿಂದ ಮಕ್ಕಳ ಮನಸ್ಸು ದುರ್ಬಲವಾಗಿರಬಹುದು. ಆದರೆ ಇಂತಹ ಕಠಿಣ ಪರಿಸ್ಥಿತಿಗಳನ್ನು ಎದುರಿಸಲು ಮಕ್ಕಳನ್ನು ಪಾಲಕರು ತಯಾರಿ ಮಾಡಲೇಬೇಕು. ವಿದ್ಯಾರ್ಥಿ ಜೀವನದಲ್ಲಿ ಎಷ್ಟು ಏಟು ತಿಂದು ಕಠಿಣವಾಗುತ್ತೇವೋ ಅಷ್ಟೇ ಮುಂದೆ ಯಶ ಸಾಧಿಸಬಹುದು. ಕಠಿಣ ಪರಿಸ್ಥಿತಿಯಲ್ಲಿ ಬೆಳಕು ಕಾಣಬಹುದು.ಶಿಕ್ಷಕರೊಂದಿಗಿನ ಸಂಬಂಧವನ್ನು ಯಾಂತ್ರೀಕೃತ ಮಾಡಿಕೊಂಡು ಹೋದಷ್ಟು ಇಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ಪಾಲಕರೇ ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು. ಶಾಲೆಗೆ ವಿದ್ಯಾರ್ಥಿಗಳು ಹೋಗುವುದು ಯಾವುದೇ ಪ್ರತಿಷ್ಠೆ ಸಾಧಿಸಲಲ್ಲ, ಕೇವಲ ಕಲಿಕೆಗಾಗಿ. ಪಾಲಕರು ತಮ್ಮ ಪ್ರತಿಷ್ಠೆಯನ್ನು ಮಕ್ಕಳ ತಲೆಯಲ್ಲಿ ಬಿತ್ತುವ ಬುದ್ಧಿ ಬಿಡಬೇಕು. ಜಾತಿ, ಕಾಯಿದೆಗಳು ವಿದ್ಯಾರ್ಥಿಗಳ ತಲೆಯಲ್ಲಿ ಹೋದಾಗ ಕಷ್ಟದ ಪರಿಸ್ಥಿತಿಯಲ್ಲಿ ಇದನ್ನೇ ಶಸ್ತ್ರವನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ.ಒಂದಂಶವನ್ನು ನಾವೆಲ್ಲ ತಿಳಿದುಕೊಳ್ಳಬೇಕು. ಇಂತಹ ವಿಚಿತ್ರ ಶೈಕ್ಷಣಿಕ ವಾತಾವರಣದಿಂದ ಶಿಕ್ಷಕರ ಸಂಬಳಕ್ಕೇನು ಕುತ್ತಾಗುವುದಿಲ್ಲ. ಆದರೆ ಮಕ್ಕಳ ಭವಿಷ್ಯಕ್ಕೆ ಖಂಡಿತ ಪೆಟ್ಟು ಬೀಳುತ್ತದೆ. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಪಾಲಕರ ಪಾತ್ರವಿರುವಷ್ಟೇ ಶಿಕ್ಷಕರ ಜವಾಬ್ದಾರಿಯೂ ಇರುತ್ತದೆ. ಆದರೆ ಭಯದ ಪರಿಸರದಲ್ಲಿ ಯಾರೂ ಜವಾಬ್ದಾರಿಯನ್ನು ಮೈಮೇಲೆ ಎಳೆದು ಕೊಳ್ಳಲು ಇಷ್ಟಪಡುವುದಿಲ್ಲ. - 
ರಾಜೀವ ಹೆಗಡೆ meet.hegde@gmail.com

No comments: