ಶಿಕ್ಷಣ
ಪದ್ಧತಿಯೇ ಸರಿ ಇಲ್ಲದಿರುವಾಗ
ನಾವೇ ಇದಕ್ಕೆ ಪರಿಹಾರ ಹುಡುಕಬೇಕು.
ಕಾರಣ
ನಾವು ಸಮಾಜದ ಮಾರ್ಗದರ್ಶಕರಾಗಿದ್ದೇವೆ.
ಸಮಾಜ
ದಿಕ್ಕು ತಪ್ಪಿದಾಗ ಅದಕ್ಕೆ ಸರಿಯಾದ
ದಾರಿ ತೋರಿಸುವುದು ಶಿಕ್ಷಕರಾದ
ನಮ್ಮೆಲ್ಲರ ಕರ್ತವ್ಯವಾಗಿದೆ.
ಶಿಕ್ಷಕರೇ
ಇದಕ್ಕೆ ಪರಿಹಾರವನ್ನು ಕಂಡುಹಿಡಿಯಬಲ್ಲರು.
ನಮಗೆ
ತಿಳಿದಿದೆ,
ಬೇಡನು
ವಾಲ್ಮೀಕಿ ಋಷಿಯಾದನು.
ಶಿವಾಜಿ
ಮಹಾರಾಜರು ಚಿಕ್ಕ ವಯಸ್ಸಿನಲ್ಲಿ
ಹಿಂದವೀ ಸ್ವರಾಜ್ಯ ಸ್ಥಾಪನೆಗಾಗಿ
ಪ್ರಮಾಣ ಮಾಡಿದರು. ಇದಕ್ಕೆ ಕಾರಣ ಶಿವಾಜಿಗೆ ಗುರು ಸಮಥ೯ ರಾಮದಾಸರು .ಆದರೆ ಇ೦ದಿನ ತ೦ತ್ರಜ್ಞಾನದ ಯುಗದಲ್ಲಿ ರವಿ ಅಹೇರಿ ಯ೦ತವರು ನಮ್ಮ ಸಮಾಜ ವಿಜ್ಞಾನ ಸಮೂಹ ಬಳಗವನ್ನು ಕಟ್ಟಿಕೊ೦ಡು ಹೊಸ ವರುಷದ ಲ್ಲಿ ಹೊಸತೊ೦ದು ಯೋಜನೆಯಲ್ಲಿ ತೊಡಗಿದ್ದಾರೆ ಅವರಿಗೆ ಸದಾ ಸಹಾಯಕರಾಗಿ ದುಡಿಯೋಣ ....
ಹೊಸ ನೆತ್ತರುಕ್ಕಿ ಆರಿ ಹೊಗುವ ಮುನ್ನ
ಉತ್ಸಾಹ ಸಾಹಸದ ಉತ್ತು೦ಗ ವೀಚಿಗಳ
ಕ್ಷುಬ್ದ ಸಾಗರವು ಭತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊ೦ದನು .ಕವಿ ಗೊಪಾಲ ಕೃಷ್ಣ ಅಡಿಗರ ವಾಣಿಯ೦ತೆ ..
ಪುಸ್ತಕವೆ೦ಬ ಅಕ್ಷಯ ಪಾತ್ರೆಯೊಳಗಿರುವ,ಅಕ್ಷರಗಳೆ೦ಬ ಕಾಳುಗಳನ್ನು ಮಸ್ತಕವೆ೦ಬ ಹಕ್ಕಿ, ಕುಕ್ಕಿ ತಿನ್ನಲು ಜ್ಞಾನದ ಹಸಿವು ನೀಗುವುದು .ಉದಯಸುತ್ತರುವ ರವಿಯ೦ತೆ ,ಪರಿಮಳ ಹರುಡುತ್ತಿರುವ ಮಲ್ಲಿಗೆಯ೦ತೆ,ಅರಳುತ್ತಿರುವ ಕಮಲದ೦ತೆ,ಈ ಚಿ೦ತಕರ ಚಾವಡಿ ಯ
ಬೆಳಕು ಬೆಳಗಿ ಬೆಳ್ಳಿ ಬಟ್ಟಲವಾಗಲಿ,ಜ್ಞಾನ ಮೂತಿ೯ಗಳಾಗಿ ನಗೆಯ ಸ್ಪೂತಿ೯ಯಾಗಿ ಪ್ರತಿಭೆಯ ವ್ಯಕ್ತಿಗಳನ್ನು , ಆದಶ೯ನಾಗರಿಕರನ್ನು ತಯಾರಿಸುವ ಚಿ೦ತನ ,ಮ೦ಥನ ಶಾಲೆಯಾಗಲಿ .ಎ೦ದು ಹಾರೈಸಿ .ಶುಭ ಕೋರುತ್ತೆನೆ ..
ಶ್ರೀ ಸಿ.ಎಸ್.ತಾಳಿಕೋಟಿಮಠ .
ಶಿಕ್ಷಕರು .ಸರಕಾರಿ ಪ್ರೌಢ ಶಾಲೆ ಕೆ೦ಗಾನೂರು.ತಾಲ್ಲೂಕ:ಬೈಲಹೊ೦ಗಲ.ಜಿಲ್ಲೆ: ಬೆಳಗಾವಿ.
No comments:
Post a Comment