ಶಿಕ್ಷಣ ವ್ಯವಸ್ಥೆಯಲ್ಲಿ ಬೋಧನೆಗೇ ಇಲ್ಲ ಪ್ರಾಮುಖ್ಯ
ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ 'ನಿರಂತರ ವ್ಯಾಪಕ ಮೌಲ್ಯಮಾಪನ'ದ ಕುರಿತಾದ
ವರದಿಗಳು, ನಾವು ಮತ್ತೊಮ್ಮೆ ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಕುರಿತು
ಯೋಚಿಸುವಂತೆ ಮಾಡಿದೆ. ಸ್ವಾತಂತ್ರ್ಯ ಬಂದು ಇಷ್ಟು ಕಾಲವಾದರೂ ನಾವೂ ನಮ್ಮ ಸಾಂಪ್ರದಾಯಿಕ
ಶಿಕ್ಷಣದ ರೀತಿಯಿಂದ ಹೊರಬಂದಿಲ್ಲವೆನಿಸುತ್ತದೆ. ಬದಲಾದ ಕಾಲಮಾನಕ್ಕೆ, ಬದಲಾದ
ಅವಶ್ಯಕತೆಗಳಿಗೆ ಅನುಗುಣವಾಗಿ ನಮ್ಮ ಶಿಕ್ಷಣ ಪದ್ಧತಿಯೂ ಹಲವು ಬದಲಾವಣೆಗಳನ್ನು ಬಯಸುವ
ಕ್ಷೇತ್ರವಾಗಿದೆಯೆಂಬುದನ್ನು ನಾವು ಮರೆತಿದ್ದೇವೆ. ಕೇವಲ, ಕನ್ನಡ ಕನ್ನಡ ಎಂದು ಬೊಬ್ಬೆ
ಹಾಕುವ, ತಮ್ಮ ಮನೆಯ ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟ್‌ಗಳಿಗೆ ಕಳಿಸುವ ನಮ್ಮ ಕೆಲ
ಹೋರಾಟಗಾರರು ಆಗಾಗ, 'ಕನ್ನಡ ಶಾಲೆಯನ್ನು ಸರ್ಕಾರ ಮುಚ್ಚಬಾರದು' ಎಂದು ಹೋರಾಡುವುದನ್ನು
ಬಿಟ್ಟರೆ, ನಾವ್ಯಾರು ಈ ಕ್ಷೇತ್ರದ ಕುರಿತು ಗಂಭೀರವಾಗಿ ಚಿಂತಿಸಿದ್ದಿಲ್ಲ. ಸರ್ಕಾರಿ
ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆಯೇಕೆ ಪ್ರತಿ ವರ್ಷ ಕುಸಿಯುತ್ತಿದೆ? ಖಾಸಗಿ ಶಾಲೆ
ಸೇರಿದಂತೆ ಇಂಗ್ಲಿಷ್ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರು
ಮುಂದಾಗುತ್ತಿರುವುದಾದರೂ ಏತಕ್ಕೆ? ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಸರ್ಕಾರಿ ಶಾಲೆಗಳು
ಯಾವುದರಲ್ಲಿ ಹಿಂದೆ ಬಿದ್ದಿವೆ? ಅವುಗಳನ್ನು ಪರಿಹರಿಸುವ ಕ್ರಮಗಳೇನು ಎಂಬಿತ್ಯಾದಿ
ಮುಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಹಾಗೂ ಆ ಕೊರತೆಗಳನ್ನು
ತುಂಬಿಕೊಳ್ಳುವಂತಹ ರಚನಾತ್ಮಕ ಕಾರ್ಯಗಳು ನಮ್ಮ ಕನ್ನಡ ಪರ ಹೋರಾಟಗಾರರಿಂದಾಗಲೀ, ಪ್ರಾಥಮಿಕ, ಪ್ರೌಢ ಶಿಕ್ಷಣ
ಇಲಾಖೆಗಳಿಂದಾಲಿ ಆಗಿಲ್ಲವೆಂದೇ ಹೇಳಬೇಕು.ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಾಥಮಿಕ ಹಾಗೂ
ಪ್ರೌಢಶಿಕ್ಷಣದಲ್ಲಿ ಪಾಠ, ಪ್ರವಚನ, ಬೋಧನಾದಿಗಳು ಮೊದಲ ಆದ್ಯತೆಗಳಾಗದಿರುವುದೇ ನಮ್ಮ
ಶಿಕ್ಷಣ ವ್ಯವಸ್ಥೆ ನೆಲಕಚ್ಚಿರುವುದಕ್ಕೆ ಪ್ರಮುಖ ಕಾರಣ. ಎಲ್ಲರಿಗೂ ಶಿಕ್ಷಣ
ದೊರೆಯಬೇಕೆನ್ನುವ 'ಸರ್ವ ಶಿಕ್ಷಣ ಅಭಿಯಾನ'ದ ಭರದಲ್ಲಿ ಕೇವಲ ಶಾಲೆಗೆ ಸೇರುವ
ವಿದ್ಯಾರ್ಥಿಗಳ ಸಂಖ್ಯೆಗೆ ಮಹತ್ವ ನೀಡಲಾಗುತ್ತದೆಯೇ ಹೊರತು ಗುಣಮಟ್ಟದ ಕುರಿತಾಗಿ
ಚಿಂತಿಸಿರುವುದಿಲ್ಲ. ಸಾಮಾನ್ಯವಾಗಿ, ನಮ್ಮ ಶೈಕ್ಷಣಿಕ ಗುಣಮಟ್ಟ ಹಾಗೂ ಪರೀಕ್ಷಾ
ಫಲಿತಾಂಶಗಳ ಹಿನ್ನಡೆಗೆ ಶಾಲಾ ಶಿಕ್ಷಕರನ್ನೇ ಹೆಚ್ಚು ಹೊಣೆಯಾಗಿಸಲಾಗುತ್ತದೆ. ಖಾಸಗಿ
ಶಾಲೆಗಳ ಸಾಧನೆಯನ್ನು ಹಿನ್ನೆಲೆಯಾಗಿಸಿಕೊಂಡು, ಸರ್ಕಾರಿ ಶಾಲಾ ಶಿಕ್ಷಕರ ಅರ್ಹತೆಯನ್ನೇ
ಶಂಕಿಸಲಾಗುವುದು, ಅವರ ಅಸಾಮರ್ಥ್ಯವೇ ಕಾರಣವೆನ್ನುವವರಿದ್ದಾರೆ. ಆದರೆ ಇಲ್ಲಿ ಒಂದು
ವಿಷಯವನ್ನು ಗಮನಿಸಬೇಕು. ಖಾಸಗಿ ಶಾಲೆಗಳ ಪ್ರವೇಶಾತಿಯೂ ಒಂದು ನಿರ್ದಿಷ್ಟ ಮಾನದಂಡವನ್ನು
ಹೊಂದಿರುತ್ತದೆ. ಕಲಿಕೆಯಲ್ಲಿ ಮುಂದಿರುವ ಆ ವಿದ್ಯಾರ್ಥಿಗಳು ಸಹಜವಾಗಿಯೇ
ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಅದರಲ್ಲಿ ಖಾಸಗಿ ಶಾಲಾ ಶಿಕ್ಷಕರ
ಹೆಚ್ಚುಗಾರಿಕೆ ಎಂಥದ್ದು ಆದರೆ ಸರ್ಕಾರಿ ಶಾಲೆಗಳ ಸ್ಥಿತಿಯೇ ಬೇರೆ.
ಇಂದಿನ ನಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣದಲ್ಲಿ ಒಂದಷ್ಟು ಉತ್ತಮ ಬದಲಾವಣೆಗಳನ್ನು ತಂದು
ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸಂವರ್ಧಿಸಬೇಕಾದರೆ ಅದಕ್ಕೆ ಮುಖ್ಯವಾಗಿ ಶಿಕ್ಷಕರಿಗೆ
ಉತ್ತಮವಾದ ವಾತಾವರಣವನ್ನು ನಿರ್ಮಿಸಬೇಕು. ಆದರೆ ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದಾಗಿ
ಶಿಕ್ಷಕರು ಬೋಧನೆಯಲ್ಲಿ ತೊಡಗಿಕೊಳ್ಳದೇ ವಿರಳವಾಗಿ. ಅಕ್ಷರ ದಾಸೋಹದ ಲೆಕ್ಕ, ಕ್ಷೀರ
ಭಾಗ್ಯ ಯೋಜನೆಯ ಲೆಕ್ಕ, ನಿರಂತರ ವ್ಯಾಪಕ ಮೌಲ್ಯಮಾಪನ, ಗಣತಿ, ಶಾಲೆ ಬಿಟ್ಟ ಮಕ್ಕಳನ್ನು
ಶಾಲೆಗೆ ತರುವಿಕೆ, ಶೌಚಾಲಯಗಳ ಮಹತ್ವವನ್ನು ಸಾರುವುದು, ಶೌಚಾಲಯಗಳ ನಿರ್ಮಾಣಕ್ಕೆ
ಪ್ರೇರಣೆ, ಇಷ್ಟಕ್ಕೆ ಸಾಲದ್ದೆಂದು ಆಗಾಗ ವಿಶೇಷ ತರಬೇತಿಗಳು ಬೇರೆ. ಈ ಎಲ್ಲಾ ರೀತಿಯ
ಗುಮಾಸ್ತಗಾರಿಕೆಯಲ್ಲೇ ದಿನದ ಸಮಯ ವ್ಯಯವಾಗಿ ಹೋಗುವುದರಿಂದ ಅವರಿಗೆ ಮಕ್ಕಳ ಕಲಿಕೆಯ
ಕುರಿತು ಗಮನಹರಿಸಲು ಸಾಧ್ಯವೇ? ಇನ್ನುಳಿದ ಸಮಯದಲ್ಲಾದರೂ ಎಷ್ಟು ಆಸಕ್ತಿಯಿಂದ ಪಾಠ
ಮಾಡಬಲ್ಲರು?
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರು, ತಮ್ಮ ಅಧಿಕಾರವಧಿಯಲ್ಲಿ ಜಾರಿಗೆ ತರಲಾದ, ಶಾಲಾ
ಸುಧಾರಣಾ ಸಮಿತಿ ಹಾಗೂ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಯೋಜನೆಗಳು ತಮ್ಮ ಬೆನ್ನ
ಹಿಂದೆ, ಶಾಲೆಯನ್ನು ಸಮುದಾಯದೊಂದಿಗೆ ಬೆಸೆಯುವ ಹಾಗೂ ಬಡತನದಿಂದಾಗಿ ಶಾಲೆ ಬಿಟ್ಟ
ಮಕ್ಕಳನ್ನು ಶಾಲೆಗೆ ತರುವ ಸದುದ್ದೇಶವನ್ನು ಹೊಂದಿದ್ದವು. ಈ ಎರಡರ ಪೈಕಿ, ಬಿಸಿ ಊಟ
ಯೋಜನೆ ಮಕ್ಕಳ ಹಾಜರಾತಿಯನ್ನು ಗಣನೀಯವಾಗಿ ಹೆಚ್ಚಿಸಿದ್ದು ಸುಳ್ಳಲ್ಲ. ಈ ಕಾರಣದಿಂದ ಅದು
ಯಶಸ್ವಿಯಾಯಿತೆಂದು ಹೇಳಬಹುದಾದರೂ ಈ ಶಾಲಾ ಸುಧಾರಣಾ ಸಮಿತಿ ಹಾಗೂ ಬಿಸಿ ಊಟ ಸೃಷ್ಟಿಸಿದ
ಹಳವಂಡಗಳೇನು ಕಡಿಮೆಯದ್ದಲ್ಲ. ಈ ಎರಡು ಯೋಜನೆಗಳು ಒಂದರ್ಥದಲ್ಲಿ ಉತ್ತಮವಾಗಿ
ತೋರಬಹುದಾದ ಕ್ರಮಗಳೆನಿಸಿದರೂ ಮುಖ್ಯವಾಗಿ ತನ್ನ ಬೋಧನೆಯಿಂದ ಒಂದು ಪೀಳಿಗೆಯನ್ನು
ರೂಪಿಸುವ ಶಿಕ್ಷಕನಿಗಂತೂ ಈ ಎರಡು ಯೋಜನೆಗಳು ಶಾಪವೇ ಸರಿ. ಶಿಕ್ಷಕರು, ಶಾಲಾ ಸುಧಾರಣಾ
ಸಮಿತಿಯಿಂದ ಅನುಭವಿಸಿದ ನೋವು ಭಾಗಶಃ ಯಾವುದರಿಂದಲೂ ಅನುಭವಿಸಿಲ್ಲವೆನೋ?
ಶಾಲೆಗೆ, ಈ ಶಾಲಾ ಸುಧಾರಣಾ ಸಮಿತಿ ಆಗಮನದಿಂದಾಗಿ ಕೇವಲ ಗ್ರಾಮ ಪಂಚಾಯಿತಿಗೆ
ಸೀಮಿತವಾಗಿದ್ದ ಹಳ್ಳಿಯ ರಾಜಕೀಯ, ಇಂದು ಶಾಲೆಯ ಅಂಗಳವನ್ನು ಪ್ರವೇಶಿಸಿದೆ. ಶಾಲೆಯೊಂದು
ಗ್ರಾಮ ಪಂಚಾಯಿತಿ ಚುನಾವಣೆಗೆ ಪೂರ್ವಭಾವಿಯಾಗಿ ಒಂದು ವೇದಿಕೆಯನ್ನು
ಕಲ್ಪಿಸಿಕೊಟ್ಟಂತಾಗಿದೆ. ಶಾಲಾ ಸುಧಾರಣಾ ಸಮಿತಿ ಒಂದು ರಾಜಕೀಯ ಕೂಟವಾಗಿ ಮಾರ್ಪಟ್ಟಿದೆ.
ಇದರ ಪರಿಣಾಮವಾಗಿ ಬಂದ ಅಧಿಕಾರವನ್ನು ಕೆಲವರು ಶಿಕ್ಷಕರ ಮೇಲೆ ಚಲಾಯಿಸುತ್ತಿದ್ದಾರೆ. ಈ
ಹಿಂದೆ ಗ್ರಾಮದಲ್ಲಿ ಅತೀ ಗೌರವ, ಮರ್ಯಾದೆಗಳನ್ನು ಪಡೆಯುತ್ತಿದ್ದ ಶಾಲಾ ಶಿಕ್ಷಕರು
ವಿದ್ಯಾರ್ಥಿಗಳ ಎದುರಿಗೇನೆ ಶಾಲಾ ಸುಧಾರಣಾ ಸಮಿತಿಯವರ ನಿಂದನೆಗೆ ಒಳಗಾಗಬೇಕಾಯಿತು.
ಏಕವಚನದಲ್ಲಿ ಮಾತನಾಡಿದರೂ ಸಹಿಸಕೊಳ್ಳಬೇಕಾಯಿತು. ಇಷ್ಟಕ್ಕೆ ನಿಲ್ಲಲಿಲ್ಲ ಇದರ
ಕರ್ಮಕಾಂಡ. ಇದರ ಮುಂದುವರಿದ ಭಾಗವೆನ್ನುವಂತೆ ಕೆಲ ಸದಸ್ಯರು ಶಾಲೆಯ ಆವರಣದೊಳಗೆ ಕುಡಿದು
ಬಂದು ಶಿಕ್ಷಕರೊಂದಿಗೆ ಜಗಳಕ್ಕೆ ನಿಂತರು. ಶಿಕ್ಷಕರೇನೊ ಹೇಗೊ ಸಹಿಸಿಯಾರು. ಆದರೆ
ಶಿಕ್ಷಕಿಯರು ಈ ರೀತಿಯ ಮೊಕದ್ದಮೆಗಳು ದಾಖಲಾಗಿಲ್ಲವೆಂದು ಶಿಕ್ಷಣ ಇಲಾಖೆ
ಜಾರಿಕೊಳ್ಳಬಹುದು. ಆದರೆ ಈ ರೀತಿ ಮೊಕದ್ದಮೆ ಹೂಡಿದರೆ ಈ ಶಾಲಾ ಸುಧಾರಣಾ ಸಮಿತಿಯವರು
ಸುಮ್ಮನಿದ್ದಾರೆಯೇ?
ಶಾಲಾ ಸುಧಾರಣಾ ಸಮಿತಿಯವರು ವಿನಾಕಾರಣ ಮುಖ್ಯ ಶಿಕ್ಷಕರೊಂದಿಗೆ ತಗಾದೆ
ತೆಗೆಯಲಾರಂಭಿಸಿದರು. ಕಾಮಗಾರಿಗಳು ಆರಂಭಗೊಳ್ಳದೆ, ಚೆಕ್ ನೀಡಿ, ಮುಂದೆ ಏನಾದರೂ ಆದರೆ
ನಾವು ನೋಡಿಕೊಳ್ಳುತ್ತೇವೆ. 'ನಮ್ಮದೇ ಶಾಸಕರು, ನಮ್ಮದೇ ಸಂಸದರು. ನಾವು ಹೇಳಿದಷ್ಟು
ಕೇಳಿ' ಎಂಬಿತ್ಯಾದಿ ಧಮಕಿ ಹಾಕಲಾರಂಭಿಸಿದರು. ಮಾತಿಗೆ ಒಪ್ಪಲಿಲ್ಲವೆನ್ನಿ, ಸ್ಥಳೀಯ
ಶಾಸಕ, ಸಂಸದರ ಮೂಲಕ ಕಿರುಕುಳಕ್ಕೆ ಮುಂದಾಗುತ್ತಾರೆ. ಹೆಜ್ಜೆ ಹೆಜ್ಜೆಯಲ್ಲೂ ತಪ್ಪು
ಹುಡುಕುವ, ದಂಡಿಸುವ ಪ್ರಯತ್ನಗಳಾಗುತ್ತವೆ. ಇಂತಹ ಕೀಳು ರಾಜಕೀಯದಿಂದ ಶಾಲಾ ಶಿಕ್ಷಕರು
ಅದೆಂತಹ ನೋವನ್ನು ಅನುಭವಿಸಿದ್ದಾರೆಂದರೆ, ಕೆಲವರು ವೃತ್ತಿಯಿಂದಲೇ ವಿಮುಖರಾಗಲು
ಚಿಂತಿಸಿದರೆ, ಇನ್ನು ಕೆಲವರು ಆತ್ಮಹತ್ಯೆಯಂತಹ ಪ್ರಯತ್ನಕ್ಕೂ ಮುಂದಾಗಿದ್ದೂ ವ್ಯವಸ್ಥೆಯ
ಕ್ರೂರ ಮುಖದ ಅನಾವರಣವಷ್ಟೇ.
ಶಿಕ್ಷಣ ಇಲಾಖೆಯ ಸೂಚನೆಯಂತೆ ಶಾಲಾ ಮುಖ್ಯಸ್ಥರೇ ಧ್ವಜಾರೋಹಣವನ್ನು ಮಾಡಬೇಕು. ಆದರೆ
ಇಂದು ಅನೇಕ ಶಾಲೆಗಳಲ್ಲಿ ಇಲಾಖೆಯ ಸೂಚನೆಯನ್ನು ದಿಕ್ಕರಿಸಿ, ಶಾಲಾ ಸುಧಾರಣಾ ಸಮಿತಿಯ
ಅಧ್ಯಕ್ಷರೇ, ಮುಖ್ಯ ಶಿಕ್ಷಕರೊಂದಿಗೆ ತಗಾದೆ ತೆಗೆದು ತಾವೇ ಧ್ವಜಾರೋಹಣವನ್ನು
ಮಾಡುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದರೆ ಕೆಲ ಸಂತಾಪದ ಮಾತುಗಳು
ಸಿಗುತ್ತವೆಯೋ ಹೊರತು ಮತ್ತೇನಿಲ್ಲ.
ಇನ್ನೂ ಬಿಸಿ ಊಟದ ಬಗೆಗಂತೂ ಹೇಳುವುದೇ ಬೇಡ. ಬಿಸಿ ಊಟದಲ್ಲಿಯ ಖಾರ, ಉಪ್ಪಿನಂತಹ ಸಣ್ಣ
ಸಣ್ಣ ಹೆಚ್ಚು ಕಮ್ಮಿಗಳಿಗೂ ಶಾಲಾ ಮುಖ್ಯಶಿಕ್ಷಕರನ್ನೆ ಗುರಿಯಾಗಿಸಲಾಗುತ್ತದೆ. ಬಿಹಾರದ
ಘಟನೆಯ ಕುರಿತಾದ ಕೋರ್ಟ್‌ನ 'ಬಿಸಿ ಊಟದ ಹೊಣೆ ಶಿಕ್ಷಕರದ್ದಲ್ಲ' ಎಂಬ ನಿರ್ಣಯವಿದ್ದರೂ
ಅದಕ್ಕೆ ಯಾವುದೇ ಬೆಲೆಯೇ ಇಲ್ಲದಾಗಿದೆ. ಈ ಎಲ್ಲಾ ದೈನಂದಿನ ಅವಮಾನಗಳಿಂದಾಗಿ ಶಿಕ್ಷಕನ
ಮನೋಸ್ಥೈರ್ಯವೇ ಅಳಿದುಹೋಗಿದೆ. ಇಂದು ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರು ಒಂದು ದಿನದ
ರಜೆಗೂ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರನ್ನು ಅವಲಂಬಿಸಬೇಕಿದೆ. ಇಂತಹ ಹೀನ
ಸ್ಥಿತಿಯಲ್ಲಿರುವ ಶಿಕ್ಷಕರಾದರೂ ಎಷ್ಟು ಆಸ್ಥೆವಹಿಸಿ ಪಾಠ-ಪ್ರವಚನಗಳಲ್ಲಿ
ತೊಡಗಿಕೊಂಡಾರು.
ಇಂದಿನ ನಮ್ಮ ಶಿಕ್ಷಣ, ಸುಧಾರಣೆಯ ದಾರಿ ಹಿಡಿಯಬೇಕಾದರೆ, ಮುಖ್ಯವಾಗಿ ನಮ್ಮ ಪ್ರಾಥಮಿಕ
ಹಾಗೂ ಪ್ರೌಢ ಶಿಕ್ಷಣಕ್ಕೆ ಹೊಸ ಕಾಯಕಲ್ಪದ ಅವಶ್ಯಕತೆಯಿದೆ. ಶಾಲೆಯ ಅಂಗಳದೊಳಗೆ ರಾಜಕೀಯ
ನುಸುಳದಂತೆ ಎಚ್ಚರಿಕೆವಹಿಸಬೇಕಾಗಿದೆ. ಈಗ ಪ್ರಸ್ತುತವಿರುವ ಶಾಲಾ ಸುಧಾರಣಾ ಸಮಿತಿಯನ್ನು
ರದ್ದುಗೊಳಿಸಿ ಆ ಕೆಲಸಕ್ಕೆ ಅಧಿಕಾರಿಗಳನ್ನೆ ಬಳಸಿಕೊಳ್ಳಬಹುದು. ಇಲ್ಲದಿದ್ದಲ್ಲಿ,
ಶಾಲಾ ಸುಧಾರಣಾ ಸಮಿತಿಯ ಸದಸ್ಯರಿಗೆ ಪದವಿ ಶಿಕ್ಷಣವನ್ನು ಕನಿಷ್ಟ
ಮಾನದಂಡವನ್ನಾಗಿಟ್ಟುಕೊಳ್ಳಬೇಕು. ಆ ಗ್ರಾಮದಲ್ಲಿರುವ ನಿವೃತ್ತ ಸರ್ಕಾರಿ ಅಧಿಕಾರಿಗಳು,
ಸ್ವಾತಂತ್ರ್ಯ ಹೋರಾಟಗಾರು, ನಿವೃತ್ತ ಸೈನಿಕರಿಗೆ ಆ ಸಮಿತಿಯಲ್ಲಿ ಅವಕಾಶ ನೀಡುವ ಮೂಲಕ
ಸಂಪೂರ್ಣ ರಾಜಕೀಯದಿಂದ ಮುಕ್ತಗೊಳಿಸಬೇಕು. ಬಿಸಿ ಊಟ, ಕ್ಷೀರಭಾಗ್ಯ, ಸೈಕಲ್ ವಿತರಣೆ
ಮೊದಲಾದ ಕಾರ್ಯಗಳಿಗೆ ಶಿಕ್ಷಕೇತರ ಸಿಬ್ಬಂದಿಯನ್ನು ಬಳಸಿಕೊಳ್ಳಬೇಕು. ಶಾಲೆಯ ದೈನಂದಿನ
ಲೆಕ್ಕ ಪತ್ರ, ವರದಿ ಮೊದಲಾದವುಗಳ ತಯಾರಿಗೆ ಪ್ರತ್ಯೇಕ ಸಿಬ್ಬಂದಿಯನ್ನು ಸರ್ಕಾರ
ನೇಮಿಸಬೇಕು.
ಹಾಗಾದರೆ ಮಾತ್ರ ಶಿಕ್ಷಕರು ಒಂದಿಷ್ಟು ಒತ್ತಡದಿಂದ ಮುಕ್ತರಾಗಿ, ನೆಮ್ಮದಿಯಿಂದ ಪಾಠ,
ಬೋಧನೆಗಳಲ್ಲಿ ತೊಡಗಿಕೊಳ್ಳಬಹುದು. ಇಂದು ನಮ್ಮ ವ್ಯವಸ್ಥೆಯ ಸುಧಾರಣೆಗೆ ಶಿಕ್ಷಕ ವರ್ಗದ
ಹಿತ ಕಾಯುವ ಕೆಲಸವಾಗಬೇಕಿದೆ. ಶಿಕ್ಷಕರ ಸುತ್ತ ಒಂದು ನೆಮ್ಮದಿಯ, ನಿರ್ಭಯ
ವಾತಾವರಣವನ್ನುಂಟು ಮಾಡುವುದು ಇಂದಿನ ತುರ್ತು ಕೆಲಸ. ಹಾಗಾದಲ್ಲಿ ಮಾತ್ರ ಶಿಕ್ಷಕರು
ಯಾವುದೇ ಆತಂಕಗಳಿಲ್ಲದೇ ನಿರ್ಭಿಡೆಯಿಂದ ತಮ್ಮನ್ನು ತಾವು ಬೋಧನಾ ಕಾರ್ಯಗಳಲ್ಲಿ
ತೊಡಗಿಸಿಕೊಳ್ಳಬಹುದು. ಮಾನಸಿಕ ನೆಮ್ಮದಿಯನ್ನೇ ಕಳೆದುಕೊಂಡ ಮನುಷ್ಯ ಹೇಗೆ ತಾನೇ ತನ್ನ
ಕಾರ್ಯದಲ್ಲಿ ಯಶಸ್ಸು ಗಳಿಸಿಯಾನು?
- ಕಿರಣ್ ಜೋಶಿ, ಉಪನ್ಯಾಸಕರು
ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ 'ನಿರಂತರ ವ್ಯಾಪಕ ಮೌಲ್ಯಮಾಪನ'ದ ಕುರಿತಾದ
ವರದಿಗಳು, ನಾವು ಮತ್ತೊಮ್ಮೆ ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಕುರಿತು
ಯೋಚಿಸುವಂತೆ ಮಾಡಿದೆ. ಸ್ವಾತಂತ್ರ್ಯ ಬಂದು ಇಷ್ಟು ಕಾಲವಾದರೂ ನಾವೂ ನಮ್ಮ ಸಾಂಪ್ರದಾಯಿಕ
ಶಿಕ್ಷಣದ ರೀತಿಯಿಂದ ಹೊರಬಂದಿಲ್ಲವೆನಿಸುತ್ತದೆ. ಬದಲಾದ ಕಾಲಮಾನಕ್ಕೆ, ಬದಲಾದ
ಅವಶ್ಯಕತೆಗಳಿಗೆ ಅನುಗುಣವಾಗಿ ನಮ್ಮ ಶಿಕ್ಷಣ ಪದ್ಧತಿಯೂ ಹಲವು ಬದಲಾವಣೆಗಳನ್ನು ಬಯಸುವ
ಕ್ಷೇತ್ರವಾಗಿದೆಯೆಂಬುದನ್ನು ನಾವು ಮರೆತಿದ್ದೇವೆ. ಕೇವಲ, ಕನ್ನಡ ಕನ್ನಡ ಎಂದು ಬೊಬ್ಬೆ
ಹಾಕುವ, ತಮ್ಮ ಮನೆಯ ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟ್‌ಗಳಿಗೆ ಕಳಿಸುವ ನಮ್ಮ ಕೆಲ
ಹೋರಾಟಗಾರರು ಆಗಾಗ, 'ಕನ್ನಡ ಶಾಲೆಯನ್ನು ಸರ್ಕಾರ ಮುಚ್ಚಬಾರದು' ಎಂದು ಹೋರಾಡುವುದನ್ನು
ಬಿಟ್ಟರೆ, ನಾವ್ಯಾರು ಈ ಕ್ಷೇತ್ರದ ಕುರಿತು ಗಂಭೀರವಾಗಿ ಚಿಂತಿಸಿದ್ದಿಲ್ಲ. ಸರ್ಕಾರಿ
ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆಯೇಕೆ ಪ್ರತಿ ವರ್ಷ ಕುಸಿಯುತ್ತಿದೆ? ಖಾಸಗಿ ಶಾಲೆ
ಸೇರಿದಂತೆ ಇಂಗ್ಲಿಷ್ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರು
ಮುಂದಾಗುತ್ತಿರುವುದಾದರೂ ಏತಕ್ಕೆ? ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಸರ್ಕಾರಿ ಶಾಲೆಗಳು
ಯಾವುದರಲ್ಲಿ ಹಿಂದೆ ಬಿದ್ದಿವೆ? ಅವುಗಳನ್ನು ಪರಿಹರಿಸುವ ಕ್ರಮಗಳೇನು ಎಂಬಿತ್ಯಾದಿ
ಮುಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಹಾಗೂ ಆ ಕೊರತೆಗಳನ್ನು
ತುಂಬಿಕೊಳ್ಳುವಂತಹ ರಚನಾತ್ಮಕ ಕಾರ್ಯಗಳು ನಮ್ಮ ಕನ್ನಡ ಪರ ಹೋರಾಟಗಾರರಿಂದಾಗಲೀ,
ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಗಳಿಂದಾಲಿ ಆಗಿಲ್ಲವೆಂದೇ ಹೇಳಬೇಕು.ಇತ್ತೀಚಿನ
ದಿನಗಳಲ್ಲಿ ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಪಾಠ, ಪ್ರವಚನ, ಬೋಧನಾದಿಗಳು
ಮೊದಲ ಆದ್ಯತೆಗಳಾಗದಿರುವುದೇ ನಮ್ಮ ಶಿಕ್ಷಣ ವ್ಯವಸ್ಥೆ ನೆಲಕಚ್ಚಿರುವುದಕ್ಕೆ ಪ್ರಮುಖ
ಕಾರಣ. ಎಲ್ಲರಿಗೂ ಶಿಕ್ಷಣ ದೊರೆಯಬೇಕೆನ್ನುವ 'ಸರ್ವ ಶಿಕ್ಷಣ ಅಭಿಯಾನ'ದ ಭರದಲ್ಲಿ ಕೇವಲ
ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಗೆ ಮಹತ್ವ ನೀಡಲಾಗುತ್ತದೆಯೇ ಹೊರತು ಗುಣಮಟ್ಟದ
ಕುರಿತಾಗಿ ಚಿಂತಿಸಿರುವುದಿಲ್ಲ. ಸಾಮಾನ್ಯವಾಗಿ, ನಮ್ಮ ಶೈಕ್ಷಣಿಕ ಗುಣಮಟ್ಟ ಹಾಗೂ
ಪರೀಕ್ಷಾ ಫಲಿತಾಂಶಗಳ ಹಿನ್ನಡೆಗೆ ಶಾಲಾ ಶಿಕ್ಷಕರನ್ನೇ ಹೆಚ್ಚು ಹೊಣೆಯಾಗಿಸಲಾಗುತ್ತದೆ.
ಖಾಸಗಿ ಶಾಲೆಗಳ ಸಾಧನೆಯನ್ನು ಹಿನ್ನೆಲೆಯಾಗಿಸಿಕೊಂಡು, ಸರ್ಕಾರಿ ಶಾಲಾ ಶಿಕ್ಷಕರ
ಅರ್ಹತೆಯನ್ನೇ ಶಂಕಿಸಲಾಗುವುದು, ಅವರ ಅಸಾಮರ್ಥ್ಯವೇ ಕಾರಣವೆನ್ನುವವರಿದ್ದಾರೆ. ಆದರೆ
ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಖಾಸಗಿ ಶಾಲೆಗಳ ಪ್ರವೇಶಾತಿಯೂ ಒಂದು ನಿರ್ದಿಷ್ಟ
ಮಾನದಂಡವನ್ನು ಹೊಂದಿರುತ್ತದೆ. ಕಲಿಕೆಯಲ್ಲಿ ಮುಂದಿರುವ ಆ ವಿದ್ಯಾರ್ಥಿಗಳು ಸಹಜವಾಗಿಯೇ
ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಅದರಲ್ಲಿ ಖಾಸಗಿ ಶಾಲಾ ಶಿಕ್ಷಕರ
ಹೆಚ್ಚುಗಾರಿಕೆ ಎಂಥದ್ದು ಆದರೆ ಸರ್ಕಾರಿ ಶಾಲೆಗಳ ಸ್ಥಿತಿಯೇ ಬೇರೆ.ಇಂದಿನ ನಮ್ಮ
ಪ್ರಾಥಮಿಕ, ಪ್ರೌಢ ಶಿಕ್ಷಣದಲ್ಲಿ ಒಂದಷ್ಟು ಉತ್ತಮ ಬದಲಾವಣೆಗಳನ್ನು ತಂದು ನಮ್ಮ ಶಿಕ್ಷಣ
ವ್ಯವಸ್ಥೆಯನ್ನು ಸಂವರ್ಧಿಸಬೇಕಾದರೆ ಅದಕ್ಕೆ ಮುಖ್ಯವಾಗಿ ಶಿಕ್ಷಕರಿಗೆ ಉತ್ತಮವಾದ
ವಾತಾವರಣವನ್ನು ನಿರ್ಮಿಸಬೇಕು. ಆದರೆ ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಶಿಕ್ಷಕರು
ಬೋಧನೆಯಲ್ಲಿ ತೊಡಗಿಕೊಳ್ಳದೇ ವಿರಳವಾಗಿ. ಅಕ್ಷರ ದಾಸೋಹದ ಲೆಕ್ಕ, ಕ್ಷೀರ ಭಾಗ್ಯ
ಯೋಜನೆಯ ಲೆಕ್ಕ, ನಿರಂತರ ವ್ಯಾಪಕ ಮೌಲ್ಯಮಾಪನ, ಗಣತಿ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ
ತರುವಿಕೆ, ಶೌಚಾಲಯಗಳ ಮಹತ್ವವನ್ನು ಸಾರುವುದು, ಶೌಚಾಲಯಗಳ ನಿರ್ಮಾಣಕ್ಕೆ ಪ್ರೇರಣೆ,
ಇಷ್ಟಕ್ಕೆ ಸಾಲದ್ದೆಂದು ಆಗಾಗ ವಿಶೇಷ ತರಬೇತಿಗಳು ಬೇರೆ. ಈ ಎಲ್ಲಾ ರೀತಿಯ
ಗುಮಾಸ್ತಗಾರಿಕೆಯಲ್ಲೇ ದಿನದ ಸಮಯ ವ್ಯಯವಾಗಿ ಹೋಗುವುದರಿಂದ ಅವರಿಗೆ ಮಕ್ಕಳ ಕಲಿಕೆಯ
ಕುರಿತು ಗಮನಹರಿಸಲು ಸಾಧ್ಯವೇ? ಇನ್ನುಳಿದ ಸಮಯದಲ್ಲಾದರೂ ಎಷ್ಟು ಆಸಕ್ತಿಯಿಂದ ಪಾಠ
ಮಾಡಬಲ್ಲರು?ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರು, ತಮ್ಮ ಅಧಿಕಾರವಧಿಯಲ್ಲಿ ಜಾರಿಗೆ
ತರಲಾದ, ಶಾಲಾ ಸುಧಾರಣಾ ಸಮಿತಿ ಹಾಗೂ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಯೋಜನೆಗಳು ತಮ್ಮ
ಬೆನ್ನ ಹಿಂದೆ, ಶಾಲೆಯನ್ನು ಸಮುದಾಯದೊಂದಿಗೆ ಬೆಸೆಯುವ ಹಾಗೂ ಬಡತನದಿಂದಾಗಿ ಶಾಲೆ
ಬಿಟ್ಟ ಮಕ್ಕಳನ್ನು ಶಾಲೆಗೆ ತರುವ ಸದುದ್ದೇಶವನ್ನು ಹೊಂದಿದ್ದವು. ಈ ಎರಡರ ಪೈಕಿ, ಬಿಸಿ
ಊಟ ಯೋಜನೆ ಮಕ್ಕಳ ಹಾಜರಾತಿಯನ್ನು ಗಣನೀಯವಾಗಿ ಹೆಚ್ಚಿಸಿದ್ದು ಸುಳ್ಳಲ್ಲ. ಈ ಕಾರಣದಿಂದ
ಅದು ಯಶಸ್ವಿಯಾಯಿತೆಂದು ಹೇಳಬಹುದಾದರೂ ಈ ಶಾಲಾ ಸುಧಾರಣಾ ಸಮಿತಿ ಹಾಗೂ ಬಿಸಿ ಊಟ
ಸೃಷ್ಟಿಸಿದ ಹಳವಂಡಗಳೇನು ಕಡಿಮೆಯದ್ದಲ್ಲ. ಈ ಎರಡು ಯೋಜನೆಗಳು ಒಂದರ್ಥದಲ್ಲಿ ಉತ್ತಮವಾಗಿ
ತೋರಬಹುದಾದ ಕ್ರಮಗಳೆನಿಸಿದರೂ ಮುಖ್ಯವಾಗಿ ತನ್ನ ಬೋಧನೆಯಿಂದ ಒಂದು ಪೀಳಿಗೆಯನ್ನು
ರೂಪಿಸುವ ಶಿಕ್ಷಕನಿಗಂತೂ ಈ ಎರಡು ಯೋಜನೆಗಳು ಶಾಪವೇ ಸರಿ. ಶಿಕ್ಷಕರು, ಶಾಲಾ ಸುಧಾರಣಾ
ಸಮಿತಿಯಿಂದ ಅನುಭವಿಸಿದ ನೋವು ಭಾಗಶಃ ಯಾವುದರಿಂದಲೂ ಅನುಭವಿಸಿಲ್ಲವೆನೋ?ಶಾಲೆಗೆ, ಈ
ಶಾಲಾ ಸುಧಾರಣಾ ಸಮಿತಿ ಆಗಮನದಿಂದಾಗಿ ಕೇವಲ ಗ್ರಾಮ ಪಂಚಾಯಿತಿಗೆ ಸೀಮಿತವಾಗಿದ್ದ ಹಳ್ಳಿಯ
ರಾಜಕೀಯ, ಇಂದು ಶಾಲೆಯ ಅಂಗಳವನ್ನು ಪ್ರವೇಶಿಸಿದೆ. ಶಾಲೆಯೊಂದು ಗ್ರಾಮ ಪಂಚಾಯಿತಿ
ಚುನಾವಣೆಗೆ ಪೂರ್ವಭಾವಿಯಾಗಿ ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟಂತಾಗಿದೆ. ಶಾಲಾ
ಸುಧಾರಣಾ ಸಮಿತಿ ಒಂದು ರಾಜಕೀಯ ಕೂಟವಾಗಿ ಮಾರ್ಪಟ್ಟಿದೆ. ಇದರ ಪರಿಣಾಮವಾಗಿ ಬಂದ
ಅಧಿಕಾರವನ್ನು ಕೆಲವರು ಶಿಕ್ಷಕರ ಮೇಲೆ ಚಲಾಯಿಸುತ್ತಿದ್ದಾರೆ. ಈ ಹಿಂದೆ ಗ್ರಾಮದಲ್ಲಿ
ಅತೀ ಗೌರವ, ಮರ್ಯಾದೆಗಳನ್ನು ಪಡೆಯುತ್ತಿದ್ದ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ
ಎದುರಿಗೇನೆ ಶಾಲಾ ಸುಧಾರಣಾ ಸಮಿತಿಯವರ ನಿಂದನೆಗೆ ಒಳಗಾಗಬೇಕಾಯಿತು. ಏಕವಚನದಲ್ಲಿ
ಮಾತನಾಡಿದರೂ ಸಹಿಸಕೊಳ್ಳಬೇಕಾಯಿತು. ಇಷ್ಟಕ್ಕೆ ನಿಲ್ಲಲಿಲ್ಲ ಇದರ ಕರ್ಮಕಾಂಡ. ಇದರ
ಮುಂದುವರಿದ ಭಾಗವೆನ್ನುವಂತೆ ಕೆಲ ಸದಸ್ಯರು ಶಾಲೆಯ ಆವರಣದೊಳಗೆ ಕುಡಿದು ಬಂದು
ಶಿಕ್ಷಕರೊಂದಿಗೆ ಜಗಳಕ್ಕೆ ನಿಂತರು. ಶಿಕ್ಷಕರೇನೊ ಹೇಗೊ ಸಹಿಸಿಯಾರು. ಆದರೆ ಶಿಕ್ಷಕಿಯರು
ಈ ರೀತಿಯ ಮೊಕದ್ದಮೆಗಳು ದಾಖಲಾಗಿಲ್ಲವೆಂದು ಶಿಕ್ಷಣ ಇಲಾಖೆ ಜಾರಿಕೊಳ್ಳಬಹುದು. ಆದರೆ ಈ
ರೀತಿ ಮೊಕದ್ದಮೆ ಹೂಡಿದರೆ ಈ ಶಾಲಾ ಸುಧಾರಣಾ ಸಮಿತಿಯವರು ಸುಮ್ಮನಿದ್ದಾರೆಯೇ?ಶಾಲಾ
ಸುಧಾರಣಾ ಸಮಿತಿಯವರು ವಿನಾಕಾರಣ ಮುಖ್ಯ ಶಿಕ್ಷಕರೊಂದಿಗೆ ತಗಾದೆ ತೆಗೆಯಲಾರಂಭಿಸಿದರು.
ಕಾಮಗಾರಿಗಳು ಆರಂಭಗೊಳ್ಳದೆ, ಚೆಕ್ ನೀಡಿ, ಮುಂದೆ ಏನಾದರೂ ಆದರೆ ನಾವು
ನೋಡಿಕೊಳ್ಳುತ್ತೇವೆ. 'ನಮ್ಮದೇ ಶಾಸಕರು, ನಮ್ಮದೇ ಸಂಸದರು. ನಾವು ಹೇಳಿದಷ್ಟು ಕೇಳಿ'
ಎಂಬಿತ್ಯಾದಿ ಧಮಕಿ ಹಾಕಲಾರಂಭಿಸಿದರು. ಮಾತಿಗೆ ಒಪ್ಪಲಿಲ್ಲವೆನ್ನಿ, ಸ್ಥಳೀಯ ಶಾಸಕ,
ಸಂಸದರ ಮೂಲಕ ಕಿರುಕುಳಕ್ಕೆ ಮುಂದಾಗುತ್ತಾರೆ. ಹೆಜ್ಜೆ ಹೆಜ್ಜೆಯಲ್ಲೂ ತಪ್ಪು ಹುಡುಕುವ,
ದಂಡಿಸುವ ಪ್ರಯತ್ನಗಳಾಗುತ್ತವೆ. ಇಂತಹ ಕೀಳು ರಾಜಕೀಯದಿಂದ ಶಾಲಾ ಶಿಕ್ಷಕರು ಅದೆಂತಹ
ನೋವನ್ನು ಅನುಭವಿಸಿದ್ದಾರೆಂದರೆ, ಕೆಲವರು ವೃತ್ತಿಯಿಂದಲೇ ವಿಮುಖರಾಗಲು ಚಿಂತಿಸಿದರೆ,
ಇನ್ನು ಕೆಲವರು ಆತ್ಮಹತ್ಯೆಯಂತಹ ಪ್ರಯತ್ನಕ್ಕೂ ಮುಂದಾಗಿದ್ದೂ ವ್ಯವಸ್ಥೆಯ ಕ್ರೂರ ಮುಖದ
ಅನಾವರಣವಷ್ಟೇ. ಶಿಕ್ಷಣ ಇಲಾಖೆಯ ಸೂಚನೆಯಂತೆ ಶಾಲಾ ಮುಖ್ಯಸ್ಥರೇ ಧ್ವಜಾರೋಹಣವನ್ನು
ಮಾಡಬೇಕು. ಆದರೆ ಇಂದು ಅನೇಕ ಶಾಲೆಗಳಲ್ಲಿ ಇಲಾಖೆಯ ಸೂಚನೆಯನ್ನು ದಿಕ್ಕರಿಸಿ, ಶಾಲಾ
ಸುಧಾರಣಾ ಸಮಿತಿಯ ಅಧ್ಯಕ್ಷರೇ, ಮುಖ್ಯ ಶಿಕ್ಷಕರೊಂದಿಗೆ ತಗಾದೆ ತೆಗೆದು ತಾವೇ
ಧ್ವಜಾರೋಹಣವನ್ನು ಮಾಡುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದರೆ ಕೆಲ
ಸಂತಾಪದ ಮಾತುಗಳು ಸಿಗುತ್ತವೆಯೋ ಹೊರತು ಮತ್ತೇನಿಲ್ಲ.ಇನ್ನೂ ಬಿಸಿ ಊಟದ ಬಗೆಗಂತೂ
ಹೇಳುವುದೇ ಬೇಡ. ಬಿಸಿ ಊಟದಲ್ಲಿಯ ಖಾರ, ಉಪ್ಪಿನಂತಹ ಸಣ್ಣ ಸಣ್ಣ ಹೆಚ್ಚು ಕಮ್ಮಿಗಳಿಗೂ
ಶಾಲಾ ಮುಖ್ಯಶಿಕ್ಷಕರನ್ನೆ ಗುರಿಯಾಗಿಸಲಾಗುತ್ತದೆ. ಬಿಹಾರದ ಘಟನೆಯ ಕುರಿತಾದ ಕೋರ್ಟ್‌ನ
'ಬಿಸಿ ಊಟದ ಹೊಣೆ ಶಿಕ್ಷಕರದ್ದಲ್ಲ' ಎಂಬ ನಿರ್ಣಯವಿದ್ದರೂ ಅದಕ್ಕೆ ಯಾವುದೇ ಬೆಲೆಯೇ
ಇಲ್ಲದಾಗಿದೆ. ಈ ಎಲ್ಲಾ ದೈನಂದಿನ ಅವಮಾನಗಳಿಂದಾಗಿ ಶಿಕ್ಷಕನ ಮನೋಸ್ಥೈರ್ಯವೇ
ಅಳಿದುಹೋಗಿದೆ. ಇಂದು ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರು ಒಂದು ದಿನದ ರಜೆಗೂ ಶಾಲಾ
ಸುಧಾರಣಾ ಸಮಿತಿಯ ಅಧ್ಯಕ್ಷರನ್ನು ಅವಲಂಬಿಸಬೇಕಿದೆ. ಇಂತಹ ಹೀನ ಸ್ಥಿತಿಯಲ್ಲಿರುವ
ಶಿಕ್ಷಕರಾದರೂ ಎಷ್ಟು ಆಸ್ಥೆವಹಿಸಿ ಪಾಠ-ಪ್ರವಚನಗಳಲ್ಲಿ ತೊಡಗಿಕೊಂಡಾರು.ಇಂದಿನ ನಮ್ಮ
ಶಿಕ್ಷಣ, ಸುಧಾರಣೆಯ ದಾರಿ ಹಿಡಿಯಬೇಕಾದರೆ, ಮುಖ್ಯವಾಗಿ ನಮ್ಮ ಪ್ರಾಥಮಿಕ ಹಾಗೂ ಪ್ರೌಢ
ಶಿಕ್ಷಣಕ್ಕೆ ಹೊಸ ಕಾಯಕಲ್ಪದ ಅವಶ್ಯಕತೆಯಿದೆ. ಶಾಲೆಯ ಅಂಗಳದೊಳಗೆ ರಾಜಕೀಯ ನುಸುಳದಂತೆ
ಎಚ್ಚರಿಕೆವಹಿಸಬೇಕಾಗಿದೆ. ಈಗ ಪ್ರಸ್ತುತವಿರುವ ಶಾಲಾ ಸುಧಾರಣಾ ಸಮಿತಿಯನ್ನು
ರದ್ದುಗೊಳಿಸಿ ಆ ಕೆಲಸಕ್ಕೆ ಅಧಿಕಾರಿಗಳನ್ನೆ ಬಳಸಿಕೊಳ್ಳಬಹುದು. ಇಲ್ಲದಿದ್ದಲ್ಲಿ, ಶಾಲಾ
ಸುಧಾರಣಾ ಸಮಿತಿಯ ಸದಸ್ಯರಿಗೆ ಪದವಿ ಶಿಕ್ಷಣವನ್ನು ಕನಿಷ್ಟ
ಮಾನದಂಡವನ್ನಾಗಿಟ್ಟುಕೊಳ್ಳಬೇಕು. ಆ ಗ್ರಾಮದಲ್ಲಿರುವ ನಿವೃತ್ತ ಸರ್ಕಾರಿ ಅಧಿಕಾರಿಗಳು,
ಸ್ವಾತಂತ್ರ್ಯ ಹೋರಾಟಗಾರು, ನಿವೃತ್ತ ಸೈನಿಕರಿಗೆ ಆ ಸಮಿತಿಯಲ್ಲಿ ಅವಕಾಶ ನೀಡುವ ಮೂಲಕ
ಸಂಪೂರ್ಣ ರಾಜಕೀಯದಿಂದ ಮುಕ್ತಗೊಳಿಸಬೇಕು. ಬಿಸಿ ಊಟ, ಕ್ಷೀರಭಾಗ್ಯ, ಸೈಕಲ್ ವಿತರಣೆ
ಮೊದಲಾದ ಕಾರ್ಯಗಳಿಗೆ ಶಿಕ್ಷಕೇತರ ಸಿಬ್ಬಂದಿಯನ್ನು ಬಳಸಿಕೊಳ್ಳಬೇಕು. ಶಾಲೆಯ ದೈನಂದಿನ
ಲೆಕ್ಕ ಪತ್ರ, ವರದಿ ಮೊದಲಾದವುಗಳ ತಯಾರಿಗೆ ಪ್ರತ್ಯೇಕ ಸಿಬ್ಬಂದಿಯನ್ನು ಸರ್ಕಾರ
ನೇಮಿಸಬೇಕು. ಹಾಗಾದರೆ ಮಾತ್ರ ಶಿಕ್ಷಕರು ಒಂದಿಷ್ಟು ಒತ್ತಡದಿಂದ ಮುಕ್ತರಾಗಿ,
ನೆಮ್ಮದಿಯಿಂದ ಪಾಠ, ಬೋಧನೆಗಳಲ್ಲಿ ತೊಡಗಿಕೊಳ್ಳಬಹುದು. ಇಂದು ನಮ್ಮ ವ್ಯವಸ್ಥೆಯ
ಸುಧಾರಣೆಗೆ ಶಿಕ್ಷಕ ವರ್ಗದ ಹಿತ ಕಾಯುವ ಕೆಲಸವಾಗಬೇಕಿದೆ. ಶಿಕ್ಷಕರ ಸುತ್ತ ಒಂದು
ನೆಮ್ಮದಿಯ, ನಿರ್ಭಯ ವಾತಾವರಣವನ್ನುಂಟು ಮಾಡುವುದು ಇಂದಿನ ತುರ್ತು ಕೆಲಸ. ಹಾಗಾದಲ್ಲಿ
ಮಾತ್ರ ಶಿಕ್ಷಕರು ಯಾವುದೇ ಆತಂಕಗಳಿಲ್ಲದೇ ನಿರ್ಭಿಡೆಯಿಂದ ತಮ್ಮನ್ನು ತಾವು ಬೋಧನಾ
ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಮಾನಸಿಕ ನೆಮ್ಮದಿಯನ್ನೇ ಕಳೆದುಕೊಂಡ ಮನುಷ್ಯ ಹೇಗೆ
ತಾನೇ ತನ್ನ ಕಾರ್ಯದಲ್ಲಿ ಯಶಸ್ಸು ಗಳಿಸಿಯಾನು?-
No comments:
Post a Comment